ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ
ಕೊರೊನಾ ವೈರಾಣು ಹೊಡೆತಕ್ಕೆ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಹಿಂದೆಂದೂ ಕಾಣದ ಮಾನವ ಪ್ರಗತಿಯ ಹಿನ್ನಡೆ ಅನುಭವಿಸಿದೆ. ಪರಿಣಾಮವಾಗಿ ಮನುಷ್ಯ ಜೀವನದ ಆಥರ್ಿಕ, ಆಡಳಿತಾತ್ಮಕ, ಶೈಕ್ಷಣಿಕ, ಸಾಮಾಜಿಕ ವ್ಯವಸ್ಥೆಗಳು ನೆಲಕಚ್ಚಿ ಹೋಗಿವೆ. ಭಾರತದಂತಹ ಹಳ್ಳಿಗಳ ಪ್ರಧಾನ ದೇಶದಲ್ಲಿ ಗ್ರಾಮೀಣ ಜನರ ಜೀವನದ ಮೇಲೂ ಸಹ ಕರೋನ ತನ್ನ ಕರಿನೆರಳ ಛಾಯೆ ಮೂಡಿಸಿದ್ದು ಗ್ರಾಮೀಣ ಭಾಗದ ರೈತರ ಕೃಷಿ ಕಾಮರ್ಿಕರ ಬದುಕಿಗೆ ಬಹುದೊಡ್ಡ ಹೊಡೆತ ನೀಡಿದೆ. ಗ್ರಾಮಗಳಲ್ಲಿ ಓದಿದವರು ಕೆಲಸ ಅರಸಿ ಪಟ್ಟಣ ಸೇರಿದರೆ, ರಟ್ಟೆಗಳನ್ನು ನಂಬಿದ ಕೂಲಿಕಾರರು ಕೆಲಸವಿಲ್ಲದೆ, ಕೂಲಿ ಇಲ್ಲದೆ, ಊಟ ಬಟ್ಟೆಗಳಿಗೆ ಸಕರ್ಾರವನ್ನೇ ನೋಡುವಂತಾಗಿದೆ ಕರೋನಾದ ಸಂದರ್ಭದಲ್ಲಿ ಇಂತಹ ಸಂದಿಗ್ಧ ಸಂದರ್ಭದಲ್ಲಿ ಗ್ರಾಮೀಣ ಜನತೆಗೆ ವರದಾನವಾಗಿದ್ದು ನಮ್ಮ ಗ್ರಾಮೀಣಾಭಿವೃದ್ಧಿಯ ಕನಸು ಹೊತ್ತ ನರೇಗಾ ಯೋಜನೆ.
ಬೆಳ್ಳಂ ಬೆಳಗಾಗೆದ್ದು ಯಾಯರ್ಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ !!
ನನ್ನವ್ವ ಭೂಮಿ ತಾಯಿಯ ನೆನೆದು ಕೈ ಮುಗಿದೇನ
ಎನ್ನುವ ಜನಪದರ ಸಾಲುಗಳು ಭೂತಾಯಿಯ ಮಹತ್ವವನ್ನು ಸಾರುತ್ತವೆ. ನಂಬಿದೋರ್ನ, ನೆಚ್ಚಿದೋರ್ನ ಎಂದು ಕೈ ಬಿಡಕ್ಕಿಲ್ಲಾ ನಮ್ಮವ್ವ ಭೂತಾಯಿ ಅನ್ನೋ ಮಾತು ಈ ಕರೋನ ಸಂದರ್ಭದಲ್ಲಿ ಅಕ್ಷರಶಹ ಸತ್ಯವಾಗಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗೋಕಟ್ಟೆ, ಹೂಳೆತ್ತುವ ಕಾಮಗಾರಿ ಜನರ ಗುಂಪಿನಲ್ಲಿ, ಡಿಪ್ಲೊಮಾಇಂಜಿನಿಯರಿಂಗ್ ಮಾಡಿದ ವಿದ್ಯಾಥರ್ಿಯೊಬ್ಬ ಬೆಂಗಳೂರಿನ ಕಂಪನಿ ಕೆಲಸಕ್ಕೆ ಗುಡ್ ಬೈ ಹೇಳಿ ನರೇಗಾ ಅಡಿ ಗುದ್ದಲಿ, ಚಲಿಕೆ, ಪುಟ್ಟಿ, ಹಿಡಿದು ಕೆಲಸ ಮಾಡುತ್ತಿದ್ದ. ಬಂದವನಿಗೆ ಹೊಸದಾಗಿ ಜಾಬ್ ಕಾಡರ್್ ಮಾಡಿ ಕೆಲಸ ಕೊಟ್ಟು ನೆರವಾದ ಹೆಗ್ಗಳಿಕೆ ನಮ್ಮ ಪಂಚಾಯಿತಿಗಳದ್ದು.
ಸಾಲದೆಂಬಂತೆ ಬೇರೆ ರಾಜ್ಯಗಳಿಗೆ ದುಡಿಮೆ ಹರಸಿ ವಲಸೆ ಹೋದವರು ವಾಪಸ್ ತಮ್ಮ ತವರು ಊರುಗಳಿಗೆ ಬಂದಾಗ ಅವರನ್ನೆಲ್ಲಾ ಸ್ವಾಗತಿಸಿ ಕೈ ಹಿಡಿದು ಬದುಕಿಗೆ ಆಸರೆಯಾಗಿದ್ದು ನಮ್ಮ ನರೇಗಾ. ಇದಕ್ಕೆ ರೈತರ ಜಮೀನುಗಳಲ್ಲಿ ಬದು ನಿಮರ್ಾಣ ಕಾಮಗಾರಿಯ ಮಹತ್ವಾಕಾಂಕ್ಷೆ ಮತ್ತು ದೂರದೃಷ್ಟಿ ಯೋಜನೆಯನ್ನು ಹೊಂದಿ ಬದುನಿಮರ್ಾಣ ಮಾಸಾಚಾರಣೆ ಮಾಡಿದ್ದು ನಮ್ಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಯಾರ ಯಾರ ಹೊಲಗಳಲ್ಲಿ ಜಾಬ್ ಕಾಡರ್್ ಹೊಂದಿದ್ದ ಫಲಾನುಭವಿಗಳು ಇದ್ದಾರೆ ಅವರದೇ ಹೊಲಗಳಲ್ಲಿ ಬದು ನಿಮರ್ಾಣ ಮಾಡಿ ಉತ್ತಮ ಫಸಲು ಬೆಳೆಯಲು ಅವಕಾಶ ಮಾಡಿಕೊಟ್ಟು ರೈತರ ಕಲ್ಯಾಣಕ್ಕೆ ನೆರವಾದದ್ದು ನರೇಗಾ. ದಾವಣಗೆರೆ ತಾಲ್ಲೂಕು ಒಂದರಲ್ಲೇ ಬರೋಬ್ಬರಿ 98 ಹೆಕ್ಟೇರ್ ವಿಸ್ತೀರ್ಣದಲ್ಲಿ 1,36,553 ಮಾನವ ದಿನಗಳ ಸೃಜನೆಯಾಗಿದೆ ಎಂದರೆ ಇಡೀ ರಾಜ್ಯದಲ್ಲಿ, ದೇಶದಲ್ಲಿ ಎಷ್ಟು ಕುಟುಂಬಗಳಿಗೆ ಈ ನರೇಗಾ ಯೋಜನೆ ಆಸರೆಯಾಗಿರಬಹುದು ಎಂಬುದನ್ನೊಮ್ಮೆ ನಾವೆಲ್ಲ ಯೋಚಿಸಿ ಹೆಮ್ಮೆಪಡಬೇಕಿದೆ, ಬೇಡುವ ಕೈಗಳಿಗಿಂತ ದುಡಿಯುವ ಕೈಗಳು ಮೇಲು ಎಂಬುದಕ್ಕೆ ನಮ್ಮ ಸಕರ್ಾರ ರೂಪಿಸಿರುವ ಯೋಜನೆ/ ಯೋಚನೆ ನಮ್ಮನ್ನು ಸ್ವಾಭಿಮಾನಿಗಳನ್ನಾಗಿ ಜೀವಿಸುವಂತೆ ಮಾಡಿದೆ, ಇದರಿಂದ ರೈತನ ಪ್ರತೀ ಹೆಕ್ಟೆರ್ ಜಮೀನಿನಲ್ಲಿ ಮಳೆಗಾಲದಲ್ಲಿ 2 ಲಕ್ಷ ಲೀಟರ್ ನೀರು ಇಂಗುವಂತಾಗಿದೆ. ಮತ್ತು ಜಮೀನಿನ ಫಲವತ್ತತೆ ಉಳಿದು ಸವಕಳಿ ತಪ್ಪಿದೆ.
"ಪರಿಸರೋ ರಕ್ಷಿತಿಃ ರಕ್ಷಿತಃ" ನೀನು ಪರಿಸರವನ್ನು ರಕ್ಷಿಸಿದರೆ ಅದು ನಿನ್ನನ್ನು ರಕ್ಷಿಸುತ್ತದೆ, ಈ ಮಾತು ನಮ್ಮ ಗ್ರಾಮೀಣರ ಮನೆ ಮನೆಯಲ್ಲಿ ಮನ ಮನದಲ್ಲಿ ಅಚ್ಚೊತ್ತುವಂತೆ ಮಾಡಿದ್ದು ಈ ಕರೋನಾ ಸಮಯ.
ಈ ದಿಸೆಯಲ್ಲಿ ನಮ್ಮ ತಾಲ್ಲೂಕಿನ ಬಯಲು ಶೌಚಾಲಯ ಮುಕ್ತ ಮಾಡಬೇಕು ಕರೋನಾ ಹರಡುವುದನ್ನು ತಡೆಗಟ್ಟಬೇಕು ಎಂದು ಪಣತೊಟ್ಟು ಮನೆ ಮನೆ ಸವರ್ೆ ಮಾಡಿ ಬಯಲು ಶೌಚಾಲಯ ಹೋಗುವವರನ್ನು ಪತ್ತೆ ಹಚ್ಚಿ ಕೆಲಸ ಮಾಡಿದ್ದು ನಮ್ಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮತ್ತು ತಂಡದವರು. ನಮ್ಮ ತಾಲ್ಲೂಕು ಒಂದರಲ್ಲೇ ಒಟ್ಟು 1824 ಶೌಚಾಲಯಗಳು ಈ ಮೂರು ತಿಂಗಳಲ್ಲಿ ಕಟ್ಟಿಸಿದ್ದು ನಮ್ಮ ಹೆಮ್ಮೆ, 35 ಕೃಷಿ ಹೊಂಡ, 5 ಗೋಕಟ್ಟೆ, 8 ಕೆರೆಗಳಲ್ಲಿ ವಿವಿಧ ನರೇಗಾ ಕಾಮಗಾರಿಗಳನ್ನು ನಿರ್ವಹಿಸಿ ಗ್ರಾಮೀಣ ಜನರಿಗೆ ಉದ್ಯೋಗನೀಡಿ ಬದುಕಿಗೆ ಆಸರೆಯಾಗಿರುವುದು.
ಆಗುತ್ತಿರುವುದು ನಮ್ಮ ನರೇಗಾ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ 40 ಎಕರೆ ಗುಲಾಬಿ, 5 ಎಕರೆ ಬಾಳೆ, 2 ಎಕರೆ ಡ್ರಾಗನ್ ಫ್ರೂಟ್, 8 ಎಕರೆ ಪಪ್ಪಾಯಿ, 12 ಎಕರೆ ದಾಳಿಂಬೆ, 4 ಎಕರೆ ಮಾವು, 2 ಎಕರೆ ಅಂಜೂರ, ಕಿತ್ತಾಳೆ, ಕೋಕೋವಾ, ಕಾಳು ಮೆಣಸು ಹೀಗೆ ನಾನಾ ವಿಧಗಳಲ್ಲಿ ವೈಯಕ್ತಿಕ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟ ಹಿರಿಮೆ ನಮ್ಮ ಸಹಬಾಗಿ ಅನುಷ್ಟಾನ ಇಲಾಖೆಗಳ ಅಧಿಕಾರಿ/ ಸಿಬ್ಬಂದಿಯವರಿಗೆ ಸಲ್ಲಬೇಕು,
ನರೇಗಾದಲ್ಲಿ 2020-21ನೇ ಸಾಲಿಗೆ ನಮ್ಮ ದೇಶದಲ್ಲಿ 143 ಕೋಟಿ ಮಾನವ ದಿನಗಳ ಸೃಜನೆಯಾಗಿದೆ ಇದರಿಂದ 4.85 ಕೋಟಿ ಆಸ್ತಿಗಳನ್ನು ಸೃಜಿಸಲಾಗಿದ್ದು 13 ಕೋಟಿ ಸಕ್ರಿಯ ಕೆಲಸಗಾರರು 5.08 ಕೋಟಿ ವೈಯಕ್ತಿಕ ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ ಎಂದರೆ ನರೇಗಾದ ತಾಕತ್ತೇನು ಎಂಬುದು ಎಂಥವರಿಗೂ ಅರ್ಥವಾಗುತ್ತದೆ.
ಈ ನಿಟ್ಟಿನಲ್ಲಿ ಕೆಲಸವಿಲ್ಲ, ದುಡಿಮೆ ಇಲ್ಲ ಬದುಕು ಕಷ್ಟವಿದೆ ಎನ್ನುವವರನ್ನು ನಮ್ಮ ಪಂಚಾಯಿತಿಗಳಿಗೆ ಕರೆದುಕೊಂಡು ಬಂದು ನರೇಗಾದಲ್ಲಿ ಕೆಲಸ ಮಾಡಲು ಸಹಾಯ ಮಾಡಿದರೆ ಅನಕ್ಷರಸ್ತ ವಲಸಿಗ ಬಡ ಕಾಮರ್ಿಕ ಕುಟುಂಬಗಳಿಗೆ ಸಹಾಯವಾದೀತು. ಮತ್ತು ಈ ಕರೋನಾ ಸಂರ್ಭದಲ್ಲಿ ದೇಶ ನಮಗೇನು ಮಾಡಿದೆ, ದೇಶಕ್ಕೆ ನಮ್ಮ ಕೊಡುಗೆ ಏನು ಎನ್ನುವವರಿಗೆ ಇದರಿಂದ ಕೊಂಚ ಪ್ರೇರಣೆ ಸಿಕ್ಕರೆ ನಮ್ಮ ಈ ಲೇಖನ ಸಾರ್ಥಕ.
- ಬಿ ಎಂ ದಾರುಕೇಶ್
ಕಾರ್ಯನಿವರ್ಾಹಣಾಧಿಕಾರಿ, ದಾವಣಗೆರೆ
ಮೊ. 9886229378