ವರಮಹಾಲಕ್ಷ್ಮಿ ಹಬ್ಬಕ್ಕೆ 'ಕುರುಕ್ಷೇತ್ರ' : ಆನ್ ಲೈನ್ ಬುಕ್ಕಿಂಗ್ ಆರಂಭ

ಬೆಂಗಳೂರು, ಆ 05  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ 'ಕುರುಕ್ಷೇತ್ರ' ಇದೇ 9 ರಂದು ವರಮಹಾಲಕ್ಷ್ಮಿ ಹಬ್ಬದ ದಿನ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಲಿದೆ  ಆಗಸ್ಟ್ 15ರಂದು ಮಲಯಾಳಂ ಹಾಗೂ ತಮಿಳು ಅವತರಣಿಕೆ ತೆರೆಗೆ ಬರಲಿದೆ  ಮುಂಬೈಯಲ್ಲಿ ವರುಣನ ಅಬ್ಬರ ಇರುವ ಕಾರಣ, ಮೂರು ವಾರಗಳ ಬಳಿಕ ಹಿಂದಿ ಭಾಷೆಯಲ್ಲಿ ಚಿತ್ರದ ಬಿಡುಗಡೆಗೆ ನಿರ್ಧರಿಸಲಾಗಿದೆ  ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಒಟ್ಟು 3 ಸಾವಿರ ಚಿತ್ರಮಂದಿಗಳಲ್ಲಿ ಮುನಿರತ್ನ 'ಕುರುಕ್ಷೇತ್ರ' ಪ್ರೇಕ್ಷಕರ ಮನರಂಜಿಸಲು ಸಜ್ಜಾಗಿದೆ 

ಶನಿವಾರದಿಂದಲೇ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೆ ಚಾಲನೆ ನೀಡಲಾಗಿದೆ 2ಡಿ ಹಾಗೂ 3ಡಿ ರೂಪದಲ್ಲಿ ಚಿತ್ರವನ್ನು ಕಣ್ತುಂಬಿಕೊಳ್ಳಬಹುದಾಗಿದೆ   

 ವೃಷಭಾದ್ರಿ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ  ಮಹಾಭಾರತದಲ್ಲಿ ಪ್ರತಿಯೊಂದು ಪಾತ್ರವೂ ತನ್ನದೇ ಆದ ತೂಕ ಹೊಂದಿರುವ ಕಾರಣ, ಚಿತ್ರದಲ್ಲಿಯೂ ಪ್ರತಿಯೊಬ್ಬ ಕಲಾವಿದರಿಗೂ ಆದ್ಯತೆ ನೀಡಲಾಗಿದೆ  ಹೀಗಾಗಿ 70ರ ದಶಕದಿಂದ ಇಲ್ಲಿಯವರೆಗಿನ ಪ್ರಮುಖ ಕಲಾವಿದರನ್ನು ಚಿತ್ರದಲ್ಲಿ ಕಾಣಬಹುದಾಗಿದೆ 

ದುರ್ಯೋಧನ ಅಥವಾ ಸುಯೋಧನನಾಗಿ ದರ್ಶನ್ ತೂಗುದೀಪ, ಭಾನುಮತಯಾಗಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ  ಚಕ್ರವ್ಯೂಹವನ್ನು ಬೇಧಿಸಲಾಗದೆ ಬಸವಳಿಯುವ ಅಭಿಮನ್ಯುವಾಗಿ ನಿಖಿಲ್ ಕುಮಾರಸ್ವಾಮಿ, ದುರ್ಯೋಧನನ ಪಾತ್ರದಲ್ಲಿ ಶಶಿಕುಮಾರ್ ಮಿಂಚಿದ್ದಾರೆ 

ಶಲ್ಯ ಮಹಾರಾಜನಾಗಿ ಖ್ಯಾತ ನಿರ್ಮಾಪಕ, ನಟ ಹಾಗೂ 'ಕುರುಕ್ಷೇತ್ರ' ಚಿತ್ರದ ವಿತರಕ ರಾಕ್ ಲೈನ್ ವೆಂಕಟೇಶ್, ಭೀಮನ ಪಾತ್ರದಲ್ಲಿ ಡ್ಯಾನಿಶ್ ಅಕ್ತರ್, ಅರ್ಜುನನಾಗಿ ಸೋನು ಸೂದ್, ಪಂಚ ಪಾಂಡವರ ಪತ್ನಿ ದ್ರೌಪದಿಯಾಗಿ ನಟಿ ಸ್ನೇಹಾ ಕಾಣಿಸಿಕೊಂಡಿದ್ದಾರೆ. ನನಾಗಿ ಸೋನು ಸೂದ್, ಪಂಚ ಪಾಂಡವರ ಪತ್ನಿ ದ್ರೌಪದಿಯಾಗಿ ನಟಿ ಸ್ನೇಹಾ ಕಾಣಿಸಿಕೊಂಡಿದ್ದಾರೆ.