ಲೋಕದರ್ಶನ ವರದಿ
ಮಾಂಜರಿ 07: ಸೈನಿಕರ ತ್ಯಾಗಿ ವೃತ್ತಿಯಿಂದ ದೇಶದ ಸುರಕ್ಷತೆಯನ್ನು ಬಲಿಷ್ಟವಾಗಿದೆ ದೇಶದಲ್ಲಿ ಹೆಚ್ಚುತ್ತಿರುವ ಉಗ್ರವಾದಿಗಳನ್ನು ತಡೆಗಟ್ಟಲು ಸೈನಿಕರಿಗೆ ಸುರಕ್ಷಾ ಕವಚ ನೀಡಿ ಹೆಚ್ಚಿನ ಸೌಕರ್ಯ ನೀಡುವ ಜೊತೆಗೆ ಗ್ರಾಮೀಣ ಭಾಗದಲ್ಲಿರುವ ಯುವಕರಿಗೆ ದೇಶ ಸೇವೆಗಾಗಿ ಹೆಚ್ಚಿನ ಆದ್ಯತೆ ಕೇಂದ್ರ ಸರಕಾರ ನೀಡಬೆಕೆಂದು ಶ್ರೀಶೈಲ ಫೀಠದ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಕಾಡಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಅಮೋಲ ಜನಕಲ್ಯಾಣ ಪ್ರತಿಷ್ಠಾಣದ ವತಿಯಿಂದ ದೇಶಸೇವೆಗಾಗಿ ಸೇನೆಗೆ ಸೆರ್ಪಡೆಗೊಂಡಿರುವ ಯುವ ಸೈನಿಕರ ಸತ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು ಅತಿಥಿಯಾಗಿ ಧೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ನಿದರ್ೆಶಕ ಅಜೀತರಾವ ದೇಸಾಯಿ, ಅಮೋಲ ಜನಕಲ್ಯಾಣ ಪ್ರತಿಷ್ಠಾಣದ ಸಂಸ್ಥಾಪಕ ಡಾ. ಅಮೋಲ ಸರಡೆ, ಬಾಳಾಸಾಹೇಬ ಕಾಟಕರ, ಅಡವಯ್ಯಾ ಅರಳಿಕಟ್ಟಿಮಠ ಹಾಜರಿದ್ದರು ಇತ್ತಿಚಿಗೆ ನಡೆದ ಚುನಾವಣೆಯಲ್ಲಿ ದೇಶದ ಎರಡನೆಯ ಬಾರಿ ಪ್ರಧಾನ ಮಂತ್ರಿ ಚುಕ್ಕಾಣೆ ಹಿಡಿದ ನರೆಂದ್ರ ಮೋದಿ ಇವರು ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಿ ಉಗ್ರವಾದಿಗಳನ್ನು ಮಟ್ಟ ಹಾಕಲು ದಿಟ್ಟ ನಿಧರ್ಾರ ಪಡೆದಿದ್ದರಿಂದ ದೇಶದ ಎಲ್ಲ ಕಡೆ ಭಾರತೀಯ ಜನತಾ ಪಕ್ಷಕ್ಕೆ ಅಭೂತ ಪೂರ್ವ ಗೆಲುವು ಸಾಧಿಸಲು ಸೈನಿಕರ ಪಾತ್ರ ಬಹುಮುಖ್ಯವಾಗಿದೆ ಎಂದು ಅವರು ಹೇಳಿದರು ಈ ವೇಳೇ ಅಮೋಲ ಜನಕಲ್ಯಾಣ ಪ್ರತಿಷ್ಠಾಣದ ಸಂಸ್ಥಾಪಕರಾದ ಡಾ. ಅಮೋಲ ಸರಡೆ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಪ್ರತಿಯೊಬ್ಬ ಯುವಕ ದೇಶಾಭಿಮಾನಕ್ಕಾಗಿ ಸೇನೆಯನ್ನೆ ಸೆರ್ಪಡೆಗೊಳ್ಳ ಬೆಕೆಮದು ಅವರು ಹೇಳಿದರು ಈ ವೇಳೆ ಮಾಂಜರಿ ಯಡೂರ ಚಂದೂರ ಇಂಗಳಿ ಕಲ್ಲೋಳ ಅಂಕಲಿ ಶಿರಗುಪ್ಪಿ ಕಾಗವಾಡ ಉಗಾರ ಮಂಗಸೂಳಿ ಮೋಲೆ ಮುಂತಾದ ಗ್ರಾಮಗಳ 40 ಯುವ ಸೈನಿಕರನ್ನು ಜಗದ್ಗುರು ಸನ್ಮಾನಿಸಿ ಪರಿಸರ ದಿನಾಚರಣೆ ಅಂಗವಾಗಿ ಪ್ರತಿಯೊಬ್ಬ ಸೈನಿಕನಿಗೆ ಸಸಿ ನೀಡಿದರು ಈ ಕಾರ್ಯಕ್ರಮಕ್ಕೆ ಲಕ್ಷ್ಮಣ ಗುಂಜಾಳೆ, ಚಂದ್ರಕಾಂತ ಕೋಳಿ, ಬಾಹುಬಲಿ ಪಣದೆ, ಉಮೇಶ ಸರಡೆ, ಅಶೋಕ ಅವಟಿ, ರಾಜು ಕೋಳಿ, ಪ್ರಶಾಂತ ಹಿರೆಮಠ, ಕೆಂಪಣ್ಣ ಕೋಟಗಿ ಹಾಗೂ ಪಾಠಶಾಲೆಯ ವಿದ್ಯಾಥರ್ಿಗಳು ಹಾಜರಿದ್ದರು ಮಲ್ಲಯ್ಯಾ ಜಡೆ ಸ್ವಾಗತಿಸಿ ನಿರೂಪಿಸಿ ಮಲ್ಲಪ್ಪಾ ಸಿಂಧೂರ ವಂದಿಸಿದರು.