ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಮಂಜುನಾಥ ಜುನಗೊಂಡ, ವಿಜಯಪುರ
ಅದ್ಯಾವ ಗಳಿಗೆಯಲ್ಲಿ ವಿದೇಶಿಯರು ಭಾರತಕ್ಕೆ ಕಾಲಿಟ್ಟರೋ ಅಲ್ಲಿಯವರೆಗೂ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ ಶನಿ ಭಾರತದ ಹೆಗಲೇರಿದಂತೆ ಆಯಿತು. ಸುಂದರವಾದ ಭಾರತವನ್ನು ಸ್ವಾಥರ್ಿಗಳ ಪ್ರಪಂಚದ ಭಾಗವಾಗಿ ಮಾಡಲು ಎಲ್ಲರು ಎಲ್ಲಿಲ್ಲದ ಪ್ರಯತ್ನ ಮಾಡಿ ಅಂತಿಮವಾಗಿ ತಾವು ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ಸಾಧಿಸಿದರು. ಅದರಲ್ಲೂ ಬ್ರಿಟೀಷರು ಸುಮಾರು ಮುನ್ನೂರು ವರ್ಷಗಳ ಕಾಲ ನಮ್ಮನ್ನು ಆಳ್ವಿಕೆ ಮಾಡಿ, ಬಿಟ್ಟು ಹೋಗುವಾಗಲು ಕೂಡ ತಮ್ಮ ವಿಚಾರಗಳನ್ನು ನಮ್ಮ ದೇಶದ ಜನರ ಮನಸ್ಸಲ್ಲಿ ನೆಟ್ಟು ಹೋದರು. ಅದರ ಪ್ರತಿಫಲವಾಗಿಯೇ ಇಂದು ಭಾರತೀಯರು ಒಂದು ಹಂತದಲ್ಲಿ ಕಪ್ಪು ವರ್ಣದ ಬ್ರಿಟೀಷರಾಗಿ ಬದುಕುತ್ತಿದ್ದೇವೆ. ತಕ್ಕಡಿ ಹಿಡಿದು ವ್ಯಾಪಾರಕ್ಕೆ ಬಂದವರು ಕತ್ತಿ ಹಿಡಿದು ಆಳ್ವಿಕೆ ಮಾಡುತ್ತಾರೆ, ದೇಶದಿಂದ ಕಾಲ್ಕಿತ್ತು ತೆರಳುವಾಗಲು ಕೂಡ ತಮ್ಮ ಆಡಳಿತದ ಶನಿ ಸಂತಾನವನ್ನು ಇಲ್ಲಿಯೇ ಬಿಟ್ಟು ತೊಲಗುತ್ತಾರೆ. ಅದರ ಮುಂದುವರಿದ ಭಾಗವಾಗಿ ಇಂದು 'ಮೆಕಾಲೆ' ಮನಸ್ಸಿನವರು ನಮ್ಮನ್ನು ಆಳ್ವಿಕೆ ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ನಮ್ಮನ್ನು ಒಡೆದು ಆಳುವುದಕ್ಕಾಗಿಯೇ ಅವರು ಹುಟ್ಟು ಹಾಕಿ ಬಿಟ್ಟು ಹೋದ ಶಿಕ್ಷಣ ಕ್ರಮ ನಮ್ಮನ್ನು ನೈತಿಕವಾಗಿ ಅಧಃಪಥನಕ್ಕೆ ತಳ್ಳಿದರೆ, ಮನಾಸಿಕವಾಗಿ ವಿದೇಶಿಯರ ಗುಲಾಮರನ್ನಾಗಿ ಮಾಡಿದೆ. ಇದರ ಪರಿಣಾಮ ಇಂದು ಭಾರತೀಯತೆಯ ಜಾಗದಲ್ಲಿ ಜಾಗತಿಕತೆ ಬಂದು ಕುಳಿತುಕೊಂಡರೆ, ನಮ್ಮ ದೇಶದ ಪರಂಪರೆಯ ಜಾಗದಲ್ಲಿ ವಿದೇಶಿ ವ್ಯಾಮೋಹ ತಲೆ ಎತ್ತಿ ನಿಂತಿದೆ. ದೇಶದ ಆಸ್ತಿಯಾಗಿ ತಯಾರಾಗಬೇಕಾದ ಮಕ್ಕಳು ವಿದೇಶದ ದಲ್ಲಾಳಿಗಳಾಗಲು ಹೊರಟಿರುವುದು ನಿಜಕ್ಕೂ ದೊಡ್ಡ ದುರಂತವೇ ಆಗಿದೆ. ಇದರಿಂದಾಗಿ ಜಗತ್ತಿನದಲ್ಲಿ ದೊಡ್ಡ ಪರಂಪರೆ ಹಾಗೂ ಅತೀ ಪ್ರಾಚೀನತೆ ಹೊಂದಿದ ದೇಶ ಇಂದು ತನ್ನನ್ನು ತಾನು ಕಂಡು ಕೊಳ್ಳುವುದಕ್ಕೆ ಹೆಣಗಾಡುವಂತ ಸ್ಥಿತಿ ನಿಮರ್ಾಣವಾಗಿದೆ.
ಅಂದು ಭಾರತವನ್ನು ಆಳುವುದಕ್ಕೆ ಅಣಿಯಾದ ಬ್ರಿಟೀಷರಿಗೆ ಭಾರತೀಯರ ದೇಹದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತೆ ವಿನಃ ಭಾರತೀಯ ಮನಸ್ಸುಗಳನ್ನು ಸೆಳೆಯಲು ಸಾಧ್ಯವಾಗಲಿಲ್ಲ. ಕಾರಣ ಅಂದು ನಮ್ಮ ದೇಶದಲ್ಲಿ ಸಿಗುತ್ತಿದ್ದ ಶಿಕ್ಷಣ ವ್ಯವಸ್ಥೆ ಹಾಗಿತ್ತು. ನಮ್ಮನ್ನು ಮಾನಸಿಕವಾಗಿ, ಬೌದ್ಧಿಕವಾಗಿ, ದೈಹಿಕವಾಗಿ ಗಟ್ಟಿಗೊಳಿಸುತ್ತಿತ್ತು. ಅಲ್ಲಿ ಸಿಗುತ್ತಿದ್ದ ಮೌಲ್ಯ ಶಿಕ್ಷಣದಿಂದಾಗಿ ಬ್ರಿಟೀಷರ ಯಾವ ವಿಚಾರಗಳು ಕೂಡ ಭಾರತೀಯರನ್ನು ಸ್ಪಷರ್ಿಸಲು ಸಾಧ್ಯವಾಗಲಿಲ್ಲ. ಹೇಗಾದರೂ ಮಾಡಿ ಭಾರತೀರಿಗೆ ಭಾರತಕ್ಕಿಂತ ಬ್ರಿಟನ್ ಶ್ರೇಷ್ಠ, ಭಾರತೀಯ ವಿಚಾರಗಳಿಗಿಂತ ಪಾಶ್ಚಾತ್ಯ ವಿಚಾರಗಳು ಶ್ರೇಷ್ಠವೆಂದು ಬಿತ್ತಬೇಕು ಎನ್ನುವುದಕ್ಕಾಗಿಯೇ ಆಂಗ್ಲರು 'ಲಾಡರ್್ ಮೆಕಾಲೆ'ಯನ್ನು ಭಾರತಕ್ಕೆ ಕಳುಹಿಸಿದ್ದರು. ಭಾರತವನ್ನು ಕಂಡ ಲಾರ್ಡ ಮೆಕಾಲೆ 1839 ಫೆಬ್ರುವರಿ 2ರಂದು ಬ್ರಿಟೀಷ್ ಸಂಸತ್ತಿನಲ್ಲಿ ಭಾಷಣ ಮಾಡಿದ ಪರಿಯನ್ನು ನೋಡಿದರೆ ಮೊದಲಿದ್ದ ಭಾರತ ಹಾಗೂ ಭಾರತೀಯತೆ ಮತ್ತು ಈಗಿರುವ ಭಾರತ ಹಾಗೂ ಬದಲಾದ ಭಾರತೀಯತೆಯ ಪರಿಚಯವಾಗುತ್ತದೆ. ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಮೆಕಾಲೆ "ನಾನು ಭಾರತದ ಉದ್ದಗಲಕ್ಕೂ ಸಂಚಾರ ಮಾಡಿ ಬಂದಿದ್ದೇನೆ. ಅಲ್ಲಿ ಒಬ್ಬ ಭೀಕ್ಷುಕನಾಗಲಿ, ಕಳ್ಳನಾಗಲಿ ನನ್ನ ಕಣ್ಣಿಗೆ ಕಾಣಲಿಲ್ಲ. ಅಪಾರವಾದ ಸಂಪತ್ತು, ಉನ್ನತವಾದ ನೈತಿಕ ಮೌಲ್ಯಗಳು, ದೇಶಾಭಿಮಾನ ತುಂಬಿರುವ ಮನಸ್ಥಿತಿ ಇದೆ. ಇಂಥ ದೇಶವನ್ನು ನಾನು ಮೊದಲ ಬಾರಿಗೆ ಕಂಡಿದ್ದೇನೆ. ಈ ದೇಶದ ಬೆನ್ನೆಲುಬು ಆಗಿರುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಹಾಗೂ ಇಲ್ಲಿ ಸಂಸ್ಕಾರ, ಸಂಪ್ರದಾಯಗಳನ್ನು ನಾವು ಮುರಿಯುವ ವರೆಗೂ ಈ ದೇಶವನ್ನು ನಾವು ಗೆಲ್ಲುತ್ತೇವೆ ಎಂದು ನನಗೆ ಅನ್ನಿಸುವುದಿಲ್ಲ. ಆದ್ದರಿಂದ ನಾವು ಈ ದೇಶದ ಪ್ರಾಚೀನ ಶಿಕ್ಷಣ ಪದ್ಧತಿಯನ್ನು ಬದಲಾಯಿಸಬೇಕು. ಹಾಗೂ ಆಂಗ್ಲ ಪದ್ಧತಿಯೂ ನಮ್ಮ ಭಾರತೀಯತೆಗಿಂತ ಶ್ರೇಷ್ಠ ಎನ್ನುವುದನ್ನು ನಂಬುವಂತೆ ಮಾಡಬೇಕು. ಇದರಿಂದ ಅವರು ತಮ್ಮ ಸ್ವಾಭಿಮಾನ ಮತ್ತು ಸಂಸ್ಕೃತಿಯ ಮೇಲಿರುವ ಗೌರವ ಹಾಗೂ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಕೊನೆಗೆ ಅವರು ನಾವುಗಳು ಹೇಗೆ ಇಚ್ಚಿಸುತ್ತೇವೋ ಅದರಂತೆಯೇ ಆಗುತ್ತಾರೆ" ಎಂದು ಹೇಳುವ ಮೂಲಕ ಭಾರತ ಶಿಕ್ಷಣ ವ್ಯವಸ್ಥೆಯನ್ನೇ ಬುಡ ಮೇಲು ಮಾಡಲು ಮುಂದಾದ. ಅದರ ಪರಿಣಾಮವೇ ಮುಂದೆ 'ಮೆಕಾಲೆ ಬ್ರಾಂಡ್ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡ ಭಾರತ ಮೆಕಾಲೆ ಮನಸ್ಸಿನ ವಾರಸುದಾರರನ್ನು ಹುಟ್ಟು ಹಾಕುತ್ತಿದೆ. ಮೆಕಾಲೆಯೇ ಹೇಳಿದಂತೆ "ತನ್ನ ಶಿಕ್ಷಣ ಪದ್ಧತಿಯಿಂದಾಗಿ ಭಾರತದಲ್ಲಿ ಹುಟ್ಟುವ ಪ್ರತಿ ಮಗುವಿನ ಹುಟ್ಟು ಮಾತ್ರ ಭಾರತದ್ದಾಗಿರುತ್ತದೆ ವಿನಃ ಅದರ ಜೀವನ ಶೈಲಿ ಹಾಗೂ ಬದುಕು ಎಲ್ಲವು ಬ್ರಿಟೀಷ್ಮಯವಾಗುತ್ತದೆ" ಎನ್ನುವುದು ಅಕ್ಷರಶಃ ಸತ್ಯವಾಗಿದೆ ಮಾತ್ರವಲ್ಲ ಆ ಮೂಲಕ ಭಾರತವು ನೈತಿಕವಾಗಿ ಕುಸಿಯುತ್ತಿದೆ.
ಯಾವಾಗ ಭಾರತದಲ್ಲಿ ಮೆಕಾಲೆ ಶಿಕ್ಷಣ ನೀತಿ ಆರಂಭಿವಾಯಿತೊ ಅವಾಗಿನಿಂದ ಭಾರತೀಯತೆ ಜಾಗದಲ್ಲಿ ಪಾಶ್ಚಾತ್ಯರ ಪರಿಚಯ ಆರಂಭವಾಯಿತು. ವಿಜ್ಞಾನ ತಂತ್ರಜ್ಞಾನದ ಪರಿಚಯದ ಹೆಸರಲ್ಲಿ ಪಾಶ್ಚಾತ್ಯರು ಶ್ರೇಷ್ಠರು ಎನ್ನುವುದನ್ನು ತೋರಿಸುವ ಕಾರ್ಯ ಯಶಸ್ವಿಯಾಗಿ ಸಾಗಿತು. ಅಂದು ಆರಂಭಗೊಂಡ ಶಿಕ್ಷಣದ ಪರಿ ಹೇಗಿತ್ತು ಎಂದರೆ, "ಭೂಮಿ ದುಂಡಗಿದೆ" ಎಂದು ನಿಕೊಲೋ ಕೂಪನರ್ಿಕಸ್ ಹೇಳಿದ, ಇದರಿಂದಾಗಿಯೇ ಜಗತ್ತಿಗೆ ಭೂಮಿಯ ಕುರಿತು ಕಲ್ಪನೆ ಮೂಡಿತು. ಇಲ್ಲದೇ ಇದ್ದರೆ ಸಾಧ್ಯವೇ ಇರಲಿಲ್ಲ ಎಂದು ಮಕ್ಕಳ ಮೆದುಳಿನಲ್ಲಿ ತುರುಕಲಾಯಿತು. ವಿಚಿತ್ರ ಎಂದರೆ ಮೂಪನರ್ಿಕಸ್ ಹುಟ್ಟುವ ಸಾವಿರಾರು ವರ್ಷಗಳ ಮೊದಲು ಅಂದರೆ ಋಗ್ವೇದ ಕಾಲದಲ್ಲಿಯೇ ಭೂಮಿ ಹೇಗಿದೆ ಮತ್ತು ಅದರ ಚಲನೆ ಹೇಗಿದೆ ಎನ್ನುವುದನ್ನು ನಮ್ಮ ಭಾರತೀಯರು ಹೇಳಿದ್ದರು. ಋಗ್ವೇದದಲ್ಲಿ ಬರುವ ಒಂದು ಶ್ಲೋಕದಲ್ಲಿ
"ಸವಿತಾ ಯಂತ್ರೇಃ ಪೃಥ್ವಿಂ
ಅರಾಮ್ನೆ ದಯಾಂ ಅಂದಾಹತ್
ಅತೂಥರ್ೆ ಬದ್ದಾಹಂ ಅಶ್ವ ಇವಾ ಅದೋಹತ್
ಇದರರ್ಥ "ಒಬ್ಬ ಕುದುರೆಯ ತರಬೇತುದಾರ ಒಂದು ಕಕ್ಷೆಯಲ್ಲಿ ನಿಂತು ಹೇಗೆ ಕುರೆಯನ್ನು ತನ್ನ ಸುತ್ತ ಓಡುವಂತೆ ಮಾಡುತ್ತಾನೋ ಹಾಗೆ ಸೂರ್ಯನು ಕೂಡ ತನ್ನ ಆಕರ್ಷಣೆಯ ಬಲದಿಂದಾಗಿ ಭೂಮಿಯನ್ನು ಹಾಗೂ ಆಕಾಶ ಕಾಯಗಳನ್ನು ತನ್ನ ಸುತ್ತ ಚಲಿಸುವಂತೆ ಮಾಡುತ್ತಾನೆ" ಎಂದು ಸೂಚಿಸುತ್ತದೆ. ಅಂದಮೇಲೆ ಸಾವಿರಾರು ವರ್ಷಗಳ ಹಿಂದೆ ಕಂಡು ಕೊಂಡ ಸತ್ಯವನ್ನು ತಮ್ಮದೆಂದು ಹೇಳಿ ನಮ್ಮ ತಲೆಯನ್ನು ಕೆಡಿಸಲು ಮುಂದಾದ ಬ್ರಟೀಷರ ಆಂಗ್ಲ ಶಿಕ್ಷಣ ವ್ಯವಸ್ಥೆಯ ಪರಿಣಾಮವಾಗಿ ನಾವು ನಮ್ಮವರನ್ನು ಹಾಗೂ ನಮ್ಮತನವನ್ನು ಕಳೆದುಕೊಳ್ಳುತ್ತ ಸಾಗುತ್ತಿದ್ದೇವೆ. ಬೆಳಕಿನ ವೇಗವನ್ನು ಕುರಿತು ವಿಜಯನಗರ ಸಾಮ್ರಾಜ್ಯದ ಪಂಡಿತ 'ಶಯನ' ಆದಾಗಲೇ ನಿಖರವಾಗಿ ತಿಳಿಸಿಕೊಟ್ಟಿದ್ದನು. ಬ್ರಿಟೀಷರು ಭಾರತಕ್ಕೆ ಬರುವ ಮೊದಲೆ ನಮ್ಮಲ್ಲಿನ ಜ್ಞಾನ ಹೇಗಿತ್ತು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ.
"ತತಾಚ್ಛ ಸ್ಮರಿಯತೆ ಯೋಜನಾನಂ
ಸಹಸ್ರೆ ದ್ವೆದ್ವೆ ಸತೆ ದ್ವೇಚ್ಚಾ, ಯೋಜನೆ
ಏಕಾನಾಂ ನಿಮಿಶಥರ್ೆನ ಕ್ರಮಮನ್ ನಮೋಸ್ತುತೆ"
ಎಂದು ಬೆಳಕಿನ ವೇಗವನ್ನು ನಿಖರವಾಗಿ ತಿಳಿಸುವ 'ಶಯನ ಪಂಡಿತ'ರ ಈ ಶ್ಲೋಕ "ಅರ್ಧ ನಿಮಿಷದಲ್ಲಿ 2200 ಯೋಜನಗಳನ್ನು ಕ್ರಮಿಸಬಲ್ಲ ಓ ಸೂರ್ಯ ದೇವ ನಿನಗೆ ಸಮಸ್ಕಾರಗಳು" ಎಂದು ಅಥರ್ೈಸುತ್ತದೆ. ಒಂದು ಯೋಜನ ಅಂದರೆ ಇಂದಿನ 9.9 ಮೈಲಿಗಳಾಗುತ್ತವೆ. ಎಂದಮೇಲೆ ಬ್ರಿಟೀಷರು ನಮಗೆ ಹೇಳಿದ್ದಾದರೂ ಏನು? ನಮ್ಮದೆಲ್ಲವನ್ನು ಕದ್ದುಕೊಂಡು, ತಮ್ಮದೆನ್ನುತ್ತ ಸಾಗಿ ನಮ್ಮತನವನ್ನು ಹಾಳು ಮಾಡುವುದನ್ನು ಬಿಟ್ಟು ಬೇರೆನು ಮಾಡಲಿಲ್ಲ. ಆದರೂ ಇದ್ಯಾವುದು ನಮ್ಮವರಿಗೇ ಅರ್ಥವಾಗಲೇ ಇಲ್ಲ. ಗರುತ್ವಾಕರ್ಷಣೆಯ ವಿಷಯಕ್ಕೆ ಬಂದಾಗ ನಮ್ಮ ಮಕ್ಕಳಿಗೆ ಕೇಳಿದರೆ ಇದನ್ನು ಕಂಡು ಹಿಡಿದವನು ಐಸಾಕ್ ನ್ಯೂಟನ್ ಎಂದು ಹೇಳುತ್ತಾರೆ. ಹೇಳುತ್ತಾರೆ ಎನ್ನುವುದಕ್ಕೀಂತ ಹೇಳುವಂತೆ ಅವರಿಗೆ ಕಲಿಸಿದ್ದೇವೆ. ಆ ಕಲಿಕೆಗೆ ಕಾರಣವಾಗಿದ್ದೇ ಈ ಮೆಕಾಲೆ ಶಿಕ್ಷಣ ಪದ್ಧತಿ. ನ್ಯೂಟನ್ 16ನೇ ಶತಮಾನದಲ್ಲಿ ಗಿಡದಿಂದ ಸೇಬು ನೆಲಕ್ಕೆ ಬೀಳುವುದನ್ನು ನೋಡಿ ಗುರುತ್ವಾಕರ್ಷಣೆಯ ಬಗೆಗೆ ಚಿಂತನೆಗೆ ಇಳಿದ, ಆಮೇಲೆ ಅದನ್ನು ತಿಳಿಸಿಕೊಡಲು ಮುಂದಾದ. ಆದರೆ ಅದಕ್ಕೂ ಮೊದಲೆ ಅಂದರೆ 4 ಶತಮಾನ ಮೊದಲು ಕ್ರಿ.ಪೂ.1150 ರಲ್ಲಿ ಭಾಸ್ಕರಾಚಾರರ್ಯರು ತಮ್ಮ 'ಸಿದ್ಧಾಂತ ಸಿರೋಮಣಿ' ಗ್ರಂಥದ 'ಭುವನಕೋಶ' ಅಧ್ಯಾಯದ 6ನೇ ಶ್ಲೋಕದಲ್ಲಿ ಗುರುತ್ವಾಕರ್ಷಣೆಯ ಕುರಿತು ವಿವರವಾಗಿ ಬರೆಯುತ್ತಾರೆ. ಆದರೆ ಇಂದು ಅದುನ್ನು ನಮ್ಮ ಭಾರತೀಯ ಮಕ್ಕಳಿಂದ ಮುಚ್ಚಿಟ್ಟು ನ್ಯೂಟನ್ನನ್ನು ಹೀರೊ ಮಾಡಲು ಬ್ರಟೀಷರು ಮುಂದಾದರು.ಇದಕ್ಕೆ ಭಾರತೀಯರು ಕುರಿಗಳಂತೆ ತಲೆ ಅಲ್ಲಾಡಿಸಿದರು.ಹೀಗಾಗಿ ಭಾರತೀಯರಿಗಿಂತ ಆಂಗ್ಲರು ಶ್ರೇಷ್ಠ ಎನ್ನುವಂತ ಮನಸ್ಥಿತಿ ನಮ್ಮಲ್ಲಿ ಮೂಡಿತು. ಭಾರತದ ಖಗೋಳ ವಿಜ್ಞಾನಿ 'ಆರ್ಯಭಟ' ಶೂನ್ಯವನ್ನು ಸಂಶೋಧಿಸಿ ಕೊಡದೇ ಹೋಗಿದ್ದರೆ ಇಂದು ಜಗತ್ತಿನ ವಿಜ್ಞಾನ ಅಲ್ಲಿಯೇ ನಿಲ್ಲುತ್ತಿತ್ತು. ಅದರ ಕುರಿತು ಯಾವ ಪಠ್ಯದಲ್ಲಿಯೂ ಉಲ್ಲೇಖಿಸುವುದಿಲ್ಲ. ಪಾಶ್ಚಾತ್ಯರನ್ನು ಹಾಡಿ ಹೊಗಳುತ್ತ ಭಾರತೀಯರನ್ನು ವ್ಯವಸ್ಥಿತವಾಗಿ ಮರೆ ಮಾಚುವ ಶಿಕ್ಷಣ ವ್ಯವಸ್ಥೆಯನ್ನು ಮೆಕಾಲೆ ಆರಂಭಿಸಿದ. ಇದರಿಂದಾಗಿ ವರಾಹಿಮಿಹಿರ ಜಗತ್ತಿನ ಮೊದಲ ಜಲ ವಿಜ್ಞಾನಿ ಎನ್ನುವುದನ್ನು, ಶೂಶ್ರುತ ಜಗತ್ತಿನ ಮೊದಲ ಶಸ್ತ್ರ ಚಿಕಿತ್ಸಕ ಹಾಗೂ ಪ್ಲಾಸ್ಟಿಕ್ ಸರ್ಜರಿಯ ಜನಕ, ಚರಕ ಮಹಷರ್ೀ ಜಗತ್ತಿನ ಶ್ರೇಷ್ಠವಾದ ಆರ್ಯವರ್ೇದ ಪಂಡಿತ ಎನ್ನುವುದನ್ನು ನಾವು ಮಕ್ಕಳಿಗೆ ತಿಳಿಸಿಕೊಡುವ ಅವಕಾಶವನ್ನೇ ಕಳೆದುಕೊಂಡೆವು. ಎಲ್ಲವನ್ನು ಈ ವ್ಯವಸ್ಥೆ ಕಿತ್ತುಕೊಂಡಿತು. ಅದರ ಬದಲಿಗೆ ಔಷಧಿಗಳ ಪಿತಾಮಹ ಎಂದರೆ 'ಎಜಿಕ್ರೆಟಿಸ್ ಎಂದು ಹೇಳಿಕೊಳ್ಳತ್ತ ಸಾಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಇಂದು ಭಾರತ ನೈತಿಕವಾಗಿ ಅಧಃಪತನದ ಅಂಚು ತಲುಪುತ್ತಿದೆ.
ಜಗತ್ತಿಗೆ ಮೊದಲ ಬಾರಿಗೆ ವಿಮಾನದ ಕಲ್ಪನೆಯನ್ನು ರೈಟ್ ಸಹೋದರರು ನೀಡಿದರು ಎಂದು ಸಾರಿ ಸಾರಿ ಹೇಳುವ ನಮ್ಮ ಪಠ್ಯ ಪುಸ್ತಕಗಳು ರಾಮಾಯಣದಂತ ಮಹಾಗ್ರಂಥದಲ್ಲಿ ಪುಷ್ಪಕ ವಿಮಾನದ ಕಲ್ಪನೆ ಬಂದು ಹೋಗಿದೆ ಎನ್ನುವುದನ್ನೆ ಅರಿಯುತ್ತಿಲ್ಲ. ಜಗತ್ತಿಗೆ ರಾಜಕೀಯ ವ್ಯವಸ್ಥಾ ಪದ್ಧತಿಯನ್ನು ಬ್ರಿಟೀಷರು ಕಲಿಸಿಕೊಟ್ಟರು ಎಂದು ಕೊಚ್ಚಿಕೊಳ್ಳುವ ನಮಗೆ ಋಗ್ವೇದ ಕಾಲದಲ್ಲಿಯೇ ವಿಧಾತ, ಸಭಾ, ಸಮೀತಿಗಳು ಈ ಕಾರ್ಯವನ್ನು ಮಾಡುತ್ತಿದ್ದವು ಎನ್ನುವುದರ ಕುರಿತು ಗೊತ್ತೇ ಇಲ್ಲ. ಕಾರಣ ಈ ವಿದೇಶಿ ಶಿಕ್ಷಣ ವ್ಯವಸ್ಥೆ ಇವೆಲ್ಲವುಗಳನ್ನು ಮರೆಯುವಂತೆ ಮಾಡಿ ಬಿಟ್ಟಿದ್ದೇವೆ. ಮೆಕಾಲೆ ಶಿಕ್ಷಣದಿಂದ ಜಗತ್ತಿನ ಎಲ್ಲ ಜ್ಞಾನವನ್ನು ಕಲಿಯಲು ಸಹಾಯವಾಯಿತು ಎಂದು ಹೇಳಿಕೊಂಡು ತಿರುಗುವ ಕೆಲವು ಆಂಗ್ಲ ವ್ಯವಸ್ಥೆಯ ವ್ಯಸನಿಗಳಿಗೆ ಭಾರತೀಯತೆಯ ಪರಿಚಯವೇ ಇಲ್ಲ ಎನ್ನುವುದಂತೂ ಸ್ಪಷ್ಟವಾಗುತ್ತದೆ. ಜಗತ್ತಿಗೆ ವಿದೇಶಿಯರು ಜ್ಞಾನ ಹಂಚಿದರು ಎನ್ನುವುದಾದರೆ ಭಕ್ತಿಯಾರ್ ಖಿಲ್ಜಿಯ ದಾಳಿಯಿಂದ ಹಾಳಾದ "ನಳಂದಾ" ವಿಶ್ವ ವಿದ್ಯಾಲಕ್ಕೆ ಸಾವಿರಾರು ವಿದೇಶಿಯರು ಬಂದು ಕಲಿಯುತ್ತಿದ್ದರಲ್ಲ ಏಕೆ? ಅವರಲ್ಲಿ ಅಷ್ಟೆಲ್ಲ ಜ್ಞಾನವಿದ್ದರೂ ಕೂಡ ಬ್ರಹ್ಮಾಂಡ ಜ್ಞಾನಕ್ಕಾಗಿ ಭಾರತದ ಎದುರು ಮಂಡಿಯೂರಿದ್ದೇಕೆ? ಈ ಕುರಿತು ಮಕ್ಕಳಲ್ಲಿ ಅರಿವು ಮೂಡಿದರೆ ಜಗತ್ತಿನಲ್ಲಿ ಭಾರತವೇ ಶ್ರೇಷ್ಠ ಎಂದು ಗೊತ್ತಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ತಿರುಚಿ ಬರೆದ ಇತಿಹಾಸವನ್ನು ಮಕ್ಕಳಿಗೆ ಪಠ್ಯವಾಗಿ ರಚಿಸಲಾಯಿತು. ಗೆಲುವಿನ ಇತಿಹಾಸಕ್ಕಿಂತ ಭಾರತದ ಸೋಲಿನ ಇತಿಹಾಸವನ್ನೇ ಹೆಚ್ಚಾಗಿ ತಿಳಿಸಿಕೊಡುವ ಮೂಲಕ ಭಾರತದ ಕುರಿತು ಮಕ್ಕಳಲ್ಲಿ ಜಿಜ್ಞಾಸೆ ಮೂಡುವಂತೆ ಮಾಡಲಾಯಿತು. ಇದೇ ವ್ಯವಸ್ಥೆ ಇಂದಿಗೂ ಮುಂದುವರಿಯುತ್ತಿರುವುದು ನಮ್ಮ ದುರಾದೃಷ್ಟ. "ಥಕ್ಷಶಿಲಾ" ಹಾಗೂ "ವಿಕ್ರಮಶಿಲಾ" ವಿಶ್ವ ವಿದ್ಯಾಲಯಗಳು ಜಗತ್ತಿಗೆ ಜ್ಞಾನದ ಅಮೃತವನ್ನುಣಿಸುವುದರ ಜೊತೆಗೆ ಮೌರ್ಯ ಸಾಮ್ರಾಜ್ಯವನ್ನು ಹುಟ್ಟುಹಾಕಿದ ಚಂದ್ರಗುಪ್ತ ಮೌರ್ಯನನ್ನು ಹಾಗೂ "ಅರ್ಥಶಾಸ್ತ್ರದಂತ ಶ್ರೇಷ್ಠ ರಾಜನೀತಿ ಗ್ರಂಥ ರಚಿಸಿದ "ಚಾಣಕ್ಯನನ್ನು" ದೇಶಕ್ಕೆ ಕೊಡುಗೆಯಾಗಿ ನೀಡಿವೆ ಎಂದ ಮೇಲೆ ಅವುಗಳು ದಾಳಿಗೆ ಒಳಗಾಗದೇ ಮುಂದುವರಿದಿದ್ದರೆ ಭಾರತ ಹಾಗೂ ಅದರ ಶಿಕ್ಷಣ ವ್ಯವಸ್ಥೆ ಹೇಗಿರುತ್ತಿತ್ತು ಎನ್ನುವುದು ಕಲ್ಪಿಸಿಕೊಂಡರೆ ರೋಮಾಂಚನವಾಗುತ್ತದೆ.
ಇನ್ನು ಭಾರತದ ಪ್ರಾಚೀನ ಶಿಕ್ಷಣ ವ್ಯವಸ್ಥೆಯಲ್ಲಿ ಒಂದಾದ ಗುರುಕುಲ ವ್ಯವಸ್ಥೆಯು ಮಕ್ಕಳಲ್ಲಿ ನೈತಿಕತೆಯನ್ನು ಹೆಚ್ಚಿಸಿ ಅವರನ್ನು ಪ್ರಜ್ಞಾವಂತರನ್ನಾಗಿ ಹಾಗೂ ಸ್ವಾಭಿಮಾನಿ ಮತ್ತು ಪ್ರಾಮಾಣಿಕರನ್ನಾಗಿ ಮಾಡುತ್ತದೆ ಎನ್ನುವುದನ್ನು ಅರಿತ ಮೆಕಾಲೆ ಆ ವ್ಯವಸ್ಥೆಯನ್ನೇ ಹಾಳು ಮಾಡಿದನು. ಗುರುಕುಲಗಳನ್ನು ಮುಚ್ಚಿಸಿ ಆ ಜಾಗದಲ್ಲಿ ಆಂಗ್ಲ ಶಿಕ್ಷಣದ ಶಾಲೆಗಳನ್ನು ಆರಂಭ ಮಾಡಿದನು. ಆ ಕಾರಣದಿಂದಾಗಿಯೇ ಇಂದು ಮಕ್ಕಳಲ್ಲಿ ಆದರ್ಶಗಳಾಗಲಿ, ನೈತಿಕ ಮೌಲ್ಯಗಳಾಗಲಿ ಯಾವುದನ್ನು ಕಾಣುತ್ತಿಲ್ಲ. ಅದರ ಪರಿಣಾಮವಾಗಿಯೇ ಇಂದು ಎಲ್ಲೆಂದರಲ್ಲಿ ವೃದ್ಧಾಶ್ರಮಗಳು ತಲೆ ಎತ್ತುತ್ತಿವೆ. ಹೆತ್ತವರನ್ನು ಪ್ರೀತಿಸಬೇಕು ಅವರ ಕನಸುಗಳನ್ನು, ಆಸೆಗಳನ್ನು ಈಡೇರಿಸಬೇಕು ಎನ್ನುವ 'ಶ್ರವಣ ಕುಮಾರನ' ಆದರ್ಶವಾಗಲಿ, ಅಮ್ಮನಿಗಾಗಿ ರಾಜ್ಯಬಿಟ್ಟ ರಾಮನಾಗಲಿ, ಗಂಡನಿಗಾಗಿ ವನವಾಸಕ್ಕೆ ತೆರಳಿದ ಸೀತೆಯಾಗಲಿ, ಬ್ರಾತೃ ಧರ್ಮದ ಪರಿಪಾಲನೆ ಮಾಡಿದ ಲಕ್ಷ್ಮಣನಾಗಲಿ, ಅಣ್ಣ ಬಿಟ್ಟು ಹೋದ ರಾಜ್ಯವನ್ನು ಜೋಪಾನಮಾಡಿ ಅವನಿಗೆ ಮರಳಿಸಲು ಪಾದುಕೆ ಇಟ್ಟು ಕಾದ ಭರತನಾಗಲಿ, ಧರ್ಮ ವಿಜಯಕ್ಕಾಗಿ ಕಾಡು ಪಾಲಾದ ಪಾಂಡವರಾಗಲಿ ಇಂದಿನ ಮಕ್ಕಳಿಗೆ ಗೋತ್ತೆ ಇಲ್ಲ. ಬದಲಿಗೆ ಮಶಿನ್ ಮೇಲಿನ ಪ್ರೇಮ, ವಿದೇಶಿಯರ ಮೇಲಿನ ವ್ಯಾಮೋಹವನ್ನೇ ತೋರಿಸುವ ಮೂಲಕ ಯಂತ್ರಗಳಂತೆ ಅವರನ್ನು ಸೃಷ್ಠಿಸುತ್ತಿದ್ದಾರೆ. ಮೌಲ್ಯವಿಲ್ಲದ ಶಿಕ್ಷಣವನ್ನು ಮಾಹಿತಿ ರೂಪದಲ್ಲಿ ನೀಡುತ್ತ ಮಾನಸಿಕವಾಗಿ ನಮ್ಮನ್ನು ವಿದೇಶಿಯರ ಗುಲಾಮಗಿರಿತನಕ್ಕೆ ತಳ್ಳುತ್ತಿರುವುದು ಭಾರತ ಭವಿಷ್ಯಕ್ಕೆ ಬಡಿದ ಕರಾಳ ಛಾಯೆಯಾಗಿ ಕಾಣಿಸುತ್ತಿದೆ.
ಆತ್ಮ ನಿಭರ್ಾರ ಭಾರತದ ಕುರಿತು ಪ್ರಧಾನಿಗಳು ಮಾತನಾಡುವಾಗ ಚಪ್ಪಳೆ ತಟ್ಟುವ ನಾವುಗಳು ಮೊದಲು ನಮ್ಮ ಮನೆಯಲ್ಲಿ ಬೇಡ ನಮ್ಮ ಮನಸ್ಸಿನಿಂದಾದರೂ ಭಾರತೀಯರಾಗಿದ್ದಿವಾ? ಎನ್ನುವುದನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ನಮ್ಮ ಮಕ್ಕಳನ್ನು ಇಂಜಿನಿಯರಗಳನ್ನಾಗಿ, ಡಾಕ್ಟ್ರಗಳನ್ನಾಗಿ ತಯಾರು ಮಾಡುತ್ತಿದ್ದೇವೆ ವಿನಃ, ದೇಶಕ್ಕಾಗಿ ದುಡಿಯಬೇಕಾದ ವಿಜ್ಞಾನಿಗಳನ್ನಾಗಿ ಹುಟ್ಟು ಹಾಕಲು ಸಧ್ಯವಾಗುತ್ತಿಲ್ಲ. ಇಂಜಿನಿಯರ್ ಆದ ಮಕ್ಕಳವನ್ನು ವಿದೇಶಕ್ಕೆ ಕಳುಹಿಸಿ ಬೀಗುವ ನಾವುಗಳು ಆತ್ಮವೇ ಇಲ್ಲದ ಮಾನವರಾಗಿ ಬಿಟ್ಟಿರುವಾಗ ಇನ್ನೆಲ್ಲಿಂದ ಆತ್ಮ ನಿಭರ್ಾರ ಭಾರತವನ್ನು ಹುಟ್ಟು ಹಾಕುತ್ತೀರಿ?. 'ದೇಹ ಮೇಡ್ ಇನ್ ಇಂಡಿಯಾ' ಆದರೆ 'ಮೇಕ್ ಇನ್ ಇಂಡಿಯಾ' ಸಾಧ್ಯವಾಗುವುದಿಲ್ಲ. ಮನಸ್ಸು ಕೂಡ ಮೇಡ್ ಇಂಡಿಯಾ ಆಗಬೇಕು. ಅದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಬೇಕಾದ ಅಗತ್ಯವಿದೆ. ಹೇಗೆ ದಯಾನಂದ ಸರಸ್ವತಿಯವರು "ವೇದಗಳಿಗೆ ಹಿಂತಿರುಗಿ" ಎಂದು ಕರೆ ನಿಡಿದರೋ ಹಾಗೆ ಭಾರತೀಯತೆಗೆ ಹಿಂತಿರುಗುವುದು ಅತ್ಯಗತ್ಯವಾಗಿದೆ. ಮ್ಯಾಕ್ಸ್ಮುಲ್ಲರ ನಂತ ಸುಫಾರಿ ಪಡೆದು ಇತಿಹಾಸವನ್ನು ತಿರುಚುವ ವ್ಯಕ್ತಿಗಳಿಂದ ರಚಿತವಾದ ಇತಿಹಾಸಕ್ಕಿಂತ ಭಾರತೀಯತೆಯನ್ನು ಎತ್ತಿ ಹಿಡಿಯುವ ನೈಜ ಚರಿತ್ರೆ ತಿಳಿಯಬೇಕಾದ ಅಗತ್ಯವಿದೆ. ಹೀಗಾಗಿ ಈಗ ಅನುಮೊದನೆ ದೊರೆತಿರುವ ಹೊಸ ಶಿಕ್ಷಣ ನೀತಿಯಿಂದ ಏನಾದರೂ ಬದಲಾವಣೆ ಆಗುತ್ತದೆಯೇ ಎನ್ನುವುದು ಎಲ್ಲರ ನಿರೀಕ್ಷೆಯಾಗಿದೆ. ಎಲ್ಲಿಯವರೆಗೂ ಈ ದೇಶದಲ್ಲಿ ಮೆಕಾಲೆ ಮನಸ್ಸುಗಳು ದೇಶ ಆಳುತ್ತವೆಯೋ ಅಲ್ಲಿಯವರೆಗೂ ಬದಲಾವಣೆ ಅಸಾಧ್ಯ. ಅದಕ್ಕೆ ಮೆಕಾಲೆಯನ್ನು ಹುಟ್ಟು ಹಾಕುವ ಆಂಗ್ಲ ವ್ಯವಸ್ಥೆಯ ಶಿಕ್ಷಣಕ್ಕಿಂತ, ಮಹಾತ್ಮರನ್ನು ಕೊಟ್ಟ ಭಾರತೀಯ ಶಿಕ್ಷಣ ಈ ನೀತಿಯಿಂದ ದೊರೆಯುತ್ತದೆಯೋ ಕಾದು ನೊಡಬೇಕಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಕ್ರಾಂತಿ ಎನ್ನುವುದು ನಮ್ಮ ಮನಸ್ಸಿನಲ್ಲಿ ಪ್ರಜ್ವಲಿಸಬೇಕಾದ ಮೊದಲ ಕಿಡಿ. ಅಂದರೆ ಬದಲಾವಣೆ ಆರಂಭವಾಗಬೇಕಾಗಿರುವುದು ನಮ್ಮಿಂದಲೇ ಅದಕ್ಕೆ ಇನ್ನಾದರೂ ಭಾರತೀಯರಾಗೋಣ ಭಾರತೀಯತೆಯನ್ನು ಎತ್ತಿ ಹಿಡಿಯೋಣ. ಪ್ರಧಾನಿಗಳಿಗಾಗಿ, ಧರ್ಮಕ್ಕಾಗಿ, ಪಕ್ಷಕ್ಕಾಗಿ, ಸ್ವಹಿತಕ್ಕಾಗಿ ನಾವು ಏನು ಮಾಡುವುದು ಬೇಡ. ನಮ್ಮ ನಾಳೆಗಳಿಗಾಗಿ, ನಮ್ಮ ದೇಶದ ಅಸ್ಮಿತೆಗಾಗಿ, ಸುಂದರ ಕನಸುಗಳನ್ನು ನನಸಾಗಿಸುವುದಕ್ಕಾಗಿ ನಾವು ನಾವಾಗೋಣ. ನಮ್ಮತನವನ್ನು ಪ್ರದಶರ್ಿಸೋಣ ಎನ್ನುವುದು ಅನೇಕರ ಅಭಿಮತ. ಆತ್ಮನಿಭರ್ಾರ ಬಿಡಿ, ನಿಮ್ಮ ಆತ್ಮಕ್ಕೆ ನಿಧರ್ಾರ ಮಾಡಲು ಅವಕಶ ಮಾಡಿ ಕೊಡಿ. ಆ ಆತ್ಮಕ್ಕೆ ಸತ್ಯ ಏನೆಂದು ತಿಳಿಸಿಕೊಡಿ. ಅಲ್ಲಿಗೆ ಎಲ್ಲವು ಬದಲಾಗುತ್ತದೆ.