ಲೋಕದರ್ಶನ ವರದಿ
ರಾಯಬಾಗ 30: ಜನರಿಗೆ ಕಾನೂನು ಅರಿವಿನ ಜಾಗೃತಿ ಮೂಡಿಸಬೇಕಾಗಿದೆ. ಇದಕ್ಕೆ ಪೊಲೀಸ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಿದರೆ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವೆಂದು ಪಿಎಸ್ಐ ಸುನೀಲ ಪಾಟೀಲ ಹೇಳಿದರು.
ಸೋಮವಾರ ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಸತೀಶ ಚೌಗುಲೆ ಸ್ವತಂತ್ರ ಪದವ ಪೂರ್ವ ಮಹಾವಿದ್ಯಾಲಯ ರಾಯಬಾಗ ಮತ್ತು ಜಿ.ಬಿ.ಚೌಗುಲೆ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ದಿಗ್ಗೇವಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾಥರ್ಿಗಳ ಸ್ವಾಗತ, ಸಾಂಸ್ಕೃತಿಕ, ಕ್ರೀಡೆ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ದಿನದ 24 ಗಂಟೆ ಕೆಲಸ ನಿರ್ವಹಿಸಿ, ಸಾರ್ವಜನಿಕರಿಗೆ ರಕ್ಷಣೆ ನೀಡಿ, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುತ್ತದೆ. ಪೊಲೀಸರನ್ನು ನೋಡುವ ದೃಷ್ಟಿಕೋಣ ಸಮಾಜದಲ್ಲಿ ಬದಲಾವಣೆ ಆಗಬೇಕಾಗಿದೆ ಎಂದರು. ವಿದ್ಯಾಥರ್ಿಗಳು ಕಟ್ಟುನಿಟ್ಟಿನಿಂದ ಕಾನೂನು ನಿಯಮಗಳನ್ನು ಪಾಲಿಸಬೇಕೆಂದು ತಿಳಿ ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕ, ಸಾಹಿತಿ ಪಿ.ಜಿ.ಕೆಂಪನ್ನವರ ಮಾತನಾಡಿ, ಸತತ ಪ್ರಯತ್ನ, ಕಠಿಣ ಪರಿಶ್ರಮ, ಏಕಾಗ್ರತೆ, ಪ್ರಾಮಾಣಿಕತೆಯಿಂದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಆಡಳಿತ ಮಂಡಳಿ, ಬೋಧನಾ ಸಿಬ್ಬಂದಿ ಮತ್ತು ವಿದ್ಯಾಥರ್ಿಗಳು ಒಂದು ಸಂಸ್ಥೆಯ ಆಧಾರ ಸ್ಥಂಭವಾಗಿವೆ. ವಿದ್ಯಾಥರ್ಿಗಳು ಪ್ರಶ್ನೆ ಮಾಡುವುದನ್ನು ಕಲಿಯಬೇಕು ಮತ್ತು ಶಿಕ್ಷಕರಿಂದ ತಮ್ಮ ಸಮಸ್ಯೆ, ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕೆಂದರು. ಉತ್ತರ ಕನರ್ಾಟಕದಲ್ಲಿ ಸಾಕಷ್ಟು ಪ್ರತಿಭೆಗಳಿದ್ದರೂ, ಪ್ರಚಾರದ ಕೊರತೆ ಮತ್ತು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಬೆಳಕಿಗೆ ಬರುತ್ತಿಲ್ಲವೆಂದು ವಿಷಾದವ್ಯಕ್ತಪಡಿಸಿದರು.
ಸಂಸ್ಥೆ ಅಧ್ಯಕ್ಷ, ನ್ಯಾಯವಾದಿ ಎಲ್.ಬಿ.ಚೌಗುಲೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದಶರ್ಿ ಅಪ್ಪಾಸಾಬ ಚೌಗುಲೆ, ಪ್ರಾಚಾರ್ಯರಾದ ಡಿ.ಜಿ.ಕಠಾರೆ, ಎಸ್.ಬಿ.ಜಮಾದಾರ ಹಾಗೂ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಬಿ.ವಾಯ್.ಯಮಗರ ಸ್ವಾಗತಿಸಿ, ನಿರೂಪಿಸಿದರು.