ಎನ್.ಎಮ್.ಕೆ. ಬ್ಯಾನರ್ ನಲ್ಲಿ ಮೂಡಿ ಬಂದಿರುವ ಫಾರೆಸ್ಟ್ ಟ್ರೇಲರ್ ಎಲ್ಲಾ ಸಿನಿ ಪ್ರೇಕ್ಷಕರ ಹೃದಯ ಗೆದ್ದಿದೆ. ಬಹುಕೋಟಿ ವೆಚ್ಚದಲ್ಲಿ ಎನ್.ಎಮ್. ಕಾಂತರಾಜ್ ನಿರ್ಮಿಸಿರುವ ಈ ಚಿತ್ರದ ನಟರಾಗಿ ಚೊಕ್ಕಣ್ಣ, ಅನೀಶ್ ತೆಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರ ಜೋಡಿ.
ಈ ಸಿನಿಮಾದ ನಿರ್ದೇಶಕರು ಚಂದ್ರಮೋಹನ್. ಕ್ಯೂರಾಸಿಟಿ ಹಾಗೂ ಆಕ್ಷನ್ ಕಥಾಹಂದರವನ್ನು ಹೊಂದಿರುವ ಫಾರೆಸ್ಟ್ ಕಾಡುಗಳ್ಳರ ಬಗ್ಗೆ ಬೆಳಕು ಚೆಲ್ಲಿದೆ. ಈ ಸಿನಿಮಾದ ’ಓಡು ಓಡು...’ ಎಂಬ ಹಾಡು ಮಿಲಿಯನ್ಸ್ ಗಟ್ಟಲೇ ವೀವ್ಸ್ ಆಗಿರುವುದು ವಿಶೇಷ. ಜನವರಿ 24 ಕ್ಕೆ ಅದ್ಧೂರಿಯಾಗಿ ರೀಲೀಸ್ ಆಗಲಿರುವ ಫಾರೆಸ್ಟ್ ಈಗಾಗಲೇ ಪ್ರಮೋಷನ್ ಕೆಲಸದಲ್ಲಿತೊಡಗಿಕೊಂಡಿದೆ. ಈಗಾಗಲೇ ಮ್ಯಾಕ್ಸ್ ಓಡುತ್ತಿರುವ ಚಿತ್ರಮಂದಿರಗಳಲ್ಲಿ ಟ್ರೇಲರ್ ಓಡುತ್ತಿದ್ದು, ಸಿನಿಮಾದ ಬಗ್ಗೆ ಪ್ರೇಕ್ಷಕರು ಕೈಹಿಡಿದರೆ ಒಂದು ದೊಡ್ಡ ಮಟ್ಟದ ಸಿನಿಮಾ ಇದಾಗಲಿದೆ. ಚಿಕ್ಕಣ್ಣ ಇದಾಗಲೇ ’ಉಪಾಧ್ಯಕ್ಷ’ ಹಿಟ್ ಸಿನಿಮಾ ನೀಡಿದ್ದು, ’ಫಾರೆಸ್ಟ್’ ಸಿನಿಮಾದಲ್ಲಿ ಚಿಕ್ಕಣ್ಣ ಅಭಿನಯವು ಪ್ರಮುಖ ಹೈಲೈಟ್. ಧರ್ಮ ವಿಶ್ ಮ್ಯೂಸಿಕ್ ನೀಡಿದ್ದು ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ ಈ ಸಿನಿಮಾದಲ್ಲಿ ಆಕರ್ಷಣೆಯ ಕೇಂದ್ರಬಿಂದಿವಾಗಿದ್ದಾರೆ.