ಬೆಂಗಳೂರು, ಆ 03 ಸ್ಯಾಂಡಲ್ ವುಡ್ ನಲ್ಲಿ ಪ್ರೀತಿ, ಪ್ರೇಮದ ತಳಹದಿಯಲ್ಲಿ ಹಲವು ಚಿತ್ರಗಳು ತೆರೆಕಂಡಿವೆ ಭೂಮಿ ಇರುವವರೆಗೂ ಪ್ರೀತಿ ಇರುವ ಕಾರಣ, ಇಂತಹ ಚಿತ್ರಗಳಿಗೆ ಎಂದಿಗೂ ಕೊರತೆಯಾಗದು ಈ ನಿಟ್ಟಿನಲ್ಲಿ, ಹದಿ ಹರಯದ ಹೆಣ್ಣು, ಗಂಡು ಪ್ರೀತಿಯ ಬಲೆಯಲ್ಲಿ ಸಿಲುಕಿದ ಸಂದರ್ಭದಲ್ಲಿ ನಾಯಕಿಯ ತಂದೆ ರಾವಣನಂತೆ ಖಳನಾದಾಗ ಮುಂದೇನು ಎಂಬ ಕುತೂಹಲಭರಿತ 'ಸ್ವೇಚ್ಛಾ' ಚಿತ್ರದ ಟೀಸರ್ ಬಿಡುಗಡೆಯಾಗಿದೆ
ನಾಯಕ ನಟ ಹಿತೇಶ್ (ಡಾಲರಿಂಗ್) ಜನ್ಮದಿನದಂದೇ ಟೀಸರ್ ಬಿಡುಗಡೆಯಾಗಿದೆ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಕ್ಲೈಮ್ಯಾಕ್ಸ್ ಬಾಕಿಯಿದೆ ಚಿಕ್ಕ ವಯಸ್ಸಿಗೇ ಪ್ರೀತಿಯ ಬಲೆಯಲ್ಲಿ ಸಿಲುಕುವ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಇದೊಂದು ಕ್ಯೂಟ್ ಲವ್ ಸ್ಟೋರಿ ಇರುವ ಚಿತ್ರ ಎಂದು ಹಿತೇಶ್ ಹೇಳಿ,ಕೊಂಡಿದ್ದಾರೆ
'ಸ್ವೇಚ್ಛಾ' ಚಿತ್ರದಲ್ಲಿ ಬಾಲನನಟಿ ಬೇಬಿ ಶ್ರೀ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾಳೆ ಅಮ್ಮಾ ಹೇಳುವ ಮಾತನ್ನು ಚಾಚೂ ತಪ್ಪದೆ ಪಾಲಿಸುವ ಮಗಳ ಪಾತ್ರ ನನ್ನದು ಎಂದು ಬೇಬಿ ಶ್ರೀ ತಿಳಿಸಿದ್ದಾಳೆ 5ನೇ ತರಗತಿ ವಿದ್ಯಾರ್ಥಿನಿಯಾದ ಈಕೆ ಹಿಂದಿ, ತಮಿಳು, ಕನ್ನಡ ಸೇರಿದಂತೆ 14 ಚಿತ್ರಗಳಲ್ಲಿ ನಟಿಸಿದ್ದು, 'ಅನಾಮಧೇಯ' ಕಿರುಚಿತ್ರ ಸೇರಿದಂತೆ ಅನೇಕ ಚಿತ್ರಗಳಿಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದು ವಿಶೇಷ
ಸ್ಟಾರ್ ಮಸ್ತ್ ವಿಕ್ಟರಿ ಆಟ್ರ್ಸ ಲಾಂಛನದಲ್ಲಿ ಮುರಹರಿ ರೆಡ್ಡಿ, ಮಸ್ತಾನ್ ಹಾಗೂ ಆನಂದ್ ಬಂಡವಾಳ ಹೂಡಿರುವ ಚಿತ್ರಕ್ಕೆ ಸುರೇಶ್ ರಾಜು ನಿರ್ದೇಶನ, ಪಿ ಎಸ್ ಸತೀಶ್ ಛಾಯಾಗ್ರಹಣವಿದೆ ಲೋಕಿ ಸಂಗೀತ ಸಂಯೋಜಿಸಿದ್ದು, ಸುಜನ್ ಸಂಕಲನದ ಹೊಣೆ ಹೊತ್ತಿದ್ದಾರೆ
ನಿರ್ಮಾಪಕ ಮುರಹರಿ ರೆಡ್ಡಿಯವರು ಚಿತ್ರಕ್ಕೆ ಬಂಡವಾಳ ಹೂಡುವುದರ ಜೊತೆಗೆ, ನಾಯಕಿಯ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ತಾರಾಗಣದಲ್ಲಿ ಡಾಲರ್ಲಿಂಗ್ ಹಿತೇಶ್, ಪವಿತ್ರಾ, ಮಾಲಾಶ್ರೀ, ಬೇಬಿ ಶ್ರೀ, ಮುರಹರಿ ರೆಡ್ಡಿ ಮೊದಲಾದವರಿದ್ದಾರೆ.