ಲೋಕದರ್ಶನ ವರದಿ
ಬೆಳಗಾವಿ, 26: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಮಹಿಳಾ ಸಬಲೀಕರಣ ಕೋಶದಿಂದ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವವಿದ್ಯಾಲಯದ ವಿದ್ಯಾಥರ್ಿನಿಯರಿಗಾಗಿ ದಿ. 26-02-2019 ರಿಂದ 09-03-2019 ವರೆಗೆ 10 ದಿನಗಳ ಕಾಲ ಜರುಗಲಿರುವ ಸ್ವಯಂ-ಭದ್ರತೆ ಕುರಿತಾದ ತರಬೇತಿ ಕಾಯರ್ಾಗಾರವನ್ನು ಶ್ರೀ ಜಿತೇಂದ್ರ ಸಿಂಗ್ ಅವರು ಉದ್ಘಾಟಿಸಿ, ವಿದ್ಯಾಥರ್ಿನಿಯರನ್ನು ಉದ್ದೇಶಿಸಿ ಮಾತನಾಡುತ್ತಾ, ಮಹಿಳೆಯರು ಮಾನಸಿಕ ಸಾಮಥ್ರ್ಯವನ್ನು ಹೊಂದಿದ್ದರೆ, ದೈಹಿಕವಾಗಿಯೂ ಸದೃಢತೆ ಹಾಗೂ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಲ್ಲರು. ಮಹಿಳೆಯರಿಗೆ ತಮ್ಮನ್ನು ತಾವು ಸಂರಕ್ಷಿಸಲಿಕ್ಕೆ ಕೌಶಲ್ಯ ಮತ್ತು ತಂತ್ರಜ್ಞಾನದಿಂದ ಆತ್ಮವಿಶ್ವಾಸವನ್ನು ಹೊಂದಲು ಸಾಧ್ಯ ಹಾಗೂ ಜಗತ್ತಿನ ಇತ್ತೀಚಿನ ದಿನಮಾನಗಳಲ್ಲಿ ಪುರಷರ ಜೊತೆಯಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಅನಗತ್ಯ ಪರಿಸ್ಥಿತಿಯಲ್ಲಿ ಸುರಕ್ಷಿತವಾಗಿ ಪಾರಾಗಬಹುದೆಂದು ತಿಳಿಸಿದರು.
ವಿದ್ಯಾಥರ್ಿನಿಯರಿಗೆ ಜೂಡೋ ತರಬೇತಿಗಾರರಾಗಿ ಆಗಮಿಸಿದ್ದ ಬೆಳಗಾವಿ ಶ್ರೀಮತಿ ತ್ರಿವೇಣಿ ಇವರು ಮಾತನಾಡುತ್ತಾ ಈ ರೀತಿಯ ಶಿಬಿರವನ್ನು ಆಯೋಜಿಸುವುದರಿಂದ ವಿದ್ಯಾಥರ್ಿನಿಯರಲ್ಲಿ ದೈಹಿಕ ಮತ್ತು ಮಾನಸಿಕ ಸದೃಢತೆ ಹಾಗೂ ಜಾಗೃತೆಯನ್ನು ಉತ್ತೇಜಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಹತ್ತು ದಿನಗಳ ಈ ಕಾಯರ್ಾಗಾರದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 50ಕ್ಕೂ ಹೆಚ್ಚು ವಿದ್ಯಾಥರ್ಿನಿಯರು ಭಾಗವಹಿಸುವರು. ಇದರಿಂದ ವಿದ್ಯಾಥರ್ಿನಿಯರ ಆತ್ಮವಿಶ್ವಾಸ ಹಾಗೂ ಮನೋಸ್ಥೈರ್ಯವು ಹೆಚ್ಚುತ್ತದೆ ಎಂದು ಮಹಿಳಾ ಸಬಲೀಕರಣ ಕೋಶದ ನಿದರ್ೇಶಕರಾದ ಪ್ರೊ. ಮನಿಶಾ ನೇಸರಕವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ಕೋಶದ ಸದಸ್ಯ ಕಾರ್ಯದಶರ್ಿಗಳಾದ ಪೂಜಾ ಹಲ್ಯಾಳ ಮತ್ತು ಡಾ. ಮಲ್ಲಮ್ಮ ರೆಡ್ಡಿ ಅವರು ಅತಿಥಿಗಳನ್ನು ಪರಿಚಯಿಸಿದರು. ಡಾ. ಯಾಸಮೀನ್ ನದಾಫ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ನಂದಿನಿ ದೇವರಮನಿ ವಂದನಾರ್ಪನೆಯನ್ನು ಸಲ್ಲಿಸಿದರು. ಮಹಿಳಾ ಸಬಲೀಕರಣ ಕೋಶದ ಸದ್ಯಸ್ಯರಾದ ಶ್ರೀಮತಿ, ಮಂಜುಳಾ ಜಿ.ಕೆ., ಶ್ರೀಮತಿ ಫರಜಾನಾ ಶಿಪಾಯಿ, ಶ್ರೀಮತಿ ಗೀತಾ ಪೋತದಾರ ಹಾಗೂ ವಿದ್ಯಾಥರ್ಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.