'ಜಂಟಲ್ಮನ್' ಕುಂಭಕರ್ಣ ವಿಶಿಷ್ಟ, ವಿಭಿನ್ನ: ಡೈನಾಮಿಕ್ ಪ್ರಿನ್ಸ್

ಬೆಂಗಳೂರು, ಡಿ 19:      ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ 'ಜಂಟಲ್ಮನ್' ಹೊಸ ವರ್ಷಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ  ಚಿತ್ರ ಸೆನ್ಸಾರ್ಗ್ ಹೋಗಿದ್ದು, ರೀರೆಕಾರ್ಡಿಂಗ್ ಸದ್ಯದಲ್ಲೇ ಮುಕ್ತಾಯವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.  

ಇನ್ನು ಚಿತ್ರದ ನಾಯಕನಾಗಿ ಕಾಣಿಸಿಕೊಂಡಿರುವ ಪ್ರಜ್ವಲ್, ಇದುವರೆಗೆ ನಟಿಸಿರುವ 30 ಚಿತ್ರಗಳಿಗಿಂತಲೂ 'ಜಂಟಲ್ಮನ್' ವಿಶಿಷ್ಟ ಹಾಗೂ ವಿಭಿನ್ನವಾಗಿದೆ ಸ್ಲೀಪಿಂಗ್ ಸಿಂಡ್ರೋಮ್ನಿಂದಾಗಿ ದಿನದ 18 ಗಂಟೆ ನಿದ್ದೆ ಮಾಡೊ ಯುವಕ ಉಳಿದ 6 ಗಂಟೆ ಹೇಗೆ ಕಳೆಯುತ್ತಾನೆ ಅನ್ನೋದನ್ನ ನಿರ್ದೇಶಕ ಜಡೇಶ್ ಕುಮಾರ್ ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದಾರೆ ಅಂತ ತಿಳಿಸಿದ್ರು.   

ಪ್ರಜ್ವಲ್ ಜೋಡಿಯಾಗಿ ನಿಷ್ವಿಕಾ ನಾಯ್ಡು ಡಯಟೀಷಿಯನ್ ಪಾತ್ರದಲ್ಲಿದ್ದಾರಂತೆ.  ಇನ್ನು ನಾಯಕನ ಅಣ್ಣನ ಪುತ್ರಿಯಾಗಿ ಬೇಬಿ ಆರಾಧ್ಯ, ಅತ್ತಿಗೆಯಾಗಿ ಕಿರುತೆರೆ ನಟಿ ಆರತಿ ಅಭಿನಯಿಸಿದ್ದಾರೆ.   

ಹಾಡಿನ ಲಿರಿಕಲ್ ವೀಡಿಯೊ ಬಿಡುಗಡೆಗೊಳಿಸಿದ್ದು, ನಾಯಕನ ಮನಸ್ಸಿನ ಹತಾಶ ಭಾವನೆಗಳನ್ನು ಚಿತ್ರಿಸಲಾಗಿದೆ . 

-: ಗುರು ದೇಶಪಾಂಡೆ ನಿರ್ಮಾಣ:-   

ನಿರ್ದೇಶಕರಾಗಿ 7 ಚಿತ್ರಗಳನ್ನು ನೀಡಿರುವ ಗುರು ದೇಶಪಾಂಡೆ ಚಿತ್ರವೊಂದನ್ನು ನಿರ್ಮಿಸಲೇಬೇಕೆಂಬ ಹಠದಿಂದ 'ಜಂಟಲ್ಮನ್'ಗೆ ಬಂಡವಾಳ ಹೂಡಿದ್ದಾಗಿ ತಿಳಿಸಿದರು.   

ಪ್ರೊಡಕ್ಷನ್ ಮಾಡಬೇಕು ಎಂಬ ಹಠ ದಿಂದ ಚಿತ್ರ ನಿರ್ಮಾಣಕ್ಕೆ ಮುಂದಾದೆ.  ಜಡೇಶ್ ಕುಮಾರ್ ಕಥೆ ಚೆನ್ನಾಗಿದೆ ಪ್ರಜ್ವಲ್ ದೇವರಾಜ್ ಜತೆ ಚಿತ್ರ ಮಾಡಲು 2 ವರ್ಷದಿಂದ ಮಾತುಕತೆ ನಡೆಯುತ್ತಿತ್ತು ಎಂದರು.   

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.  ವಿವೇಕ್ ನಾಯ್ಡು, ಮಂಜುನಾಥ್ ಸಹ ನಿರ್ಮಾಪಕರಾಗಿ, ಗುರು ದೇಶಪಾಂಡಯವರಿಗೆ ಕೈಜೋಡಿಸಿದ್ದಾರೆ.  ಮಾಸ್ತಿಯವರ ಸಂಭಾಷಣೆ, ಧನಂಜಯ್ ಸಾಹಿತ್ಯವಿದೆ.