'ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ

ಗದಗ 06:    ರೈತರು ತಮ್ಮ ಹೊಲಗಳ ರಕ್ಷಣೆ ಮಾಡುವುದರ ಜೊತೆಗೆ    ಬದು ನಿಮರ್ಾಣ ಮಾಡಿಕೊಳ್ಳಬೇಕು. ನೀರನ್ನು ಮಿತವಾಗಿ ಬಳಸಿಕೊಂಡು  ಬೆಳೆಯ  ಉತ್ಪಾದನೆ ಹೆಚ್ಚಿಸಬೇಕು. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗದಗ  ತಾ.ಪಂ ಸದಸ್ಯ ಶರಣಬಸನಗೌಡ್ರ ಎಸ್. ಪಾಟೀಲ್ ತಿಳಿಸಿದರು.   

ಗ್ರಾಮ ಪಂಚಾಯತ ಹತರ್ಿ ಇವರ ಸಹಯೋಗದಲ್ಲಿ   ವಾರ್ತಾ  ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಣವಿ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ  ಗ್ರಾಮ ಸಂಪರ್ಕ ಮತ್ತು ಗ್ರಾಮ ವಾಹಿನಿ ಕ್ಷೇತ್ರ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   ಅವರು ಕೆರೆಗಳನ್ನು  ಸ್ವಚ್ಚಗೊಳಿಸಬೇಕು. ಪರಿಸರ ಸಂರಕ್ಷಣೆ ಹಾಗೂ  ಸಕರ್ಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಗ್ರಾಮದ ಬೆಳವಣಿಗೆಗೆ ಕೆಲಸ ಮಾಡಬೇಕು  ಎಂದು ಶರಣಬಸವನಗೌಡ್ರ ಎಸ್ ಪಾಟೀಲ ನುಡಿದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಸದಸ್ಯ ಬಾಪು ಕಿಲೇದಾರ ಮಾತನಾಡಿ ಸಕರ್ಾರದ ಸವಲತ್ತುಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ರೈತರು ಭೂಮಿಯ ಫಲವತ್ತತೆ ಕಾಯ್ದುಕೊಳ್ಳಬೇಕು ಎಂದು ಮಾತನಾಡಿದರು.

       ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ಎಮ್. ಟಿ. ನೇಮರಾಜ ಪ್ರಾಸ್ತಾವಿಕವಾಗಿ ಮಾತನಾಡಿ ಕಿಸಾನ್ ಸಮ್ಮಾನ್ ಯೋಜನೆ, ಮೀನುಗಾರರ ಸಾಲ, ಹಾಗೂ ನೇಕಾರರ ಸಾಲ ಮನ್ನಾದ ಕುರಿತು ಸಾರ್ವಜನಿಕರಿಗೆ ಅರಿವನ್ನು ಮೂಡಿಸಿದರು. 

       ಇದೇ ಸಂದರ್ಭದಲ್ಲಿ ಮರಿತಾಮಪ್ಪ ಕುರ್ತಕೋಟಿ, ಮಾಬುಸಾಬ ಶಿರಹಟ್ಟಿ, ಈಶಪ್ಪ ನಾಗಲೂಟಿ, ಗುರುನಾಥ ಕಂಬಾರ, ವಾತರ್ಾ ಇಲಾಖೆಯ   ಎಸ್,ಎನ್ ಪೋಲಿಸ್ಗೌಡ್ರ, ಕೊತಬಾಳ ಬಸವ ಬಳಗ ಕಲಾ ತಂಡ ಹಾಗೂ ನೀಲಗುಂದದ ಜೈ ಭೀಮ ಗೀಗೀ ಪದ ಕಲಾ ತಂಡದವರು    ಉಪಸ್ಥಿತರಿದ್ದರು.   ಬಸವರಾಜ ಜಕ್ಕಮ್ಮನವರ ಸ್ವಾಗತಿಸಿದರು. ಈರಣ್ಣ ಯಾಳಗಿ ವಂದಿಸಿದರು.