ಆನ್ಲೈನ್ ಶಿಕ್ಷಣ ಬೇಕೋ..? ಬೇಡ್ವೋ..?! ತಜ್ಞರ ವರದಿಯ ಬರೆ, ಪೋಷಕರಿಗೆ ಹೊರೆ..!

15 ಏಪ್ರಿಲ್ 2020 ರಂದು ಕನರ್ಾಟಕದ ಮಾದ್ಯಮಗಳು ಮತ್ತು ಪತ್ರಿಕೆಗಳು ಭಯಾನಕ ಅಘಾತಕಾರಿ ಘಟನೆಯೊಂದನ್ನು ಹೊರ ಹಾಕಿತ್ತು. ಅದೇನೆಂದರೆ; 
ರಾಜಾಜಿನಗರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಯೆಂಬ ಮೋಸದ ಬಲೆಗೆ ಬೀಳಿಸಿಕೊಂಡು ಆಕೆಯನ್ನು ಕಾಮತೃಷೆಗೆ ಬಳಸಿಕೊಂಡಿದ್ದಲ್ಲದೇ ಆ ಹೆಣ್ಮಗಳ ಪಾಲಕರು ಯಾರೂ ಇಲ್ಲದಿದ್ದಾಗ ಆಕೆಯ ಮನೆಗೆ ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಅವಳ ಮನೆಯಿಂದ 500 ಗ್ರಾಂ ಚಿನ್ನ ಮತ್ತು 57 ಸಾವಿರ ರೂಪಾಯಿ ಹಣವನ್ನು ಕದ್ದು ಪರಾರಿಯಾಗಿದ್ದ ಹುಡುಗನೊಬ್ಬ ಪೋಲಿಸರ ಕೈಗೆ ಸಿಕ್ಕಿ ಬಿದ್ದ ಕೇಸ್ ಅದು. ಪೋಲೀಸ್ ತನಿಖೆ ತೀವ್ರವಾದ ಮೇಲೆ ಹೆಣ್ಮಕ್ಕಳು ಅಷ್ಟೇ ಏಕೆ ಹೆಣ್ಣುಮಕ್ಕಳಿರುವ ಪೋಷಕರೆಲ್ಲಾ ಈ ಘಟನೆಯಿಂದ ಮತ್ತು ಈತನ ಕೃತ್ಯದಿಂದ ದಂಗಾಗಿ ಹೋದರು. ಉತ್ತರ ವಿಭಾಗದ ಡಿ.ಸಿ.ಪಿ ಸಾಹೇಬರು ಈ ಘಟನೆಯ ವಿವರಗಳನ್ನು ವಿವರಿಸುವಾಗ ಎದೆ ಜಲ್ಲೆನಿಸುತ್ತಿತ್ತು. ಆತ ಬರೋಬ್ಬರಿ 2.314 ಹೆಣ್ಮಕ್ಕಳ ಜೊತೆ ಸ್ನೇಹ ಸಂಪರ್ಕ ಹೊಂದಿರುವುದರ ಜೊತೆಗೆ ಅವರೊಂದಿಗೆ ಮೆಸೆಂಜರ್ ಮೂಲಕವೂ ಸಹಾ ಚಾಟಿಂಗ್ ಮಾಡಿದ್ದು ಅದರಲ್ಲಿ 50 ಹೆಣ್ಮಕ್ಕಳೊಂದಿಗೆ ಪ್ರೀತಿಸುವ ನಾಟಕವಾಡಿ ದೈಹಿಕ ಸಂಪರ್ಕ ಹೊಂದಿರುವುದರ ಜೊತೆಗೆ ಆ ಮಹಿಳೆಯರ ಖಾಸಗಿ ಪೋಟೋ ತೋರಿಸಿ ಬೆದರಿಸಿ ಚಿನ್ನಾಭರಣ ಮತ್ತು ಸಾಕಷ್ಟು ಹಣವನ್ನು ಪೀಕಿದ್ದ ಎಂಬ ಅಘಾತಕಾರಿ ವಿಷಯ ಬೆಳಕಿಗೆ ಬಂತು. 
ಈ ಘಟನೆಯನ್ನು ಹೀಗೆಕೆ ನೆನಪಿಸಿದೆ ಎಂದರೇ ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಆ 10ನೇ ತರಗತಿ ಯುವತಿಯ ಪಾಲಕರು ಅವಳ ಶಾಲೆಯ ಪ್ರಾಜೆಕ್ಟ್ ವಕರ್್ ಗೆ ಸಹಾಯವಾಗಲೆಂದು ಸ್ಮಾಟರ್್ ಮೊಬೈಲ್ ಕೊಡಿಸಿದ್ದು. ಜೊತೆಗೆ ಆ ಹುಡುಗಿ ಆ ಮೊಬೈಲನ್ನು ದುರುಪಯೋಗಪಡಿಸಿಕೊಂಡಿದ್ದು. ನಾವು ಈ ಘಟನೆಯಲ್ಲಿ ಯೋಚಿಸಬೇಕಾದ ಮತ್ತೊಂದು ಅಂಶವಿದೆ. ಅದೇನೆಂದರೇ ಆ ಆರೋಪಿಯ ಸಂಪರ್ಕದಲ್ಲಿದ್ದ 2.314 ಹೆಣ್ಮಕ್ಕಳು ಯಾರು...? ಯಾಕೆ ಅವರೆಲ್ಲಾ ಮುಂದೆ ಬರಲಿಲ್ಲ? ಇದನ್ನೆಲ್ಲಾ ಯೋಚಿಸಿದಾಗ ನಮಗೆ ದಿಗಿಲು ಬಡಿದಂತಾಗುತ್ತದೆ. ಹಾಗಂತ ಹೆಣ್ಮಕ್ಕಳು ಮಾತ್ರ ತಪ್ಪು ಗಂಡು ಮಕ್ಕಳೆ ಸರಿ ಎಂದಲ್ಲಾ ಈ ತಂತ್ರಜ್ಞಾನ ಯುಗದಲ್ಲಿ ಹಾಳಾಗುವವರು ಬರೀ ಹೆಣ್ಮಕ್ಕಳು ಮಾತ್ರವಲ್ಲಾ ಗಂಡುಮಕ್ಕಳು ಅದಕ್ಕೆ ಹೊರತಾಗಿಲ್ಲಾ, ಈ ತಂತ್ರಜ್ಞಾನ ಯುಗಕ್ಕೆ ಲಿಂಗ ಭೇದವಿಲ್ಲ, ಜಾತಿ ಭೇದವಿಲ್ಲಾ ಎಲ್ಲರನ್ನು ಸೆಳೆಯುವುದೇ ಈ ತಂತ್ರಜ್ಞಾನದ ಕೆಲಸ. 
ಈ ಘಟನೆಯಾದ ನಂತರ ಉತ್ತರ ವಿಭಾಗದ ಡಿ.ಸಿ.ಪಿ ಸಾಹೇಬರು ಹೇಳಿದ್ದು; 
"ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾದ ಮುಗ್ಧ ಹೆಣ್ಣು ಮಕ್ಕಳ ಮನಸೆಳೆದು ಮೋಸ ಮಾಡುವವರು ಹೆಚ್ಚಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪೋನ್ ಕೊಡಿಸುವ ಮುನ್ನ ಪಾಲಕರು ನೂರಾರು ಬಾರಿ ಯೋಚಿಸಬೇಕು ಅಲ್ಲದೇ ಅವರ ದೈನಂದಿನ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು" ಎಂಬುದಾಗಿ. ಇದು ಇಂದಿನ ಪರಿಸ್ಥಿತಿಗೆ ಹೇಳತಕ್ಕ ಮಾತಾಗಿದೆ. ಕಾರಣವೇನೆಂದರೆ ಇಂದಿನ "ಆನ್ ಲೈನ್ ಶಿಕ್ಷಣವೆಂಬ ಗುಮ್ಮ.... 
ಆನ್ ಲೈನ್ ಎಂದರೇ ಸಾಕು ಮೈ ನಡುಕ ಹುಟ್ಟಿಸುತ್ತೆ. ಆನ್ ಲೈನ್ ಮೂಲಕವೇ ಅದೆಷ್ಟೋ ಅಮಾಯಕ ಜನರ ಖಾತೆಗೆ ಕನ್ನ ಬಿದ್ದು ಬೀದಿಪಾಲಾಗಿದ್ದಾರೆ ಅಲ್ಲದೇ ಬೀದಿ ಹೆಣವಾಗಿದ್ದಾರೆ ಇದಕ್ಕೆ ಕಾರಣ ಆನ್ ಲೈನ್ ಜೂಜು, ಆನ್ ಲೈನ್ ವ್ಯವಹಾರ. ಈಗ ಇದರ ಪಟ್ಟಿಗೆ ಸೇರಿಸಬೇಕೆಂದಿರುವುದು ಆನ್ ಲೈನ್ ಶಿಕ್ಷಣ. 
ಹಾಗಂತ ಆನ್ ಲೈನ್ ವ್ಯವಹಾರ, ಆನ್ ಲೈನ್ ಶಿಕ್ಷಣ ತಪ್ಪು ಎಂದು ಹೇಳುತ್ತಿಲ್ಲಾ ಆದರೇ ಎಲ್ಲದರಲ್ಲೂ ಒಳಿತು ಕೆಡುಕು ಇದ್ದೇ ಇರುತ್ತೆ ಹಾಗಾಗಿ ಅದನ್ನು ದುರುಪಯೋಗ ಪಡಿಸಿಕೊಳ್ಳಬೇಕೋ ಅಥವಾ ಉಪಯೋಗಿಸಿಕೊಳ್ಳಬೇಕೋ ಎಂದು ನಿರ್ಧರಿಸಬೇಕಾದವರು ನಾವು. 
ಇಡೀ ಜಗತ್ತಿಗೆ ಕೋವಿಡ್-19 ವಕ್ಕರಿಸಿ ಅಟ್ಟಹಾಸ ಮೆರೆಯುತ್ತಿರುವುದರ ಪರಿಣಾಮ ಎಲ್ಲೆಲ್ಲೂ ಹಸಿವಿನ ಹಾಹಾಕಾರ ಎದ್ದಿದೆ. ಜನರಿಗೆಲ್ಲಾ ಹುಚ್ಚಿಡಿಂತಾಗುತ್ತಿದೆ. ಮಾಸ್ಕ್ ಇಲ್ಲದೇ ರಸ್ತೆ ಮೇಲೆ ಓಡಾಡಿದರೇ ಜನರೆಲ್ಲಾ ಆತನನ್ನು ಕಳ್ಳನಂತೆ ನೋಡುವಂತಾಗಿದೆ ಪರಿಸ್ಥಿತಿ. ಜನಸಾಮಾನ್ಯರ ಪಾಡಂತೂ ಆ ದೇವರಿಗೆ ಗೊತ್ತು. 
ಈ ಕೋವಿಡ್ ಆರ್ಭಟದಿಂದ ಸಕರ್ಾರಗಳು, ಸಚಿವರು ಒಟ್ಟಾರೆಯಾಗಿ ಪ್ರಧಾನಿಯಿಂದ ಹಿಡಿದು ಗ್ರಾಮ ಪಂಚಾಯತ್ ಸದಸ್ಯನವರೆಗೂ ದಿಗಿಲುಬಡಿಸಿದೆ. 
ಸಕರ್ಾರಗಳಿಗೆ ಯಾವುದನ್ನು ಮಾಡಿದರೆ ಒಳಿತು ಎಂಬುದನ್ನೆ ಸರಿಯಾಗಿ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. 
ಈ ಕೋವಿಡ್ ಒಡೆತದಿಂದಾಗಿ ಶಾಲೆಗಳು ಮುಚ್ಚಿವೆ, ಖಾಸಗಿ ಶಾಲೆಯ ಮಾಲಿಕರು, ಶಿಕ್ಷಕರು ಎಲ್ಲಾ ನೌಕರರು ಕಣ್ಣೀರಿಡುವಂತಹ ಪರಿಸ್ಥಿತಿ ಬಂದೊದದಗಿದೆ ಇಂತಹ ಸಂದರ್ಭದಲ್ಲಿ ಶಾಲೆ ತೆರೆದರಂತೂ ಕಥೆ ಮುಗಿದ ಹಾಗಿಯೇ ಈ ವಿಚಾರ ಸಕರ್ಾರಕ್ಕೆ ಗೊತ್ತಿರುವುದರಿಂದ ಮತ್ತು ಪಾಲಕರು ಮಕ್ಕಳ ಆರೋಗ್ಯಕ್ಕಿಂತ ಶಾಲೆ ಹೆಚ್ಚಲ್ಲಾ ಎಂಬ ಮನೋಭಾವವನ್ನು ಅರಿತಿರುವ ಸಕರ್ಾರ ಈಗ ತಜ್ಞರ ವರಧಿಯನ್ನು ಆಧರಿಸಿ ಆನ್ ಲೈನ್ ಶಿಕ್ಷಣವನ್ನು ಜಾರಿಗೆ ತರುವ ಯೋಚನೆಯಲ್ಲಿದೆ. 
'ಕನರ್ಾಟಕದ ಶಾಲಾ ಶಿಕ್ಷಣದಲ್ಲಿ ಕಲಿಕೆಯ ಮುಂದುವರಿಯುವಿಕೆ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕಾಗಿ ಮಾರ್ಗಸೂಚಿಗಳು' ಎಂಬ ಶೀಷರ್ಿಕೆಯ ಅಡಿಯಲ್ಲಿ ಸಿದ್ದವಾಗಿರುವ ವರದಿಯನ್ನು ಈಗಾಗಲೇ ಸಕರ್ಾರಕ್ಕೆ ಸಲ್ಲಿಸಿದ್ದು ಇದರಲ್ಲಿ ಯಾವ ಯಾವ ಹಂತದಲ್ಲಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕಲ್ಪಿಸಬೇಕೆಂಬುದಿದೆ. ಅಲ್ಲದೇ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವಯೋಮಾನಕ್ಕನುಗುಣವಾಗಿ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಜಾರಿಗೆ ತರುವಂತೆ ಆ ವರದಿಯನ್ನು ತಯಾರಿಸಿರುವ ತಜ್ಞರು ಸಕರ್ಾರಕ್ಕೆ ಮನವಿ ಮಾಡಿದ್ದಾರೆ. ಹಾಗಾದರೇ ಈ ಆನ್ ಲೈನ್ ಶಿಕ್ಷಣ ಜಾರಿಯಾದರೇ ಏನೆನೆಲ್ಲಾ ಆಗಬಹುದು? ಯಾರಿಗೆ ಹೊರೆಯಾಗಬಹುದು? ಪೋಷಕರು ಮತ್ತು ವಿದ್ಯಾಥರ್ಿಗಳು ಮತ್ತು ಶಿಕ್ಷಕರು ಏನೆನೆಲ್ಲಾ ಸಮಸ್ಯೆ ಎದುರಾಗಬಹುದೆಂಬುದನ್ನು ನೋಡುವುದಾದರೇ.... 
1. ಆನ್ ಲೈನ್ ಶಿಕ್ಷಣಕ್ಕೆ ಮಕ್ಕಳಿಗೆ ಸ್ಮಾಟರ್್ ಫೋನ್ ಅಥವಾ ಲ್ಯಾಪ್ಟಾಪ್ ಇಂಟನರ್ೆಟ್ ಬೇಕೆ ಬೇಕು. ಈ ಕೊರೊನಾ ಹೊಡೆತದಲ್ಲಿ ಮೊದಲೆ ಕೆಲಸವಿಲ್ಲದೆ ಕಂಗಾಲಾಗಿರುವ ಪೋಷಕರು ಇದನ್ನೆಲ್ಲಾ ಕೊಡಿಸುವುದಾದರೂ ಹೇಗೆ..? 
2. ಹದಿಹರೆಯದಲ್ಲಿರುವ ಮಕ್ಕಳು ಹಾದಿ ತಪ್ಪಿ ಆನ್ ಲೈನ್ ಶಿಕ್ಷಣಕ್ಕೆ ಇರುವ ತಂತ್ರಜ್ಞಾನಗಳ ದುರುಪಯೋಗಪಡಿಸಿಕೊಂಡು ಹಾಳಾಗಬಹುದು. 
3. ಮೊದಲೇ ಹಳ್ಳಿ ನಗರದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸರಿಯಾಗಿ ಪೂರೈಕೆಯಾಗುತ್ತಿಲ್ಲಾ ಹೀಗಿರುವಾಗ ಆನ್ ಲೈನ್ ಶಿಕ್ಷಣದ ಕಥೆ ಹೇಗೆ..? 
4. ಇಂಟನರ್ೆಟ್ನ ಸ್ಪೀಡ್ ಕೆಲವೊಮ್ಮೆ ಕಡಿಮೆಯಾಗಿ ಇಂಟನರ್ೆಟ್ ಕಾರ್ಯ ನಿರ್ವಹಿಸುವುದಿಲ್ಲಾ ಆಗ ಮಾಡುವುದಾದರೂ ಏನು..? 
5. ಮಕ್ಕಳಿಗೆ ಮತ್ತು ಪೋಷಕರಿಗೆ ಇಂಟನರ್ೆಟ್, ಲ್ಯಾಪ್ಟಾಪ್, ಸ್ಮಾಟರ್್ ಫೋನ್ ಬಗ್ಗೆ ಬೇಸಿಕ್ ಜ್ಞಾನ ಇಲ್ಲದವರ ಕಥೆ ಏನಾಗಬೇಕು.? 
6. ಮಕ್ಕಳ ಕೈಗೆ ಲ್ಯಾಪ್ಟಾಪ್ ಮತ್ತು ಇಂಟನರ್ೆಟ್ ಕೊಟ್ಟ ಮೇಲೆ ಪೋಷಕರು ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಅವರ ಮೇಲೆ ನಿಗಾವಹಿಸಬೇಕಾಗುತ್ತದೆ. 
7. ಹತ್ತು ಬಾರಿ ಓದುವುದಕ್ಕಿಂತ ನೋಡುವುದಕ್ಕಿಂತ ಒಂದು ಬಾರಿ ಬರೆದು ಓದುವುದರಿಂದ ಬಹಳ ಬೇಗ ತಲೆಗೆ ಹತ್ತಿತ್ತೆ ಅಂತಾರೆ ಅಂತಹದರಲ್ಲಿ ಮಗುವಿಗೆ ವರ್ಣಮಾಲೆಯನ್ನು ಕೈಯಲ್ಲಿ ತಿದ್ದಿಸಬೇಕೆ ಹೊರತು ತೋರಿಸುವುದರಿಂದ ಪ್ರಯೋಜನ ಅಷ್ಟು ಪರಿಣಾಮಕಾರಿಯಲ್ಲ. 
8. ಆನ್ ಲೈನ್ ಶಿಕ್ಷಣವೇ ಮುಂದುವರೆದರೇ ಗುರು-ಶಿಷ್ಯ ಎಂಬ ಸಂಬಂಧ ಮುರಿದು ಬಿದ್ದು ಕೇವಲ ಮಿಷಿನ್ ಯುಗ ಎನಿಸಿಕೊಳ್ಳಬಹುದು. 
9. ಇನ್ನೂ ಶಿಕ್ಷಕರು ಏನಾದರೂ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಬೋಧಿಸುವ ವಿಧಾನ ಗೊತ್ತಿಲ್ಲದಿದ್ದರೇ ಅಥವಾ ಅವರಿಗೆ ಅದನ್ನು ಉಪಯೋಗಿಸುವ ತರಭೇತಿ ಇಲ್ಲದಿದ್ದರೇ ಶಿಕ್ಷಕರು ಮತ್ತು ವಿದ್ಯಾಥರ್ಿಗಳಿಬ್ಬರೂ ಗೊಂದಲಕ್ಕೆ ಸಿಲುಕುತ್ತಾರೆ. 
10. ಮಕ್ಕಳು ಸದಾ ಸ್ಮಾಟರ್್ ಫೋನ್ ಮತ್ತು ಲ್ಯಾಪ್ಟಾಪ್ ಉಪಯೋಗಿಸುವುದರಿಂದ ಅದರ ಗೀಳಿನಿಂದ ಹೊರಬರಲಾಗದೇ ಅದನ್ನೆ ಅವಲಂಬಿಸಬಹುದು. 
11. ಮೊಬೈಲ್ ಮತ್ತು ಲ್ಯಾಪ್ಟಾಪ್ ತೆಗೆದುಕೊಂಡ ನಂತರ ಅದರಲ್ಲಿ ತಮ್ಮ ಕುಟೂಂಬದ ಮತ್ತು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದು ಸಹಜ. ಈ ಯುಗದಲ್ಲಿ ಹ್ಯಾಕರ್ಗಳ ಹಾವಳಿಯಿಂದಾಗಿ ನಮ್ಮ ವೈಯಕ್ತಿಕ ಎಲ್ಲಾ ಮಾಹಿತಿಗಳು ಸೋರಿಕೆಯಾಗುವ ಸಂಭವವು ಹೆಚ್ಚಾಗಿರುತ್ತದೆ. 
12. ಅತಿಯಾಗಿ ಸ್ಮಾಟರ್್ ಫೋನ್ ಮತ್ತು ಲ್ಯಾಪ್ಟಾಪನ್ನು ಒಂದೇ ಕಡೆ ಕೂತು ಉಪಯೋಗಿಸುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಖಾಯಿಲೆಗಳಾದ ಬೊಜ್ಜು, ಹೃದಯಸಂಬಂಧಿ ಕಾಯಿಲೆ ಹೊಟ್ಟೆ ಹಾಗೂ ಮೂತ್ರಕೋಶಕ್ಕೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ಅತೀಯಾದ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಕೆಯಿಂದ ದೃಷ್ಟಿದೋಷ ಹಾಗೂ ಮಿದುಳಿನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ. 
13. ಮೊಬೈಲ್ ಮತ್ತು ಲ್ಯಾಪ್ಟಾಪಿನ ರೇಡಿಯೊ ತರಂಗಾತಂರಗಳ ಮೂಲಕ ಕಾರ್ಯನಿರ್ವಹಿಸುವ ಮೂಲಕ ಇದು ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ ಇದು ಪೃಕೃತಿಯಲ್ಲಿರುವ ಸೂಕ್ಷ್ಮ ಜೀವಕೋಶಗಳ ಮೇಲೆ ದಾಳಿ ಮಾಡುವುದಷ್ಟೇ ಅಲ್ಲ ಇದರ ತರಂಗಗಳಿಂದ ಮನುಷ್ಯ ಮತ್ತು ಪಕ್ಷಿಸಂಕುಲ ಪರಿಸರದ ಮೇಲೆ ಅಗಾಧ ಪರಿಣಾದ ಬೀರುತ್ತದೆ ಅದಕ್ಕೆ ಉತ್ತಮ ಉದಾಹರಣೆ ಎಂದರೆ ಇಂದು ಗುಬ್ಬಿಮರಿಗಳು ಹಂತಹಂತವಾಗಿ ಕಣ್ಮರೆಯಾಗುತ್ತಿರುವುದು. 
ಹೀಗೆ ಸಾಕಷ್ಟು ಅಂಶಗಳು ಆನ್ ಲೈನ್ ಶಿಕ್ಷಣದಿಂದ ಆಗುವಂತಹ ಅಪಾಯಗಳು, ಹಾಗೆಂದ ಮಾತ್ರಕ್ಕೆ ಆನ್ ಲೈನ್ ಶಿಕ್ಷಣ ಸರಿಯಿಲ್ಲಾ ಎಂಬುದು ಸರಿಯಲ್ಲ. ಆದರೇ ನಮ್ಮನ್ನಾಳುವ ಸಕರ್ಾರ ಯಾವುದೇ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾದರೇ ಅದರ ಉಪಯೋಗ ದುರುಪಯೋಗಗಳನ್ನು ಆಧರಿಸಿ ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಮೊದಲೆ ಕೊರೊನಾ ಒಡೆತಕ್ಕೆ ಬಳಲಿ ಬೆಂಡಾಗುತ್ತಿರುವ ನಮ್ಮ ರಾಜ್ಯಕ್ಕೆ ಈಗ ಅಗತ್ಯವಾಗಿ ಬೇಕಿರುವುದು ಜನರ ಆರೋಗ್ಯ ರಕ್ಷಣೆ. ಹಾಗಾಗಿ ಸಕರ್ಾರವಾಗಲಿ, ಜನಸಾಮಾನ್ಯರಾದ ನಾವಾಗಲಿ ನಮ್ಮನ್ನು ರಕ್ಷಿಸಿಕೊಳ್ಳಬೇಕಾಗಿರುವುದು ಈ ಸಂದರ್ಭದ ಆದ್ಯ ಕರ್ತವ್ಯ. ತದ ನಂತರ ಎಲ್ಲವು. ಹಾಗಾಗಿ ಸಕರ್ಾರ ಈ ಆನ್ ಲೈನ್ ಶಿಕ್ಷಣ ಜಾರಿಗೆ ತಂದು ಸಾಮಾನ್ಯ ಜನರ ಕೆಂಗಣ್ಣಿಗೆ ಗುರಿಯಾಗುವ ಬದಲು ಬೇರೆ ಮಾರ್ಗವನ್ನು ಯೋಚಿಸುವುದೇ ಒಳಿತು.
ಶ್ವೇತಾ ಪ್ರದೀಪ್
ಯುವ ಲೇಖಕಿ, ಮಂಡ್ಯ