ರೈತರ ಹಿತದೃಷ್ಟಿಯಿಂದ ವಿದ್ಯುತ್ ಖಾಸಗಿಕರಣ ಕೈಬಿಡಿ : ಶ್ರೀಮತಿ ನಜ್ಮುನ್ನಿಸ ಕೆ

ರೈತರ ಹಿತದೃಷ್ಟಿಯಿಂದ ವಿದ್ಯುತ್ ಖಾಸಗಿಕರಣ ಕೈಬಿಡಿ : ಶ್ರೀಮತಿ ನಜ್ಮುನ್ನಿಸ ಕೆ Abandon electricity privatization for the benefit of farmers: Mrs. Najmunnisa K

ಲೋಕದರ್ಶನ ವರದಿ 

ಶಿರಹಟ್ಟಿ 18 : ಕರ್ನಾಟಕ ರಾಜ್ಯದಲ್ಲಿ ಕೆಇಆರ್‌ಸಿ ವತಿಯಿಂದ ವಿದ್ಯುತ್ ವಿತರಣಾ ಪರವಾನಗಿಯನ್ನು ಟಾಟಾ ಪವರ್ ಕಂಪನಿಯವರಿಗೆ ನೀಡಿದರೆ ರೈತರಿಗೆ, ವಿದ್ಯುತ್ ಬಳಕೆದಾರರಿಗೆ ಹಾಗೂ ನೌಕರರಿಗೆ ಮಾರಕವಾಗಲಿದೆ. ಸರ್ಕಾರ ಎಲ್ಲರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಖಾಸಗೀಕರಣದಿಂದ ಹಿಂದೆ ಸರಿಯಬೇಕು ಎಂದು ಗದಗ ಜಿಲ್ಲೆಯ ಅಧೀಕ್ಷಕ ಅಭಿಯಂತರರು, ಕಾರ್ಯ ಮತ್ತು ಪಾಲನಾ ಅಧಿಕಾರಿ ಶ್ರೀಮತಿ ನಜ್ಮುನ್ನಿಸ ಕೆ ಹೇಳಿದರು. 

ಅವರು ಗುರುವಾರ ಪಟ್ಟಣದ ಕೆಇಬಿ ಕಚೇರಿ ಆವರಣದಲ್ಲಿ ವಿದ್ಯುತ್ ಖಾಸಗೀಕರಣದ ಕುರಿತು ಆಯೋಜಿಸಿದ್ದ ರೈತರಿಗೆ ಹಾಗೂ ವಿದ್ಯುತ್ ಬಳಕೆದಾರರಿಗೆ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ನೀಡುತ್ತಿರುವ ಉಚಿತ ಸೌಲಭ್ಯ ರದ್ದಾಗುವ ಸಾಧ್ಯತೆ ಇದೆ, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಬಹುದು. ಸಣ್ಣ ಕೈಗಾರಿಕೆಗಳಿಗೆ ರಿಯಾಯತಿ ದರದಲ್ಲಿ ನೀಡುತ್ತಿರುವ ವಿದ್ಯುತ್, ಕೈಮಗ್ಗ, ನೇಕಾರರಿಗೆ ಹಾಗೂ ಕಾಫಿ ಬೆಳೆಗಾರರಿಗೆ ನೀಡುವ ಸಬ್ಸಿಡಿ ಬಂದ್ ಮಾಡಿದರು ಅಚ್ಚರಿಪಡಬೇಕಾಗಿಲ್ಲ, ಆದ್ದರಿಂದ ರೈತರು, ವಿದ್ಯುತ್ ಬಳಕೆದಾರರು ಆಕ್ಷೇಪಣಾ ಅರ್ಜಿ ಸಲ್ಲಿಸುವುದು ಬೇಕು ಎಂದು ಹೇಳಿದರು.  

ವಿದ್ಯುತ್ ಸೇವೆ ಸಾರ್ವಜನಿಕರ ಮೂಲಭೂತ ಹಾಗೂ ಅವಶ್ಯಕವಾಗಿದ್ದು, ಅದನ್ನು ತಮ್ಮ ವ್ಯಯಕ್ತಿಕ ಲಾಭದ ಉದ್ದೇಶದಿಂದ ಖಾಸಗಿ ಕಂಪನಿಗಳಿಗೆ ಒಪ್ಪಿಸುವುದು ಸರಿಯಲ್ಲ. ಖಾಸಗೀಕರಣದಿಂದ ರೈತರಿಗೆ ನೀಡಲಾಗುತ್ತಿರುವ ಸಬ್ಸಿಡಿ ಹಾಗೂ ವಿವಿಧ ಸೌಲಭ್ಯಗಳಿಗೆ ಧಕ್ಕೆ ಉಂಟಾಗಬಹುದು ರೈತರಿಗೆ ಹಾಗೂ ವಿದ್ಯುತ್ ಬಳಕೆದಾರರಿಗೆ ಸಲಹೆ ನೀಡಿದರು. ಈ ಜನ ಜಾಗೃತಿ ಕಾರ್ಯಕ್ರಮಕ್ಕೆ ಸೇರಿದ ನೂರಾರು ರೈತರು ಹಾಗೂ ವಿದ್ಯುತ್ ಬಳಕೆದಾರರು ಸರ್ಕಾರದ ಧೋರಣೆಯ ವಿರುದ್ಧ ಆಕ್ಷೇಪಣಾ ಅರ್ಜಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ವ್ಹಿ ವ್ಹಿ ಕಪ್ಪತ್ತನವರ,  ಜಾನು ಲಮಾಣಿ, ಚಾಂದಸಾಬ ಮುಳಗುಂದ, ಸಂದೀಪ ಕಪ್ಪತ್ತನವರ, ಎಇಇ ಅಂಜನಪ್ಪ, ರಾಮಣ್ಣ ಕಂಬಳಿ, ಅಕ್ಬರ್ ಯಾದಗಿರಿ, ಶ್ರೀನಿವಾಸ ಬಾರಬಾರ್, ಹಮೀದ್ ಸನದಿ, ನಜೀರ್ ಡಂಬಳ ಹಾಗೂ ಕೆಇಬಿ ಸಿಬ್ಬಂದಿಗಳು ಇದ್ದರು.