ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಡಾ.. ಸಾ.ರಾ. ಅಬೂಬಕ್ಕರ ಅವರ ಪ್ರಾದೇಶಿಕ ಕಾದಂಬರಿ "ಚಂದ್ರಗಿರಿ ತೀರದಲ್ಲಿ ಆಗಿನ ಕಾಲದ ಜನಪ್ರಿಯ ಲಂಕೇಶ ವಾರ ಪತ್ರಿಕೆಯಲ್ಲಿ 1980ರಲ್ಲಿ ಧಾರವಾಹಿಯಾಗಿ ಪ್ರಕಟಗೊಂಡು ಕನ್ನಡ ಜಾಣ-ಜಾಣೆಯರ ಜಾಗೃತ ಮನಸ್ಸುಗಳನ್ನು ಸೂರೆಗೊಂಡಿತು. ಈ ಕಾದಂಬರಿಯು ಮೊದಲು 1984ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡು ಅಂದಿನಿಂದ ಇಂದಿನವರೆಗೆ 11ಮುದ್ರಣಗಳನ್ನು ಕಂಡು 12 ಸಾವಿರ ಪ್ರತಿಗಳು ಮಾರಾಟವಾದ ದಾಖಲೆ ಇದೆ. ಇದು 'ಸಾಹಿತ್ಯ ಅಕಾಡೆಮಿ ಪ್ರಶಸ್ತಿ' ಮತ್ತು ಸಾಹಿತ್ಯ ಪರಿಷತ್ತಿನ 'ಮಲ್ಲಿಕಾ ಪ್ರಶಸ್ತಿ' ಯನ್ನು ಪಡೆದುಕೊಂಡಿದೆ. ತಮಿಳು ಭಾಷೆಯಲ್ಲಿ ಚಲನಚಿತ್ರವಾಗಿ 3ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ತಮಿಳು, ಮಲೆಯಾಳಿ, ಓರಿಯಾ, ಮರಾಠಿ, ಇಂಗ್ಲೀಷ್ ಮುಂತಾದ ಭಾಷೆಗಳಲ್ಲಿ ಅನುವಾದಗೊಂಡಿದೆ. ಮುಸ್ಲಿಂ ಜನಾಂಗದ ವಾಸ್ತವಿಕ ಬದುಕಿನ ಬವಣೆಗಳ ಹಾಗೂ ಧರ್ಮದ ಕಟ್ಟುಪಾಡುಗಳಲ್ಲಿ ಬಂಧಿತರಾಗಿ ಶೋಷಣೆಗೊಂಡ ಮಹಿಳೆಯರ ಧ್ವನಿಗಳನ್ನು ಕಾದಂಬರಿ ಚಿತ್ರಿಸಿ, ನಾಡಿನ ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದು ಇಸ್ಲಾಂ ಧರ್ಮದಲ್ಲಿ ಜಾರಿಯಲ್ಲಿರುವ ತಲಾಖ್ ಪದ್ಧತಿಯ ಕೆಟ್ಟ ಪರಿಣಾಮಗಳನ್ನು ಅಭಿವ್ಯಕ್ತಿಸುವ ಕಥಾನಕವನ್ನು ಒಳಗೊಂಡಿದೆ. ಜಗತ್ತಿನ ಎಲ್ಲ ಸಾಹಿತ್ಯ ಪ್ರಕಾರಗಳು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷರ ಅಹಂಕಾರಕ್ಕೆ ಸಿಕ್ಕು ನಲುಗಿ ಹೋದ ಅಸಂಖ್ಯಾತ ಮಹಿಳೆಯರ ವಿಷಾದಕರ ಕಥಾನಕಗಳನ್ನು ಹಾಡುತ್ತಲೇ ಬಂದಿವೆ. ಸಾಹಿತ್ಯದ ಪ್ರಕಾರಗಳಲ್ಲಿ ಕಾದಂಬರಿಯು ವಾಸ್ತವ ಬದುಕಿಗೆ ಬಹಳಷ್ಟು ಹತ್ತಿರವಾಗಿದೆ. ಈ ನಿಟ್ಟಿನಲ್ಲಿ ಡಾ. ಅಬೂಬಕ್ಕರ ಅವರು ಮುಸ್ಲೀಂ ಮಹಿಳೆಯರ ವಾಸ್ತವ ಬದುಕಿನ ತಲ್ಲಣಗಳನ್ನು, ಸಂವೇದನೆಗಳನ್ನು ಮಾಮರ್ಿಕವಾಗಿ ಚಿತ್ರಿಸಿರುವದರಿಂದ ಈ ಕಾದಂಬರಿಯನ್ನು ಸ್ತ್ರೀವಾದಿ ಚಿಂತನೆಗಳ ನೆಲೆಯಲ್ಲಿ ವಿಶ್ಲೇಷಿಸುವದು ಬಹಳ ಉಚಿತವೆನಿಸುತ್ತದೆ. ಧರ್ಮ ಯಾವುದಾದರೇನು, ಮಹಿಳೆಯರ ಸಂಕಷ್ಟಗಳು, ತಲ್ಲಣಗಳು ಒಂದೇ ಅಗಿರುತ್ತವೆ ಎಂದು ಕಾದಂಬರಿ ನಿರೂಪಿಸಲು ಶಕ್ತವಾಗಿದೆ.
ಕಾದಂಬರಿಯು ಮುಖ್ಯವಾಗಿ ಎರಡು ಕಥಾನಕಗಳನ್ನು ಹೊಂದಿದೆ; ಮಹಮದ್ಖಾನ್ ಫಾತಿಮಾ ಹಾಗೂ ರಶೀದ್ ನಾದಿರಾ ಇವರ ಜೀವನದ ಬವಣೆಗಳ ಸುತ್ತ ಕಥೆ ಹೆಣೆಯಲ್ಪಟ್ಟಿದೆ. ಹೆಂಡತಿಯನ್ನು ಯಾವಾಗಲೂ ಬೆತ್ತದಿಂದ ಬಾರಿಸಿ, ಹಿಂಸಿಸುತ್ತಿದ್ದ, ಕೋಪಿಷ್ಟ, ದಪರ್ಿಷ್ಟನಾದ ಹಾಗೂ ಪಿತೃ ಪ್ರಧಾನ ವ್ಯವಸ್ಥೆಯ ಪ್ರತಿನಿಧಿಯಂತಿರುವ ಮಹಮದ್ಖಾನ್, ಆತನ ಮಿತಿಮೀರಿದ ಕ್ರೌರ್ಯತೆ ಹಾಗೂ ದೌರ್ಜನ್ಯವನ್ನು ಸಹಿಸಿಕೊಂಡೇ, ಎರಡು ಹೆಣ್ಣು ಮಕ್ಕಳಾದ ನಾದಿರಾ ಮತ್ತು ಜಮೀಲಾಳರಿಗೆ ಜನ್ಮವಿತ್ತು, ಬದುಕಿನ ಕಷ್ಟಗಳನ್ನೇ ಹೊತ್ತು, ಅವುಗಳ ವಿರುದ್ಧ ಸೆಣಸುತ್ತ ಸಾಗಿರುವ ಫಾತಿಮ್ಮಾ, ನಾದಿರಾಳನ್ನು ತನ್ನ ಜೀವವೆಂದೇ ಪ್ರೀತಿ ಇಟ್ಟುಕೊಂಡು ಮದುವೆಯಾದ ರಶೀದ್-ಈ ಎಲ್ಲ ಮುಖ್ಯ ಪಾತ್ರಗಳು ಬುದುಕಿನ ಸವಾಲುಗಳ ವಿರುದ್ಧ ಹೋರಾಡುತ್ತ ಕಾದಂಬರಿಯ ಜೀವಂತಿಕೆಯನ್ನು ಹೆಚ್ಚಿಸಿವೆ. ಕೌಟುಂಬಿಕ ಜೀವನದ ಕಷ್ಟಗಳೇನು ಎಂದು ಅರಿಯದ ಮುಗ್ಧೆ ನಾದಿರಾ ತನ್ನ 14ನೇ ವಯಸ್ಸಿನಲ್ಲಿ 23ವರ್ಷದ ರಶೀದ್ನನ್ನು ವಿವಾಹವಾಗುತ್ತಾಳೆ. ಅವರ ಸುಖ-ದಾಂಪತ್ಯ ಜೀವನದ ಪ್ರತೀಕವಾಗಿ ಅವರಿಗೆ ಒಂದು ಗಂಡು ಮಗು ಕೂಡಾ ಜನಿಸುತ್ತದೆ. ನಾದಿರಾಳ ತಂಗಿ ಜಮೀಲಾಳ ಮದುವೆ ನಿಶ್ಚಯವಾಗಿ, ತಂದೆ ಮಹಮದ್ಖಾನ್ರಿಗೆ ಹಣಕಾಸಿನ ಸಮಸ್ಯೆ ಉಂಟಾಗಿ ಅಳಿಯ ರಶೀದ್ನ ಹತ್ತಿರ ಹಣಕ್ಕಾಗಿ ಕೈ ಚಾಚುತ್ತಾರೆ. ಕಾದಂಬರಿಯಲ್ಲಿ ಸಂಘರ್ಷಕ್ಕೆ ಕಾರಣವಾಗುವ ಅಂಶ ಪ್ರಾರಂಭವಾಗುವದು ಇಲ್ಲಿಂದಲೆ. ಚಿಕ್ಕ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ ರಶೀದ್ನಿಗೆ ಹಣ ಕೊಡುವದು ಸಾಧ್ಯವಾಗುವದಿಲ್ಲ. ಇದರಿಂದ ಕುಪಿತಗೊಂಡ ಮಹಮದ್ಖಾನ್ ಮಗಳು ನಾದಿರಾ ಮತ್ತು ಅವಳ ಮಗುವನ್ನು ತನ್ನ ಮನೆಗೆ ಕರೆ ತರುತ್ತಾನೆ. ರಶೀದನಿಗೆ ಸುಳ್ಳು ಹೇಳಿ ಅವನಿಂದ ಮಗಳಿಗೆ ತಲಾಖ್ ಪಡೆಯುತ್ತಾನೆ. ಊರಿನ ಒಬ್ಬ ಶ್ರೀಮಂತ ವಿದುರ ಸೆಲೀಮ್ನಿಗೆ ನಾದಿರಾಳನ್ನು ಮರು ವಿವಾಹ ಮಾಡಿಕೊಡಲು ಯೋಚಿಸುತ್ತಾನೆ. ಇದನ್ನು ನಾದಿರಾ ವಿರೋಧಿಸುತ್ತಾಳೆ. ಕಾಲ ಕಳೆದಂತೆ ಮಹಮದ್ಖಾನ್ ಅನಾರೋಗ್ಯ ಪೀಡಿತನಾಗಿ ತನ್ನ ಅಹಂನಿಂದಾಗಿ ತನ್ನ ಮಗಳ ಬದುಕು ಹಾಳಾಯಿತೆಂದು ಪಶ್ಚಾತ್ತಾಪಪಟ್ಟು, ಇನ್ನೂ ನಾದಿರಾಳ ಬಗ್ಗೆ ಪ್ರೀತಿ ಇಟ್ಟುಕೊಂಡ ರಶೀದ್ನೊಂದಿಗೆ ವಿವಾಹ ಮಾಡಿಕೊಡಲು ತಯಾರಾಗುತ್ತಾನೆ. ಆದರೆ ಅದಕ್ಕೆ ಧರ್ಮದ ನಿಬಂಧನೆಗಳು ಅಡ್ಡಿಯಾಗುತ್ತವೆ. ತಲಾಖ್ ಪಡೆದು ಗಂಡನಿಂದ ಬೇರೆಯಾದ ಹೆಂಡತಿ ತನ್ನ ಮೊದಲ ಗಂಡನನ್ನು ಮದುವೆಯಾಗಬೇಕಾದರೆ ಬೇರೆಯವನೊಡನೆ ನಿಖಾಹ ಆಗಿ ಒಂದು ರಾತ್ರಿಯಾದರೂ ಆತನೊಂದಿಗೆ ಸಂಸಾರ ಮಾಡಿ ಆತನಿಂದ ತಲಾಖ್ ಪಡೆಯಬೇಕೆನ್ನುತ್ತದೆ ಧರ್ಮ ಶಾಸ್ತ್ರ. ರಶೀದ್ ಮತ್ತು ನಾದಿರಾ ಇಬ್ಬರೂ ಪುನ: ಒಂದಾಗಲು ಸಿದ್ಧರಾದರೂ ಧರ್ಮದ ಕಟ್ಟುಪಾಡುಗಳಿಂದ ವಿವಾಹ ಸಾಧ್ಯವಾಗದೇ ಹೋಗುವದು ವಿಪಯರ್ಾಸ. ನಾದಿರಾ ತಂದೆ-ತಾಯಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಶೇಕಾಲಿ ಎಂಬ 60ವರ್ಷದ ಮಂದ ಬುದ್ಧಿಯ ವ್ಯಕ್ತಿಯ ಜೊತೆ ನಿಖಾಹ ಮಾಡಿಕೊಂಡರೂ, ಒಂದು ರಾತ್ರಿ ಅವನ ಸಾಂಗತ್ಯಕ್ಕೆ ಮನಸ್ಸು ಒಪ್ಪದೆ ಮಸೀದೆಯ ಬಳಿ ಇದ್ದ ನೀರಿನ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಈ ಧರ್ಮ ಸಂಕಟದಿಂದ ಅಸಂಖ್ಯಾತ ಮುಸ್ಲೀಂ ಹೆಣ್ಣು ಮಕ್ಕಳ ಬದುಕು ಅಯೋಮಯವಾಗಿದೆ. ಈ ಧರ್ಮ ಸೂಕ್ಷ್ಮತೆಯ ವಿಚಾರದ ಚಚರ್ೆ ಈ ಕಾದಂಬರಿಯಲ್ಲಿ ವಿಸ್ತೃತವಾಗಿ ಆಗಿದೆ.ಕಾದಂಬರಿಯು ವಾಸ್ತವಿಕತೆಗೆ ಅತೀ ಹತ್ತಿರವಾದ್ದರಿಂದ ಕಥೆ ಸಹಜವಾಗಿದೆ. ಲೇಖಕರ ಅನುಭವಗಳು ಹಾಗೂ ವೈಚಾರಿಕತೆ ಒಂದೇ ಮೂಲದಿಂದ ಬಂದಿರುವದರಿಂದ ಸಹಜವಾಗಿ ಕೃತಿಯ ಕಲಾಸಿದ್ಧಿಯು ಸ್ವಾಭಾವಿಕವಾಗಿ ಅರ್ಥಪೂರ್ಣವಾಗಿಬಿಟ್ಟಿದೆ. ಇಲ್ಲಿ ವಾಸ್ತವಿಕತೆ, ಅನುಭವ, ತಂತ್ರಗಾರಿಕೆ ಇತ್ಯಾದಿಗಳೆಲ್ಲದರ ಮೇಲೆ ವಿಮಶರ್ೆ ಸಾಧ್ಯವಿದ್ದರೂ ಮುಖ್ಯವಾಗಿ ಈ ಕಾದಂಬರಿಯ ಸ್ತ್ರೀ ವಾದದ ಕೆಲವು ಹೊಳಹುಗಳನ್ನು ಚಚರ್ಿಸಲಾಗಿದೆ. ಧರ್ಮದ ವಿವರಗಳು, ಪಾತ್ರಗಳ ಬದುಕುವ ರೀತಿ ಲವಲವಿಕೆಯಿಂದ ಅಭಿವ್ಯಕ್ತಿಸಲ್ಪಟ್ಟರೂ ಧರ್ಮದ ಕಟ್ಟುಪಾಡುಗಳಿಂದ ಮುಗ್ಧ ಪಾತ್ರಗಳಾದ ರಶೀದ್ ಹಾಗೂ ನಾದಿರಾಳ ಸುಂದರ ಬದುಕಿನ ಮಹಲು ಕುಸಿದು ಬೀಳುವದು ಮನಸ್ಸಿಗೆ ಬೇಸರ ತರಿಸುತ್ತದೆ. ಲೇಖಕರು ರಶೀದ್ ಪಾತ್ರದ ಮೂಲಕ ಇಸ್ಲಾಂ ಧರ್ಮದ ನಿಯಮಗಳಿಗೆ ವೈಚಾರಿಕತೆ ಹೊದಿಸುವ ಪ್ರಯತ್ನ ಮಾಡಿದಂತಿದೆ. ರಶೀದ್ನ ವೈಚಾರಿಕ ಪ್ರಯತ್ನ ಸಾಮಥ್ರ್ಯದ ಬೆಂಬಲವಿಲ್ಲದೇ ನಾದಿರಾ ಎಂಬ ನತದೃಷ್ಟ ಹೆಣ್ಣಿನ ಬದುಕು ಪರ್ಯಾವಸನಗೊಳ್ಳುತ್ತದೆ.
ಈ ಸ್ತ್ರೀ ಪುರುಷ ಅಸಮಾನತೆಯ ಪ್ರಶ್ನೆ, ಜಗತ್ತಿನ ಎಲ್ಲ ಕಾಲಘಟ್ಟಗಳಲ್ಲಿ, ಎಲ್ಲ ಜನಾಂಗಗಳಲ್ಲಿಯೂ ನಡೆದು ಬಂದುದಾಗಿದೆ. ಸಾಹಿತ್ಯವೂ ಒಂದು ಹೋರಾಟದ ಅಸ್ತ್ರವೇ ಆಗಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀವಾದಿ ಚಿಂತನೆ ಎಂಬುದು ಕುಟುಂಬದ ಒಳಗೆ ಅಥವಾ ಹೊರಗೆ ಸಮಾಜವು ಹೆಣ್ಣಿನ ಮೇಲೆ ಎಸಗುವ ದಬ್ಬಾಳಿಕೆ ಮತ್ತು ಶೋಷಣೆ ಸ್ವರೂಪವನ್ನು ಅಥರ್ೈಸಿಕೊಂಡು, ಅದರ ನಿವಾರಣೆಗಾಗಿ ಪ್ರಜ್ಞಾಪೂರ್ವಕವಾಗಿ ನಡೆಸುವ ಚಿಂತನೆ ಎಂದು ತಿಳಿದುಕೊಳ್ಳಬಹುದು. ಪುರುಷ ತನಗೆ ಸಿಕ್ಕ ಅವಕಾಶಗಳನ್ನು ಮತ್ತು ಅನುಕೂಲತೆಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವಗೋಸ್ಕರ ಧರ್ಮ, ತತ್ವಶಾಸ್ತ್ರ ದೈವ ನಿಯಮ ಎಂಬ ಪರಿಕಲ್ಪನೆಗಳನ್ನು ಹುಟ್ಟು ಹಾಕಿ, ಅವುಗಳ ಸಹಾಯದಿಂದ ಸ್ತ್ರೀಯನ್ನು ಕಟ್ಟಿಹಾಕಿದ. ಈ ಶೋಷಕ ಸಂಸ್ಥೆಗಳಿಗೆ ಪೂರಕವಾಗಿ ವಿವಾಹ, ಕುಟುಂಬ, ಮನೆ ಎಂಬ ಸ್ತ್ರೀ ಶೋಷಕ ಸಂಸ್ಥೆಗಳನ್ನು ನಿಮರ್ಿಸಿ ಯಾವಾಗಲೂ ಸ್ತ್ರೀ ಅವುಗಳ ಬಂಧನದಲ್ಲಿ ತೊಳಲಾಡುವಂತೆ ಮಾಡಿದ. ಇವುಗಳ ಉದ್ದೇಶಗಳ ರಕ್ಷಣೆಗಾಗಿ ಮಠಾಧೀಶರನ್ನು, ಪಾದ್ರಿಗಳನ್ನು, ಮೌಲ್ವಿಗಳನ್ನು ನಿಯಮಿಸಿದ. ಈ ಎಲ್ಲ ಸ್ತ್ರೀ ಆಯಾಮಗಳ ಮೇಲೆ ಕಾದಂಬರಿಯು ಸಾಕಷ್ಟು ಬೆಳಕು ಚಲ್ಲುತ್ತ, ಇಸ್ಲಾಂ ಧರ್ಮದ ಕೆಲವು ನಿಯಮಗಳು ಕೂಡಾ ಮಹಿಳಾ ಆತ್ಮೋಧ್ಧಾರಕ್ಕೆ ಹೇಗೆ ತೊಡಕಾಗುತ್ತವೆ ಎಂದು ಬಿಂಬಿಸುವಲ್ಲಿ ಸಫಲವಾಗಿವೆ.
ಲೇಖಕರು ಮಹಿಳಾ ಹಕ್ಕುಗಳನ್ನು ಮಂಡಿಸುವಾಗ, ಬದುಕಿನಲ್ಲಿ ನಿತ್ಯ ಬರುವ ಅನುಭವದ ಕಕ್ಷೆಯಲ್ಲಿ ಘಟನೆಗಳನ್ನು, ಅವುಗಳನ್ನು ಪ್ರಸ್ತುತಪಡಿಸುವ ಪಾತ್ರಗಳನ್ನು ಅತ್ಯಂತ ಜೀವಂತಿಕೆಯಿಂದ ಚಿತ್ರಿಸಿದ್ದಾರೆ. ಭಾವನಾತ್ಮಕ, ನೈತಿಕ ಹಾಗೂ ಧಾಮರ್ಿಕ ಬಿಕ್ಕಟ್ಟುಗಳ ಮೇಲೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಜಟಿಲವಾದ ಮಹಿಳಾ ಸಮಸ್ಯೆಗಳಿಗೆ ಗೌರವಯುತವಾದ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಇದರಲ್ಲಿ 'ತಲಾಖ್ ನಂತಹ ಜಟಿಲ ಸಮಸ್ಯೆಗಳನ್ನು ಚಚರ್ೆಗೆ ತೆಗೆದುಕೊಂಡಿರುವದರಿಂದ ಕೃತಿಯ ಮಹತ್ವ ಹೆಚ್ಚಾಗಿದೆ. ಮಹಿಳಾ ಸಮಸ್ಯೆಗಳನ್ನು ಸಾಹಿತ್ಯದಲ್ಲಿ ಪ್ರಸ್ತಾಪಿಸುವದು ಸೃಜನಶೀಲ ಲೇಖಕರಿಗೆ ಅನಿವಾರ್ಯವೆ ಆಗಿದೆ. ಲೇಖಕರು ಇಸ್ಲಾಂ ಧರ್ಮದ ನಿಯಮಗಳನ್ನು ಪ್ರಸ್ತಾಪಿಸಿ ಚಚರ್ೆಗೆ ಓದುಗನನ್ನು ಈಡು ಮಾಡಿ ವೈಚಾರಿಕತೆ ಮೆರೆದಿದ್ದಾರೆ. ಈ ಕಾದಂಬರಿಯು ಮುಸ್ಲೀಂ ಸಮುದಾಯದ ಸ್ತ್ರೀಯರ ಸಮಸ್ಯೆಗಳ ಚಚರ್ೆಗೆ ಇಂಬು ಕೊಡುತ್ತಾ ನಮ್ಮ ಬದುಕಿನ ಸ್ತ್ರೀ ಪ್ರಜ್ಞೆಯನ್ನು ವಿಸ್ತರಿಸುತ್ತದೆ. ಲೇಖಕರು ಮಹಿಳಾ ಬದುಕಿನ ಮೂಲಭೂತ ಸಮಸ್ಯೆಗಳನ್ನು ತಮ್ಮ ಆಳವಾದ ತಿಳುವಳಿಕೆಯಿಂದ, ಮತ್ತು ವೈಚಾರಿಕತೆ ಸ್ಪರ್ಶದಿಂದ ಈ ಕಾದಂಬರಿಯಲ್ಲಿ ಚಚರ್ಿಸಿ, ಮೇಲ್ದಜರ್ೆಯ ಮಹಿಳಾ ಕಾದಂಬರಿಕಾರರ ಸಾಲಿನಲ್ಲಿ ನಿಂತುಕೊಳ್ಳುತ್ತಾರೆ.