ಲೋಕದರ್ಶನ ವರದಿ
ಅಥಣಿ 06: ಈ ಜಗತ್ತಿನಲ್ಲಿ ಬದುಕನ್ನು ಕುರಿತಾಗಿ ಅನೇಕ ಸಂತರು, ದಾರ್ಶನಿಕರ ಮಾತುಗಳು, ಉಕ್ತಿಗಳು, ಅವರು ಬದುಕಿ ತೋರಿದ ಜೀವನ ಎಲ್ಲವೂ ನಮಗೆ ಆದರ್ಶವಾಗಿರುವಂತೆ, ನಾವುಗಳು ಕೂಡ ನಮ್ಮ ಮುಂದಿನ ತಲೆಮಾರಿಗೆ ಆದರ್ಶ ಹಾಗೂ ಮಾರ್ಗದರ್ಶನವಾಗುವಂತ ಬದುಕನ್ನು ಬದುಕಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಚಿಂತಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಕರೆ ನೀಡಿದರು.
ಇಲ್ಲಿಯ ಗಚ್ಚಿನಮಠದ ಪ್ರಸಕ್ತವರುಷದ ಶರಣ ಸಂಸ್ಕೃತಿ ಉತ್ಸವ, ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ``ಬದುಕು ಮತ್ತು ಅನಾವರಣ'' ಕುರಿತಾಗಿ ಉಪನ್ಯಾಸ ನೀಡುತ್ತ, ಬಸವಾದಿ ಶರಣರು ಕಟ್ಟಬಯಿಸಿದಂತೆ ಸಾತ್ವಿಕ ನೆಲೆಯ ತಾಕರ್ಿಕ ಸಮಾಜವನ್ನು ಕಟ್ಟಬೇಕು. ಅದಕ್ಕಾಗಿ ಪ್ರಾಣಿ ಜೀವಿಗಳಲ್ಲಿಯೇ ಭಿನ್ನವಾಗಿ ಬುದ್ದಿವಂತರೆಂದೆನಿಸಿಕೊಂಡವರು ನಾಲ್ಕು ದಿನ ಲೇಸಾಗಿ ಬದುಕಬೇಕು ಎಂದರು.
ಸ್ಪಧರ್ಾತ್ಮಕ ತರಬೇತಿ ಕೇಂದ್ರ ಬೆಂಗಳೂರಿನ ನಿದರ್ೇಶಕರಾದ ಡಾ.ಕೆ.ಎಂ ಸುರೇಶ ಅವರು ಮಾತನಾಡಿ ಮಕ್ಕಳು ಹೆತ್ತವರನ್ನು, ಶಿಕ್ಷಕರನ್ನು ಅನುಸರಿಸುತ್ತಿರುತ್ತಾರೆ ಆದ್ದರಿಂದ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ ಎಂದರು. ಬೆಂಗಳೂರು ಕೆ.ಪಿ.ಟಿ.ಸಿಎಲ್ ನಿದರ್ೇಶಕ ಕೆ.ಎಂ. ಕುಲಕಣರ್ಿ ಮಾತನಾಡಿದರು. ಮಾಜಿ ಶಾಸಕ ಲಕ್ಷ್ಮಣ ಸವದಿ, ಪುರಸಭಾ ಅಧ್ಯಕ ರಾವಸಾಬ ಐಹೊಳೆ, ಚಿಕ್ಕೋಡಿ ಧೂದಗಂಗಾ ಸಕ್ಕರೆ ಕಾಖರ್ಾನೆಯ ಎಂ.ಡಿ. ರವಿಕುಮಾರ ಪಟ್ಟಣಶೆಟ್ಟಿ, ಕೃಷ್ಣಾ ಸಕ್ಕರೆ ಕಾಖರ್ಾನೆ ಅಧ್ಯಕ್ಷ ಪರಪ್ಪಣ್ಣಾ ಸವದಿ, ಪೂನಾ ಉದ್ಯಮಿ ಚಂದ್ರಶೇಖರ ಗಾಣಿಗೇರ, ಅಭಿಯಂತರ ಅಮರ ದುರ್ಗಣ್ಣವರ, ಮೊದಲಾದವರು ಉಪಸ್ಥಿತರಿದ್ದು ಸನ್ಮಾನ ಸ್ವೀಕರಿಸಿದರು.
ವಿಶೇಷವಾಗಿ ನಗರವನ್ನು ಕಸಗೂಡಿಸುವ ಪುರಸಭಾ ಮಹಿಳಾ ಕಾಮರ್ಿಕರನ್ನು ಶ್ರೀಮಠದಿಂದ ಗೌರವಿಸಲಾಯಿತು. ಚಂದ್ರಶೇಖರ ಯಲ್ಲಟ್ಟಿ, ಶಿವಾನಂದ ದಿವಾನಮಳ, ರಾಮನಗೌಡ ಪಾಟೀಲ, ಮನೋಹರ ಹಂಜಿ ಮೊದಲಾದವರು ಉಪಸ್ಥಿತರಿದ್ದರು.
ದಿವ್ಯಸಾನಿಧ್ಯವನ್ನು ಧಾರವಾಡ ಮುರುಘಾಮಠದ ಪೂಜ್ಯ ಮಲ್ಲಿಕಾಜರ್ುನ ಸ್ವಾಮೀಜಿಗಳು ವಹಿಸಿ ಅಥಣಿ ಗಚ್ಚಿನಮಠದ ಪರಂಪರೆ ತಿಳಿಸಿದರು. ನೇತೃತ್ವವನ್ನು ಗಚ್ಚಿನಮಠದ ಪೂಜ್ಯ ಶಿವಬಸವ ಸ್ವಾಮೀಜಿ ವಹಿಸಿದ್ದರು. ವಿವಿಧ ಸಮಾಜ ಸಂಘಟನೆಗಳಿಂದ ಸ್ವಾಮೀಜಿಯವನ್ನು ಸನ್ಮಾನಿಸಲಾಯಿತು.
ಸರಗಮಪ ಪ್ರಶಸ್ತಿ ವಿಜೇತ ಚನ್ನಪ್ಪ ಹುದ್ದಾರ ಹಾಗೂ ಕನ್ನಡ ಗಾನಕೋಗಿಲೆ ಅಖಿಲಾ ಪಜಮಣ್ಣು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕೆ.ಎಲ್. ಇ ಆಂಗ್ಲ ಮಾಧ್ಯಮ ಹಾಗೂ ತುಳಜಾ ಭವಾನಿ ಶಾಲಾ ಮಕ್ಕಳಿಂದ ನೃತ್ಯ ನಡೆದವು. ಶಿವು ಸವದಿ ಅವರು ಸ್ವಾಗತಿಸಿದರು. ಚಿತ್ರದುರ್ಗದ ಸಿ.ವಿ.ಸಾಲಿಮಠ ನಿರೂಪಿಸಿದರು.