ಲೋಕದರ್ಶನ ವರದಿ
ಮೂಡಲಗಿ 13: ವಿದ್ಯಾಥರ್ಿ ದಿಸೆಯಿಂದಲೆ ಸ್ಪಧರ್ಾತ್ಮಕತೆ, ಆಚಾರ, ವಿಚಾರ, ನೈತಿಕ ಮೌಲ್ಯಗಳು, ಮಹಾತ್ಮರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಭವ್ಯ ಭವಿಷ್ಯತ್ತಿನ ಯುವ ಪ್ರಜೆಗಳಾಗಿ ನಿಮರ್ಾಣ ಹೊಂದುವದು ತಮ್ಮಲ್ಲಿಯೇ ಇರುವದು ಎಂದು ಗೋಕಾಕ ಮೂಡಲಗಿ ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
ಅವರು 'ಅಧಿಕಾರಿಗಳ ನಡೆ ಶಾಲೆ ಕಡೆ' ಕಾರ್ಯಕ್ರಮದ ನಿಮಿತ್ಯ ಬುಧವಾರ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ, ವಡೇರಹಟ್ಟಿ, ಹುಣಶ್ಯಾಳ ಪಿವಾಯ್ ಗ್ರಾಮಗಳ ಸರಕಾರಿ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ, ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳಿಗೆ ಪ್ರೇರಣೆ ನೀಡಿದರು. ಗುಣಮಟ್ಟದ ಕಲಿಕೆ ಜೊತೆಗೆ ಮಾನಸಿಕ ದೈಹಿಕವಾಗಿ ಪೂರಕವಾಗುವ ನಿಟ್ಟಿನಲ್ಲಿ ಫಲಪ್ರದ ಶಿಕ್ಷಣವಾಗಬೇಕು.
ಉತ್ತಮ ಸಮಾಜ ನಿಮರ್ಾಣ ಮಾಡುವಲ್ಲಿ ಯುವ ಪೀಳಿಗೆಯ ಪಾತ್ರ ಮಹತ್ವದ್ದಾಗಿದೆ. ಇಂದಿನ ಮಕ್ಕಳೆ ದೇಶದ ಭವಿಷ್ಯವಿದ್ದು ಅವರನ್ನು ಸವರ್ೋತೊಮುಖವಾಗಿ ನಿಮರ್ಾಣ ಕಾರ್ಯದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಈಗಾಗಲೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮೂಡಲಗಿ ತಾಲೂಕು ಶೈಕ್ಷಣಿಕ ರಂಗದಲ್ಲಿ ವಿಶೇಷ ಸ್ಥಾನ ಹೊಂದಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮವಾಗಿ ಸುಲಲಿತವಾಗಿ ಜರುಗುವ ನಿಟ್ಟಿನಲ್ಲಿ ಶಿಕ್ಷಕರ ಹಾಗೂ ವಿದ್ಯಾಥರ್ಿಗಳ ಪ್ರಯತ್ನ ಅತ್ಯಾವಶ್ಯಕವಾಗಿದೆ.
ಸಕಾರಾತ್ಮಕ ಭಾವನೆಗಳೊಂದಿಗೆ ಪರೀಕ್ಷೆಗೆ ತಯಾರಾಗಿ. ಪರೀಕ್ಷಾ ಭಯ ಹಾಗೂ ಯಾವುದೇ ರೀತಿಯ ಋಣಾತ್ಮಕವಾಗಿ ಚಿಂತಿಸದೆ, ಓದಿನ ಕಡೆ ಹೆಚ್ಚು ಗಮನ ಕೊಟ್ಟು ಶಿಕ್ಷಕರು ಹಾಗೂ ಹಿರಿಯ ವಿದ್ಯಾಥರ್ಿಗಳ ಮಾರ್ಗದರ್ಶನದಂತೆ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶಾಲಾ ಮೈದಾನ, ಕಂಪೌಂಡ, ಶೌಚಾಲಯ, ಬಿಸಿಯೂಟದ ಕೊಠಡಿ, ಶಾಲಾ ಕಟ್ಟಡಗಳನ್ನು, ಮದ್ಯಾಹ್ನ ಉಪಹಾರ ವಿಕ್ಷೀಸಿ ಅಗತ್ಯ ಸಲಹೆ ಮಾರ್ಗದರ್ಶನ ನೀಡಿದರು.
ಮೂಲಭೂತ ಸೌಲಭ್ಯಗಳನ್ನು ಪಂಚಾಯತ ರಾಜ್ ಇಲಾಖೆಯಿಂದ ಸಿಗುವ ಸೌವಲತ್ತುಗಳನ್ನು ದೊರಕಿಸಿಕೊಡುವ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಗೋಕಾಕ ಟಿ.ಎ.ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಮುಖ್ಯೋಪಾಧ್ಯಾಯ ಜಿ.ಎಲ್.ಕೋಳಿ, ಎನ್.ಬಿ ನಿಪ್ಪಾಣಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸದಾಶಿವ ರೂಗಿ, ಎಸ್.ಎನ್ ಮಾರಿಹಾಳ, ಪಿ.ಕೆ ಹಾದಿಮನಿ, ರಮೇಶ ಯಡಹಳ್ಳಿ, ಎಮ್.ಎಮ್ ಬಂಬಲವಾಡ, ಕೆ.ಎಮ್ ಅರಬಾಂವಿ, ಶೈಲಾ ಹೂಗಾರ ಹಾಗೂ ಶಾಲಾ ಶಿಕ್ಷಕರು ವಿದ್ಯಾಥರ್ಿಗಳಿದ್ದರು.