ಶಾಲಾ ಅವಧಿ ನೆನಪಿಸುವ 'ಮಸ್ತಿ ಕಿ ಪಾಠಶಾಲಾ' ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 07: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತ ಬೆಳಗಾವಿನ ಜೈನ್ ಕಾಲೇಜ್ ಆಫ್ ಎಂಸಿಎ, ಎಂಬಿಎ ಮಹಾವಿದ್ಯಾಲಯದಲ್ಲಿ ದಿ.06ರಂದು ಜೆಸಿಎಂಎಂ ಎಕ್ಸ್ಟ್ರಾವಗಾಂಝಾ1.0 ಎಂಬ ಕಾರ್ಯಕ್ರಮ ನಡೆಸಿತು. ಶಾಲಾ ಅವಧಿಯನ್ನು ನೆನಪಿಸುವ `ಮಸ್ತಿ ಕಿ ಪಾಠಶಾಲಾ' ಎಂಬ ಈ ಕಾರ್ಯಕ್ರಮದಲ್ಲಿ ವಿವಿಧ ಮಹಾವಿದ್ಯಾಲಯಗಳ 15 ತಂಡಗಳು ಪಾಲ್ಗೊಂಡಿದ್ದವು. ಈ ಕಾರ್ಯಕ್ರಮ ವಿದ್ಯಾಥರ್ಿಗಳಲ್ಲಿರುವ ಸಾಮಥ್ರ್ಯ, ಕೌಶಲ್ಯ, ನೃತ್ಯ ಸೇರಿದಂತೆ ವಿವಿಧ ಕಲೆಗಳ ಅಭಿವ್ಯಕ್ತಿಗೆ ವೇದಿಕೆಯಾಯಿತು. ಉತ್ತರ ಕನರ್ಾಟಕ ಜೆಜಿಐ ನಿದರ್ೇಶಕ ಪ್ರೊ. ಆರ್.ಜಿ. ಧಾರವಾಡ್ಕರ. ಬೆಳಗಾವಿ ನಿದರ್ೇಶಕ ಪ್ರೊ. ಉದಯಚಂದ್ರ ಮುಖ್ಯ ಅತಿಥಿಯಾಗಿದ್ದರು. ಪ್ರೊ. ಪ್ರಸಾದ ಕಪಿಲೇಶ್ವರಿ ಸ್ವಾಗತಿಸಿದರು.