ಲೋಕದರ್ಶನ ವರದಿ
ಬೆಳಗಾವಿ, 2:ಭಾರತೀಯ ಜನತಾ ಪಾಟರ್ಿಯ ರಾಷ್ಟ್ರೀಯ ಅಧ್ಯಕ್ಷರಾದ ಅಮೀತ ಶಾ ಜೀ ಹಾಗೂ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ರವರು ಕರೆಕೊಟ್ಟಂತಹ "ವಿಜಯ ಸಂಕಲ್ಪ ಮೋಟರ್ ಬೈಕ್ ರ್ಯಾಲಿ ಈ ಕಾರ್ಯಕ್ರಮದಡಿ ದಿ:02ರಂದು ಭಾರತೀಯ ಜನತಾ ಪಾಟರ್ಿಯ ಯುವ ಮೋಚರ್ಾ ಬೆಳಗಾವಿ ಗ್ರಾಮೀಣ ವತಿಯಿಂದ ಬೆಳಗಾವಿ ತಾಲೂಕಿನ ಗಣೇಶಪೂರ ದಿಂದ ಹಿಂಡಲಗಾ, ಸುಳಗಾ, ಮುತಗಾ, ಕಲ್ಲೆಹೋಳ, ಬೆಳಗುಂದಿ, ಸೋನೂಲಿ, ಎಳೇಬೈಲ ಮಾರ್ಗವಾಗಿ ರಾಕಸಕೊಪ್ಪ ವರೆಗೆ "ವಿಜಯ ಸಂಕಲ್ಪ ಕಾರ್ಯಕ್ರಮದಡಿ ಬೃಹತ್ ಮೋಟರ್ ಬೈಕ್ ರ್ಯಾಲಿಯನ್ನು ನಡೆಸಲಾಯಿತು.
ಭಾರತ ದೇಶದ ಹೆಮ್ಮೆಯ ಸುಪುತ್ರ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ ಯುವ ಮೋಚರ್ಾ ಕಾರ್ಯಕರ್ತರ ವತಿಯಿಂದ ಬೈಕ್ ರ್ಯಾಲಿ ಮಾಡಿ "ಮತ್ತೊಮ್ಮೆ ಮೋದಿ" ಎಂದು ಸಂಕಲ್ಪ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಮೋಚರ್ಾ ಬೆಳಗಾವಿ ಗ್ರಾಮೀಣದ ಅಧ್ಯಕ್ಷರಾದ ಚೇತನ ಪಾಟೀಲ ಇವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು ಪಾಲ್ಗೊಂಡಿದ್ದರು. ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲದೆ ಭಾರತ ದೇಶವನ್ನು ಜಗತ್ತಿನಲ್ಲಿ ಉನ್ನತ ಮಟ್ಟಕ್ಕೆ ಏರಿಸಲು ಬಹಳ ಶ್ರಮವಹಿಸಿದ್ದಾರೆ, ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಉಗ್ರರ ಅಡುಗುದಾಣಗಳನ್ನು ದ್ವಂಸಗೊಳಿಸಿ ಸುಮಾರು 300 ಕ್ಕೂ ಹೆಚ್ಚು ಉಗ್ರರನ್ನು ಸದೆಬಡೆಯಲು ದಿಟ್ಟ ಹೆಜ್ಜೆಯನ್ನು ಇಟ್ಟು ಪಾಕಿಸ್ತಾನಕ್ಕೆ ಬುದ್ದಿ ಕಲಿಸುವ ಮುಖಾಂತರ ಭಾರತ ದೇಶವನ್ನು ಜಗತ್ತಿನಲ್ಲಿ ತಲೆಎತ್ತುವಂತೆ ಮಾಡಿದ್ದಾರೆ ಇಂತಹ ಜನಮೆಚ್ಚಿನ ಹೆಮ್ಮೆಯ ಪ್ರಧಾನಿಯನ್ನು ಮುಂಬರವು ಚುನಾವಣೆಯಲ್ಲಿ ಗೆಲ್ಲಿಸಿ ಇನ್ನೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಚುನಾಯಿಸಲು ಎಲ್ಲರೂ ಕಾರ್ಯಪ್ರವತ್ತರಾಗಬೇಕೆಂದು ಕರೇನೀಡಿದರು.
ಉಪಸ್ಥಿತರು: ಜಿಲ್ಲಾ ಪ್ರಧಾನ ಕಾರ್ಯದಶರ್ಿ ಮಹೇಶ ಮೋಹಿತೆ, ರಾಜ್ಯ ಯುವಾ ಮೋಚರ್ಾ ಉಪಾಧ್ಯಕ್ಷರಾದ ರಾಜು ಚಿಕ್ಕಣ್ಣಗೌಡರ, ಚುನಾವಣಾ ಪ್ರಭಾರಿಗಳಾದ ಕು.ಉಜ್ವಲಾ ಬಡವನ್ನಾಚೆ, ರಾಜ್ಯ ಯುವ ಮೋಚರ್ಾ ಕಾರ್ಯಕಾರಿಣಿ ಸದಸ್ಯರಾದ ಯುವರಾಜ ಜಾಧವ, ಮಂಡಳ ಪ್ರಧಾನ ಕಾರ್ಯದಶರ್ಿಯಾದ ಪ್ರವೀಣ ಪಾಟೀಲ, ಯಲ್ಲಪ್ಪಾ ಪಾಟೀಲ, ಹೇಮಂತ ಪಾಟೀಲ, ರಾಮಚಂದ್ರ ಮನ್ನೋಳಕರ, ಸುಮೀತ ಅಗಸಗಿ, ಬಾಪುಸೋ ಪಾಟೀಲ, ಅಭಯ ಅವಲಕ್ಕಿ, ಯುವ ಮೋಚರ್ಾ ಸದಸ್ಯರು, ಭಾರತೀಯ ಜನತಾ ಪಾಟರ್ಿಯ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.