'ಮಕ್ಕಳ ಶೈಕ್ಷಣಿಕ ನಿರ್ವಹಣೆಯಲ್ಲಿ ಪಾಲಕ - ಶಿಕ್ಷಕರ ಪಾತ್ರ ಬಹುಮುಖ್ಯ

ಲೋಕದರ್ಶನ ವರದಿ

ಮೂಡಲಗಿ 3: ಬಾಲ್ಯದ ಶೈಕ್ಷಣಿಕ ನಿರ್ವಹಣೆಯಲ್ಲಿ ಶಿಕ್ಷಕರ ಕರ್ತವ್ಯದ ಜೊತೆಗೆ ಪಾಲಕರ ಪಾತ್ರ ಬಹುಮುಖ್ಯವಾದದ್ದು ಮಕ್ಕಳು ಬಿಳಿಹಾಳೆ ಇದ್ದ ಹಾಗೆ ಅದರಲ್ಲಿ ಅಕ್ಷರಜ್ಞಾನ, ಉತ್ತಮ ನೈತಿಕತೆ, ವವ್ಯಹಾರಿಕ ಜ್ಞಾನ ಮುಂತಾದವುಗಳನ್ನು ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಮೂಡಿಸಿದರೆ ಪಾಲಕರು ಅವುಗಳನ್ನು ಅನುಸರಿಸಿ ನಿಜವಾದ ಭಾರತೀಯ ನಾಗರಿಕನಲ್ಲಿ ಇರಬೇಕಾದ ಮೌಲ್ಯಗಳನ್ನು ಬೆಳಸಬೇಕು ಹೀಗೆ ಶಿಕ್ಷಕರು ಮತ್ತು ಪಾಲಕರು ಪರಸ್ಪರ ಅರಿತುಕೊಂಡು  ಬದಲಾಗುತ್ತಿರುವ ಸಮಾಜದಲ್ಲಿ ಮಕ್ಕಳು ಸ್ಪದರ್ಾತ್ಮಕ ಯುಗದ ಜೊತೆಗೆ ಹೋರಾಡ ಬೇಕಾಗುತ್ತಿದೆ. 

ಇಂತಹ ಪರಿಸ್ಥಿತಿಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದರೆ ಸಾಲದು ಮಕ್ಕಳಿಗೆ ಶಿಕ್ಷಣದ ಅರಿವು & ಜಗತ್ತಿನ ವ್ಯವಹಾರಿಕ ಜ್ಞಾನವನ್ನು ಒದಗಿಸಿಕೊಡುವಲ್ಲಿ ಶಿಕ್ಷಕ ಶಿಕ್ಷಣಸಂಸ್ಥೆಗಳ ಜೊತೆಗೆ ಪಾಲಕರ ಸಹಕಾರ ಅಗತ್ಯವಿದೆ ಎಂದು ಗೋಕಾಕ ಜೆ.ಎಸ್.ಎಸ್. ಬಿ.ಎಡ್ ಕಾಲೇಜಿನ ಉಪನ್ಯಾಸಕ ವಾಯ್.ಬಿ.ಕೊಪ್ಪದ ತಿಳಿಹೇಳಿದರು. 

ಅವರು ಸ್ಥಳೀಯ ರೂರಲ್ ಡೆವಲಪ್ಮೆಂಟ್ ಸೊಸೈಟಿಯ ಶ್ರೀವಿದ್ಯಾನಿಕೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೂಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಕರಿಗೆ ಪಾಲಕರು ಸಹಕಾರ ನೀಡಿ ಮಕ್ಕಳ ಸರ್ವತೋಮುಖ  ಅಭಿವೃದಿಯನ್ನು ಸಾಧಿಸಲು ಸಹಕರಿಸಬೇಕು. ಇಂತಹ ಗುಣಮಟ್ಟದ ಶಿಕ್ಷಣವನ್ನು ನೀಡಲು ಶ್ರೀವಿದ್ಯಾನಿಕೇತನ ಶಾಲೆ ಮೂಡಲಗಿಯಲ್ಲಿ ಮಾದರಿಯಾಗಿದೆ ಎಂದರು. 

ಮೂಡಲಗಿಯ ಕ್ಷೇತ್ರ  ಶಿಕ್ಷಣಾಧಿಕಾರಿಗಳ ಕಾಯರ್ಾಲಯದ ಇ.ಸಿ.ಓ. ಕರಿಬಸವರಾಜು ಟಿ. ಮಾತನಾಡಿ ಇಂದಿನ ಸಮಾಜದಲ್ಲಿ ಆಧುನಿಕ ತಂತ್ರಜ್ಞಾನ ಬೆಳೆಯುತ್ತಿರುವಾಗ ಮಕ್ಕಳಲ್ಲಿ ತಂತ್ರಜ್ಞಾನದ ಕಲ್ಪನೆಗಳನ್ನು ಮೂಡಿಸುವುದು ಅಗತ್ಯವಿದೆ ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಶಿಕ್ಷಣ ನೀಡಬೇಕು ಪಾಲಕರು ಹೆಚ್ಚಿನ ಆದ್ಯತೆ ನೀಡಿ ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ಒದಗಿಸಬೇಕೆಂದರು.

ಇಟ್ನಾಳ ಮೈಲಾರಲಿಂಗೇಶ್ವರ ದೇವಸ್ಥಾನದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಮಾತನಾಡಿ ಶಿಕ್ಷೆ, ದಂಡನೆ, ಕಷ್ಟದ ಅರಿವು ಮತ್ತು ಸಮಾಜದ ಚಿಂತನೆಗಳನ್ನು ಹೊಂದಿರುವ ಇಂದಿನ ಶಿಕ್ಷಣ ಪದ್ದತಿ ಅವಶ್ಯಕವಿದ್ದು ಶಿಕ್ಷೆ ದಂಡನೆ ಇರದ ಶಿಕ್ಷಣ ಮಗುವಿನ ಬದುಕಿಗೆ ಅರ್ಥ ನೀಡುವುದಿಲ್ಲ ಚಡಿ ಚಂ,ಚಂ, ವಿದ್ಯಾ ಘಮಂ, ಘಮಂ ಎಂದು ಮಕ್ಕಳು ಪ್ರತಿಭಾ ಶಾಲಿಯಾಗಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾಶರ್ಿ ವಹಿಸಿಕೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎ.ಬಿ.ಪಾಟೀಲ, ಮುರಗೇಶ ಗಾಡವಿ, ಎಸ್.ಆರ್.ಖಾನಟ್ಟಿ, ಸಿ.ಎಸ್.ಬಗನಾಳ, ರಮೇಶ ಪಾಟೀಲ, ಎಸ್.ಕೆ.ಮುರಗೋಡ, ರಮೇಶ ಜಂಬಗಿ ಮತ್ತಿತರರು ಹಾಜರಿದ್ದರು ಶಿಕ್ಷಕ ಸುಭಾಸ ಮಾದರ ನಿರೂಪಿಸಿದರು ಪ್ರಧಾನ ಗುರುಗಳಾದ ಅಶೋಕ ಬಸಳಿಗುಂದಿ ಸ್ವಾಗತಿಸಿ ವಂದಿಸಿದರು.