ಲೋಕದರ್ಶನ ವರದಿ
ಅಥಣಿ 27: ಸ್ಕೌಟ್ & ಗೈಡ್ ಒಂದು ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಸ್ವಮನಸ್ಸಿನಿಂದ ಸೇವೆ ಗೈಯುವ ಮನೋಭಾವನೆ ಬೆಳೆಸುವಂತಹ ಕಾರ್ಯ ಈ ಸಂಸ್ಥೆಯದ್ದಾಗಿದೆ ಎಂದು ಕೆ ಎಲ್ ಇ ಸಂಸ್ಥೆಯ ಸಿ.ಬಿ.ರಣಮೋಡೆ ಶಾಲೆಯ ಪ್ರಾಚಾರ್ಯ ಎಮ್.ಎಸ್.ಹಿರೇಮಠ ಹೇಳಿದರು.
ಕೆ.ಎಲ್.ಇ ಸಂಸ್ಥೆಯ ಸಿ.ಬಿ.ರಣಮೋಡೆ ಶಾಲೆಯಲ್ಲಿ ಬೇಡನ್ ಪಾವೆಲ್ ಅವರ ಜನ್ಮ ದಿನದ ನಿಮಿತ್ಯ ಎರಡು ದಿನಗಳ ಕಾಲ ನಡೆದ ಶಿಬಿರದಲ್ಲಿ ಮಾತನಾಡುತ್ತಿದ್ದರು. ಮಕ್ಕಳು ಹೊರ ಜಗತ್ತಿನೊಂದಿಗೆ ಸಹಜವಾಗಿ ಬೆರೆಯುವಂತಹ, ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವಂತಹ ಗುಣಗಳನ್ನು ಸ್ಕೌಟ್ ಹಾಗೂ ಗೈಡ್ಸಗಳಲ್ಲಿ ಭಾಗವಹಿಸುವ ಮೂಲಕ ಬೆಳೆಸಿಕೊಳ್ಳುತ್ತಾರೆ ಎಂದ ಅವರು ಶಾಲಾ ಅಭ್ಯಾಸದೊಂದಿಗೆ ಇಂತಹ ಚಟುವಟಿಕೆಗಳಲ್ಲಿಯೂ ಸಹ ಭಾಗವಹಿಸಬೇಕೆಂದರು.
ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಮ್.ನೇಮಗೌಡ ಚಾಲನೆ ನೀಡಿ ಮಕ್ಕಳಲ್ಲಿ ಹೊಸ ಹುರುಪು, ಹೊಸ ಆಲೋಚನೆಗಳು, ಏನ್ನಾದರೂ ಮಾಡುವಂತಹ ಛಲ ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲ ಬೆಳೆಸಿಕೊಳ್ಳಲು ಸಾಧ್ಯವಾಗುವುದು ಎಂದರು.
ಸ್ಕೌಟ್ & ಗೈಡ್ ನಿಯಮಗಳು ಪ್ರಾರ್ಥನಾ ಗೀತೆ, ಧ್ವಜಗೀತೆ ರೋಪ್ ನಾಟ್ಗಳ ಬಗ್ಗೆ ಹಾಗೂ ಅನೇಕ ವಿಷಯಗಳನ್ನು ಕುರಿತು ಈ ಸಂದರ್ಭದಲ್ಲಿ ಹೇಳಿಕೊಡಲಾಯಿತು. ಕೊನೆಯ ದಿನ ಸರ್ವಧರ್ಮ ಪ್ರಾರ್ಥನೆಯನ್ನು ಮಾಡಲಾಯಿತು. ಮಕ್ಕಳು ಬಹಳ ಉತ್ಸುಕತೆಯಿಮದ ಭಾಗವಹಿಸಿ, ಶಿಬಿರವನ್ನು ಯಶಸ್ವಿಗೊಳಿಸಿದರು. ಬಿ.ಎ.ಖೋತ, ಎಸ್.ಎಸ್.ರೇಣುಕಾ, ಎ.ವೈ.ಹೈಬತ್ತಿ, ಎ.ಎಮ್.ಡಾಂಗೆ, ಎಸ್.ಎ.ವಾಲಿ ಹಾಗೂ ಎ.ಎಸ್.ಓ.ಸಿ(ಎಸ್)ಗಳಾದ ದಿ.ಬಿ.ಅತ್ತಾರ ಇವರು ಮುಖ್ಯ ತರಬೇತುದಾರರಾಗಿ ಆಗಮಿಸಿದ್ದರು. ಅದೇ ರೀತಿ ಅವರಿಗೆ ಸಹಾಯಕರಾಗಿ ಶಾಲಾ ಘಟಕದ ಸ್ಕೌಟ್ & ಗೈಡ್ ಮಾಸ್ಟರ್ಗಳು ಕಾರ್ಯನಿರ್ವಹಿಸಿದರು. ಶಾಲಾ ವಿದ್ಯಾಥರ್ಿನಿಯಾದ ರಾಫಿಯಾ ನಾಲ್ಬಂಧ ನಿರೂಪಿಸಿ ವಂದಿಸಿದಳು.