ಕಳಪೆ ಆರೋಪ ಸತ್ಯಕ್ಕೆ ದೂರವಾದುದ್ದು : ವರದಿ ಶಬ್ಬೀರ್ ಸ್ಪಷ್ಟನೆ

ಕಳಪೆ ಆರೋಪ ಸತ್ಯಕ್ಕೆ ದೂರವಾದುದ್ದು : ವರದಿ ಶಬ್ಬೀರ್ ಸ್ಪಷ್ಟನೆ Poor allegations are far from the truth: Reporter Shabbir clarifies

ಲೋಕದರ್ಶನ ವರದಿ

ಕಂಪ್ಲಿ 18:  ಬೆಳಗೋಡಹಾಳ್ ಗ್ರಾಮದ ಮುಸ್ಲಿಂ ಸಮಾಜದ ಸುನ್ನಿ ಖಬರುಸ್ತಾನ್ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಯಲ್ಲಿ ಯಾವುದೇ ಕಳಪೆ ಇಲ್ಲದೇ, ಗುಣಮಟ್ಟದಿಂದ ಕೂಡಿದ್ದು, ಕೆಲವರು ಮಾಡಿರುವ ಸುಳ್ಳು ಆರೋಪಗಳು ಸತ್ಯಕ್ಕೆ ದೂರವಾದುದ್ದು ಎಂದು ಮುಸ್ಲಿಂ ಖಬರುಸ್ತಾನ್ ಸುನ್ನಿ ಕಮಿಟಿ ಪ್ರಧಾನ ಕಾರ್ಯದರ್ಶಿ ವರದಿ ಶಬ್ಬೀರ್ ತಿಳಿಸಿದರು. ತಾಲೂಕಿನ ನಂ.10 ಮುದ್ದಾಪುರ ಗ್ರಾಪಂಯ ಬೆಳಗೋಡಹಾಳ್ ಗ್ರಾಮದ ಬಳಿಯಲ್ಲಿರುವ ಸುನ್ನಿ ಖಬರುಸ್ತಾನ್ ಬಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಇಲ್ಲಿನ ಗ್ರಾಮದಲ್ಲಿ ಮುಸ್ಲಿಂ ಖಬರುಸ್ತಾನ್ ಸುನ್ನಿ ಕಮಿಟಿಗೆ ಸೇರಿದಂತ ಅರ್ಧಎಕರೆ ಜಾಗವಿದೆ. ಈ ಜಾಗದಲ್ಲಿ ರಕ್ಷಣಾ ಗೋಡೆ ನಿರ್ಮಿಸಬೇಕೆಂಬ ಹಿನ್ನೆಲೆಯಲ್ಲಿ ವಕ್ಫ್‌ ಬೋರ್ಡ್‌(ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ)ಯಿಂದ ಸುಮಾರು 5 ಲಕ್ಷ ಬಂದಿದೆ. ಈ ಅಲ್ಪ ಅನುದಾನದಲ್ಲಿ ಕಾಂಪೌಂಡ್ ಗೋಡೆ ನಿರ್ಮಿಸಲಾಗುತ್ತಿದೆ.

ಯಾವುದೇ ಟೆಂಡರ್ ಮತ್ತು ಗುತ್ತಿಗೆ ಇಲ್ಲದೇ, ಅನುದಾನ ಕಡಿತವಾಗುತ್ತದೆಂಬ ಭಾವನೆಯಿಂದ ಸ್ವತಃ ಕಮಿಟಿಯವರಾದ ನಾವು ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಈ ಕಾಮಗಾರಿಯನ್ನು ಜವಾಬ್ದಾರಿತವಾಗಿ ಕೆಲಸ ಮಾಡಿಸಲಾಗುತ್ತಿದೆ. ಆದರೆ, ನಮ್ಮ ಸಮಾಜದ ನಬಿಸಾಬ್ ಎಂಬ ವ್ಯಕ್ತಿ ಇಲ್ಲಿನ ರಕ್ಷಣಾ ಗೋಡೆ ಕಾಮಗಾರಿ ಕಳಪೆಯಾಗಿದೆಂದು ಆರೋಪಿಸಿದ್ದಾರೆ. ಈ ಆರೋಪ ಶುದ್ಧ ಸುಳ್ಳು. ಅಲ್ಪ ಅನುದಾನದಲ್ಲಿ ಕಳಪೆ ಕಾಮಗಾರಿ ಮಾಡುವುದಾದರೂ ಹೇಗೆ ಸ್ವಾಮಿ? ಎಂದೇಳುವ ಜೊತೆಗೆ ಇಲ್ಲಿನ ಕಾಮಗಾರಿ ಕಳಪೆ ಎಂಬುವುದು ಸತ್ಯಕ್ಕೆ ದೂರವಾದದ್ದು. ಇಲ್ಲಿನ ಕಾಮಗಾರಿಯಲ್ಲಿ ಕಲ್ಲು, ಮರಳು, ಸಿಮೆಂಟ್ಗಳನ್ನು ಬಳಸಿ ಗುಣಮಟ್ಟದ ಕಾಮಗಾರಿ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.