ಲೋಕದರ್ಶನ ವರದಿ
ಗೋಕಾಕ: 'ಸಾವಳಗಿಯ ಜಗದ್ಗುರು ಪೀಠವು ಹಿಂದೂ, ಮುಸ್ಲಿಂ ಸಾಮರಸ್ಯತೆ ಮತ್ತು ದಿನ್-ಹರ್ರ್ ಸಂದೇಶದ ಮೂಲಕ ಸಾಮರಸ್ಯದ ಸಾರವನ್ನು ವಿಶ್ವಕ್ಕೆ ಸಾರಿದೆ' ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ತಾಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ದಸರಾ ಮಹೋತ್ಸವದಲ್ಲಿ ಗುರುವಾರ ಸನ್ನಿಧಿಯವರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಸದ್ಯ ವಿಶ್ವಮಟ್ಟದಲ್ಲಿ ಶಾಂತಿ, ಸೌಹಾರ್ದತೆಯ ಅವಶ್ಯಕತೆ ಇದೆ ಎಂದರು.
ಶಿವಲಿಂಗೇಶ್ವರರು ಹಾಗೂ ಬಂದೇನವಾಜರು ಸಾಧಿಸಿದ ಸೌಹಾರ್ದತೆಯ ಸಂದೇಶವನ್ನು ವಿದೇಶದಿಂದ ಆಗಮಿಸಿದ್ದ ಮಹಮದ್ ಗಾವಾನ್ರು ಅಳವಡಿಸಿಕೊಂಡರಲ್ಲದೆ ಸಾವಳಗಿಯಲ್ಲಿಯ ನಡೆದ ಸಮನ್ವತೆಯ ಪವಾಡವನ್ನು ಇಡೀ ವಿಶ್ವವು ನೋಡುವಂತಾಗಿದೆ. ನನ್ನ ಇತ್ತಿಚಿನ ಮಹ್ಮದ್ ಗಾವಾನ್ ನಾಟಕ ರಚನೆಗೆ ಅದು ನನಗೆ ಪ್ರೇರಣೆ ನೀಡಿದೆ ಎಂದರು.
ನನ್ನ ವಿಶ್ವಮಾನ್ಯ ಬೆಳವಣಿಗೆಗೆ ಸಾವಳಗಿಯ ಶಿವಲಿಂಗೇಶ್ವರ ಸ್ವಾಮೀಗಳ ಕೃಪೆ ಇದೆ. ಮಠದ ಅನ್ನ ತಿಂದು ಬೆಳೆದವನು. ನನ್ನ ಮೊದಲ ಧನ್ಯತೆಯು ಸಾವಳಗಿ ಪೀಠಕ್ಕೆ ಸಲ್ಲುತ್ತದೆ. ಪ್ರತಿ ವರ್ಷವೂ ತಪ್ಪದೆ ಸಾವಳಗಿಯ ಜಗದ್ಗುರುಗಳ ದರ್ಶನ ಮಾಡುವ ಭಾಗ್ಯವನ್ನು ನಾನು ಎಂದಿಗೂ ತಪ್ಪಿಸಿಕೊಂಡಿಲ್ಲ ಎಂದರು.
ಕನರ್ಾಟಕ ರಾಜ್ಯ ಸಾರ್ವಜನಿಕ ಕೇಂದ್ರ ಗಂಥಾಲಯ ನಿದರ್ೇಶಕ ಸತೀಶಕುಮಾರ ಹೊಸಮನಿ ಮಾತನಾಡಿ ಸಾಹಿತ್ಯದ ಬೆಳವಣಿಗೆಯಲ್ಲಿ ಉತ್ತರ ಕನರ್ಾಟಕದ ಕೊಡುಗೆ ಅಪೂರ್ವವಾಗಿದೆ. ಯುವ ಸಾಹಿತಿಗಳು ಬೆಳೆಯಬೇಕು ಎಂದರು.
ಸಾನ್ನಿಧ್ಯವಹಿಸಿದ್ದ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಡಾ. ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.
ನಿಚ್ಚಣಿಕೆಯ ಪಂಚಾಕ್ಷರಿ ಸ್ವಾಮೀಜಿ ಶ್ರೀದೇವಿ ಪುರಾಣವನ್ನು ಹೇಳಿದರು. ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು. ಯಶೋಧಾ ಮರಬಸನ್ನವರ ನಿರೂಪಿಸಿದರು.