'ಮದರ್ ಹಬ್ ಕಾರ್ಯಕ್ರಮ

ಕಂಪ್ಲಿ04.  ಮಕ್ಕಳ  ಪಾಲನೆ ಪೋಷಣೆ  ಜೊತೆಗೆ ಸರ್ವತೋಮುಖ ಬೆಳವಣಿಗೆಗೆ  ತಾಯಂದಿರ ಪಾತ್ರ ಪ್ರಮುಖವಾಗಿದೆ ಎಂದು ಹರಪನಹಳ್ಳಿಯ ಸಂಪ್ರದಾಯ ಟ್ರಸ್ಟ್ ಅಧ್ಯಕ್ಷ ಚೇತನ್ ಹೇಳಿದರು. ಇಲ್ಲಿನ ಬ್ರೈಟ್ವೇ ಶಾಲೆಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಾಯಂದಿರ ಪಾತ್ರ ಕುರಿತು, ತಾಯಂದಿರಲ್ಲಿ ಜಾಗೃತಿ ಮೂಡಿಸಲು ಮಂಗಳವಾರ ಹಮ್ಮಿಕೊಂಡ 'ಮದರ್ ಹಬ್(ಕೇಂದ್ರೀಕೃತ ತಾಯಿ)ಕಾರ್ಯಕ್ರಮಕ್ಕೆ ಚಾಲನೆ ನೀಡಿ,  ತಾಯಂದಿರು  ಮಕ್ಕಳ ಮನೋಭಾವನೆ ತಿಳಿಯರಿ ತಾಯಿ ಮೊದಲ ಗುರು ಮೌಲ್ಯಗಳ ಜಾಗೃತಿ ಮೂಡಿಸಬೇಕು. 

ಮಗು ಕೇವಲ ಅಂಕಗಳಿಸುವ ಯಂತ್ರವನ್ನಾಗಿ ರೂಪಿಸದೆ ಸಂಸ್ಕೃತಿ, ಆಚಾರ, ವಿಚಾರ ಮತ್ತು ಮಾನವೀಯ ಮೌಲ್ಯಗಳ ಉತ್ತಮ ಸಂಸ್ಕೃತರೂಪಿಸುವಲ್ಲಿ ತಾಯಂದಿರು ತ್ಯಾಗ ಮನೋಭಾವನೆ ಅಳವಡಿಸಿಕೊಳ್ಳಬೇಕಾಗಿದೆ. ತಾಯಂದಿರು ಮಕ್ಕಳೊಂದಿಗೆ ಉತ್ತಮ ಭಾಂದವ್ಯದಿಂದ ಇರಬೇಕುಎಂದು ಹೇಳಿದರು. ತಾಯಂದಿರ ಜೊತೆ ಮಕ್ಕಳ ಪಾಲನೆ, ಪೋಷಣೆ ಕುರಿತು ಸಂವಾದಿಸಿದರು. ಬ್ರೈಟ್ವೇ ಶಾಲೆಯ ಕಾರ್ಯದಶರ್ಿ ಉಗಾದಿ ಶಿವರಾಜ್ ಅಧ್ಯಕ್ಷತೆವಹಿಸಿ ಮಾತನಾಡಿ, ಪೋಷಕರು, ಶಿಕ್ಷಕರು ಮತ್ತು ಆಡಳಿತ ಮಂಡಳಿಗಳ ಮಧ್ಯೆ ಸಮನ್ವಯತೆ ಕಾಯ್ದುಕೊಂಡಾಗ ಮಾತ್ರ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ. 

ಮಕ್ಕಳ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಆರೋಗ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.ಪ್ರಮುಖರಾದ ಅರುಣ ಸತ್ಯನಾರಾಯಣರಾವ್, ವಿನುತಾ ಶಿವರಾಜ್, ವೃಂದಾ ವೆಂಕಟೇಶ್, ಮುಖ್ಯಗುರು ವಿಜಯಲಕ್ಷ್ಮಿ, ಶಿಕ್ಷಕರಾದ ಬಸವರಾಜ, ಶ್ಯಾಂಸುಂದರರಾವ್, ರೋಷನ್ ಜಮೀರ್, ದುರ್ಗಾಲಕ್ಷ್ಮಿ, ಅನುಪಮ, ಸತ್ಯವತಿ, ವಿನುತಾ ಇತರರಿದ್ದರು. ಮಕ್ಕಳ ತಾಯಂದಿರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.