'ಪ್ರವಾಹ ಸಂತ್ರಸ್ತರಿಗೆ ನೆರವು: ಯುದ್ದೋಪಾದಿಯಲ್ಲಿ ಕೆಲಸ ನಿರ್ವಹಿಸಿ'

ಗದಗ 19:  ಗದಗ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ವಸತಿ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿವಿಧ ಇಲಾಖೆಯ ಅಧಿಕಾರಿಗಳು  ಯುದ್ದೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು.  ನಿರ್ಲಕ್ಷ್ಯ ತೋರುವ  ಅಧಿಕಾರಿಗಳ ಮೇಲೆ  ನಿದರ್ಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು  ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಪಿ. ಬಳಿಗಾರ ಅವರು ಎಚ್ಚರಿಕೆ ನೀಡಿದರು.     

      ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಯಿಂದ ಮನೆಗಳ ಹಾಗೂ ಜೀವ  ಹಾನಿಯ  ಸವರ್ೇ ಕಾರ್ಯವನ್ನು ಕಂದಾಯ ಇಲಾಖೆ, ಗ್ರಾಮ ಲೆಕ್ಕಾಧಿಕಾರಿಗಳು,  ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತೀವ್ರ ರೂಪದಲ್ಲಿ ಜರುಗಿಸಬೇಕು.     ಪ್ರವಾಹ ಇಳಿದ  ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು  ಹರಡದಂತೆ  ಆಯಾ ಗ್ರಾಮ ಪಂಚಾಯತ್ ಅಧಿಕಾರಿ, ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯವರು ಮುಂಜಾಗ್ರತೆ ಕ್ರಮಗಳನ್ನು ಕೈಕೊಳ್ಳಬೇಕು.     ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯದ  ಔಷಧಿ ದಾಸ್ತಾನು ಇರುವಂತೆ ಕ್ರಮ ವಹಿಸಲು  ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಪಿ. ಬಳಿಗಾರ ಅವರು ತಿಳಿಸಿದರು.

     ಗ್ರಾಮಗಳ ಸ್ವಚ್ಛತೆಗೆ  ಮೊದಲ ಆದ್ಯತೆ ನೀಡಲು ಗ್ರಾಮ ಪಂಚಾಯತ್ ಅಧಿಕಾರಿ, ಸಿಬ್ಬಂದಿಗಳು ವಿವಿಧ ಇಲಾಖೆ ಹಾಗೂ ಗ್ರಾಮಸ್ಥರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ತಿಳಿಸಿದರು. ನೆರೆ ಸಂತ್ರಸ್ತ ಕುಟುಂಬಗಳಿಗೆ ವಾಸಿಸಲು ಶೆಡ್ಡುಗಳ ನಿಮರ್ಾಣ ಮಾಡಬೇಕು.  ಪ್ರವಾಹಕ್ಕೀಡಾದ ರಸ್ತೆಗಳ ತಕ್ಷಣವೇ ದುರಸ್ತಿ ಅಥವಾ ಬದಲಾವಣೆ ಮಾಡಿ ಜನರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಅವರು ಸೂಚಿಸಿದರು.   

       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿರುಪಾಕ್ಷರೆಡ್ಡಿ ಮಾದಿನೂರು ಅವರು ಮಾತನಾಡಿ  ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ  ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ , ವಾಂತಿ ಬೇಧಿ ರೋಗಗಳು ಉಲ್ಬಣಿಸುವ ಸಾಧ್ಯತೆಯಿದ್ದು ಮುಂಜಾಗ್ರತಾ ಕ್ರಮವಾಗಿ  ಆ ಪ್ರದೇಶಗಳಲ್ಲಿ  ಬ್ಲೀಚಿಂಗ್ ಪೌಡರ  ಹಾಗೂ ಫಾಗಿಂಗ ಮಾಡಲಾಗಿದೆ. ಜನರಿಗೆ ಕಡ್ಡಾಯವಾಗಿ ನೀರನ್ನು ಕಾಯಿಸಿ ಆರಿಸಿ ಸೂಚನೆ   ನೀಡಲಾಗಿದೆ ಎಂದರು.

     ನೆರೆ ಪೀಡಿತ ಗ್ರಾಮಗಳಲ್ಲಿಯ ಅರ್ಹ ಕೃಷಿ ಕುಟುಂಬಗಳಿಗೂ ಕೃಷಿ ಇಲಾಖೆಯು ಆದ್ಯತೆ ಮೇರೆಗೆ  ತಾಡಪತ್ರಿ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸದಸ್ಯ ಪಡಿಯಪ್ಪ ಪೂಜಾರ  ಆಗ್ರಹಿಸಿದರು.   

     ಪ್ರವಾಹದ ಸಂತ್ರಸ್ತರಿಗಾಗಿ ಗದಗ ಜಿ.ಪಂ. ಸದಸ್ಯರ ಒಂದು ತಿಂಗಳ ಗೌರವ ಧನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅಪರ್ಿಸಲು ಸಭೆಯಲ್ಲಿ ತೀಮರ್ಾನಿಸಲಾಯಿತು.

      ಪ್ರವಾಹ ಪೀಡಿತ ಪ್ರದೇಶಗಳ  ಮನೆಗಳ ಹಾನಿ, ಜೀವಹಾನಿ,   ಜಾನುವಾರುಗಳಿಗೆ   ಮೇವು ಹಾಗೂ ಪಶು ಆಹಾರ  ವಿತರಣೆ, ಶಿಥಿಲಾವಸ್ಥೆಯಲ್ಲಿನ ಶಾಲೆಗಳಿಗೆ ಪರ್ಯಾಯವಾಗಿ  ಶೆಡ್ಗಳಲ್ಲಿ ತಾತ್ಕಾಲಿಕವಾಗಿ  ಕಲಿಕಾ ಕೇಂದ್ರದ  ವ್ಯವಸ್ಥೆ, ರಸ್ತೆ ದುರಸ್ತಿ , ವಿದ್ಯುತ್  ವ್ಯವಸ್ಥೆ, ರಸ್ತೆ ಸಂಚಾರದಲ್ಲಿ ಮಾರ್ಗ  ಬದಲಾವಣೆ ಕುರಿತು ಸಭೆಯಲ್ಲಿ ಜಿ.ಪಂ. ಸದಸ್ಯರ ಚಚರ್ೆ ನಡೆಯಿತು.   

     ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ,  ಉಪಕಾರ್ಯದಶರ್ಿ ಡಿ.ಪ್ರಾಣೇಶ ರಾವ್,  ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ , ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ,  ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಈರಪ್ಪ ಈಶ್ವರಪ್ಪ ನಾಡಗೌಡ್ರ, ಜಿ.ಪಂ. ಸದಸ್ಯರುಗಳು,  ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.