ಲೋಕದರ್ಶನ ವರದಿ
ಯಲಬುರ್ಗಾ 14: ತಾಲೂಕ ತರಲಕಟ್ಟಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಶ್ರೀ ಮಹರ್ಷ ವಾಲ್ಮೀಕಿ ಸಮುದಾಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಗುರು ಶಿಷ್ಯ ಪರಂಪರೆ ಯೋಜನೆಯಡಿ ರಂಗ ಗೀತೆಗಳ ಮತ್ತು ಗೀಗಿಪದಗಳ ತರಬೇತಿ ಕಾರ್ಯಕ್ರಮಕ್ಕೆ ತಾಲೂಕ ಪಂಚಾಯತ ಅಧ್ಯಕ್ಷ ಲಕ್ಷ್ಮೀ ದ್ಯಾಮಪ್ಪಗೌಡ್ರ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ದೃಶ್ಯ ಮಾದ್ಯಮಗಳಲ್ಲಿ ಅಶ್ಲೀಲ ಜನಪದ ಹಾಡುಗಳಿಂದ ಇಂದಿನ ಧಾರವಾಹಿಗಳಿಂದ ಮೂಲ ಕಲೆ ಸಂಸ್ಕತಿ ನಶಿಸಿ ಹೋಗುತ್ತಿದ್ದು. ಇದನ್ನು ಉಳಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ. ಎಂದು ಹೇಳಿದರು ಪ್ರಾಸ್ತಾವಿಕವಾಗಿ ಮಾತನಾಡಿದ ಬಾಬುರಾವ್ ಜ್ಞಾನಮೋಟೆ ಜಾನಪದ ಕಲೆ ಕಲಿಸುವಿಕೆಗಾಗಿ ಗುರು ಶಿಷ್ಯ ಪರಂಪರೆ ಎನ್ನುವ ಯೋಜನೆಯಿದೆ ಇದು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ ಆಯಾ ಜನಪದ ಕಲೆಯ ಹಿರಿಯರನ್ನು ಗುರುತಿಸಿ ಅವರನ್ನು ಗುರುವನ್ನಾಗಿಯೂ ಆಯಾ ಕಲೆಯನ್ನು ಆಸಕ್ತಿ ಇರುವ ಶಿಷ್ಯರನ್ನು ಒಳಗೊಂಡತೆ ಆರು ತಿಂಗಳ ಕಾಲ ಕಲೆ ಕಲಿಯಲು ಗುರು ಶಿಷ್ಯರಿಗೆ ಸಹಾಯ ಧನ ವಿರುತ್ತದೆ ಇದು ಜನಪದ ಕಲೆ ಉಳಿಸುವ ಮತ್ತು ಅದನ್ನು ಆಸಕ್ತಿ ಇರುವವರ ಮೂಲಕ ಮುಂದುವರೆಸುವ ಒಂದು ಯೋಜನೆ ಎಂದರು. ಜಾನಪದ ಪರಿಷತ್ ಅಧ್ಯಕ್ಷ ಹನಮಂತಪ್ಪ ಜಳಕಿ ಮಾತನಾಡಿ ಮೂಲ ಜನಪದ ಕಲೆ ಹುಟ್ಟುವುದು ಮಹಿಳೆಯರಿಂದ ಮಾತ್ರ ಬೀಸುವ ಕಲ್ಲು ಪದ, ಸುಗ್ಗಿಪದ, ಲಾವಣಿ ಪದ, ಶೋಭಾನ ಪದ ಮೂಲ ಹುಟ್ಟಿದ್ದು ಮಹಿಳೆಯರಿಂದ ಇಂದು ಮಹಿಳೆಯರು ಜನಪದ ಸಂಸ್ಕೃತಿ ಉಳಿಸಲು ತಾವು ಕೂಡ ಮುಂದಾಗಬೇಕೆಂದು ಹೇಳಿದರು. ಮುರಡಿ ಗ್ರಾಮ ಪಂಚಾಯತ ಅಧ್ಯಕ್ಷ ಭೀಮಜ್ಜ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಾನಪದ ಪರಿಷತ್ ಕಾರ್ಯದಶರ್ಿ ಶರಣಪ್ಪ ದಾನಕೈ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದೇವೆಂದ್ರಪ್ಪ ಜಿಲರ್ಿ, ಮುಕ್ಕಾಲಪ್ಪ ನೆಲಜೇರಿ ರಂಗಭೂಮಿ ಕಲಾವಿದ ತೇಜನಗೌಡ ಪಾಟೀಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರುಗಳಾದ ನಾಗರಾಜ ಲಮಾಣಿ, ಗುರುನಾಥ ಮೇಟಿ, ಶರಣಪ್ಪ ಬ್ಯಾಳಿ, ಶರಣಪ್ಪಗೌಡ ಮಾಲಿಪಾಟೀಲ್, ಹನಮಂತಪ್ಪ ಹರಿಜನ, ಈರಣ್ಣ ಕುನರ್ಾಳ, ಮಲ್ಲೇಗೌಡ ಸಾಹುಕಾರ ಮುಖಂಡರುಗಳಾದ ಪ್ರಭುಗೌಡ ಪಾಟೀಲ್, ವೆಂಕೋಬ ನಾಯಕ, ಹಿರಣ್ಯಾಕ್ಷಗೌಡ ಮಾಲಿಪಾಟೀಲ್, ಸೋಮಲಿಂಗನಗೌಡ ಮಾಲಿಪಾಟೀಲ್, ಹನಮಂತಪ್ಪ ತಳವಾರ ಕಲಾವಿದರಾದ ರಂಗನಗೌಡ ಮಾಲಿಪಾಟೀಲ್, ಗುನ್ನೆಪ್ಪ ದಾಸರ, ಲೋಕೇಶ ನಾಯಕ, ಶ್ರೀಕಾಂತಗೌಡ ಮಾಲಿಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು. ನೂರಾರು ಶಿಬಿರಾಥರ್ಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲೋಹಿತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.