‘ಮುಲಾಕತ್ ಸೇ ನ್ಯಾಯತಕ್’ ಉಚಿತ ಕಾನೂನು ಮಾಹಿತಿ ಹಾಗೂ ನೆರವು ಸಹಾಯ ಕೇಂದ್ರ
'Mulakat Se Nyayatak' is a free legal information and assistance help center
ಲೋಕದರ್ಶನ ವರದಿ
ಹಾವೇರಿ 18: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದನ್ವಯ ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾರಾಗೃಹದ ಸಹಯೋಗದಲ್ಲಿ ಜಿಲ್ಲಾ ಕಾರಾಗೃಹದ ಹೊರಗಡೆ ಆವರಣದಲ್ಲಿ ‘ಮುಲಾಕತ್ ಸೇ ನ್ಯಾಯತಕ್’ ಎಂಬ ಘೋಷವಾಕ್ಯದಡಿ ಉಚಿತ ಕಾನೂನು ಅರಿವು ಹಾಗೂ ನೆರವು ಕೇಂದ್ರ ಆರಂಭಿಸಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶ್ರೀಶೈಲಜಾ ಎಚ್.ವಿ. ಅವರು ತಿಳಿಸಿದ್ದಾರೆ.
ಈ ಕೇಂದ್ರದಲ್ಲಿ ಬಂಧಿನಿವಾಸಿಗಳ ಸಂಬಂಧಿಕರು, ಬಂಧಿನಿವಾಸಿಗಳನ್ನು ಭೇಟಿಯಾಗಲು ಬಂದಂತಹ ಅವರ ಹಿತೈಶಿಗಳು, ಬಂದಿಗಳು, ಆರೋಪಿಗಳು ಉಚಿತ ಕಾನೂನು ಮಾಹಿತಿ ಹಾಗೂ ನೆರವು ಪಡಯಬಹುದು. ಈ ಕೇಂದ್ರಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲ ವಿ.ಎಂ.ನಾಡಗೌಡ್ರ, ಅರೆಕಾಲಿಕ ಸ್ವಯಂ ಸೇವಕರಾದ ಚಂದ್ರಶೇಖರ ಮಾಳಗಿ, ಗಂಗಾಧರ ನಾವೆ, ಜಿಲ್ಲಾ ಕಾರಾಗೃಹದ ವಾರ್ಡ್‌ನ್ ವೃಷಭ ಖ್ಯಾತನವರ ಅವರನ್ನು ನೇಮಕ ಮಾಡಲಾಗಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 12-30ರವರೆಗೆ ಹಾಗೂ ಸಾಯಂಕಾಲ 4 ರಿಂದ 5-30ರವರೆಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 