ಬೆಂಗಳೂರು,11 ಮಹಿಳಾ ಉದ್ಯಮಿಗಳಿಂದ ಸಹಕಾರ ನಗರದಲ್ಲಿ ಇದೇ 13 ರಿಂದ 15ರ ವರೆಗೆ ವೈಭವದ ಪ್ಯಾಷನ್
ಶೋ ಏರ್ಪಡಿಸಲಾಗಿದೆ.ಇದೇ ಮೊದಲ ಬಾರಿಗೆ
ಬೆಂಗಳೂರು ಉತ್ತರ ಭಾಗದಲ್ಲಿ ಇಂತಹ ವಿನೂತನ ಆಭರಣ ಪ್ರದರ್ಶನ ಮತ್ತು ಪ್ಯಾಷನ್ ಶೋ ಆಯೋಜಿಸಲಾಗುತ್ತಿದೆ.
ಸಹಕಾರ ನಗರದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ವೈವಿದ್ಯಮಯ ವಿನ್ಯಾಸದ,
ಆಕರ್ಷಣೀಯ ಬ್ರ್ಯಾಂಡ್ ಆಭರಣಗಳನ್ನು ಒಂದೇ ವೇದಿಕೆಗೆ ತರಲಾಗುತ್ತಿದೆ. ನಿಮಗೆ ಒಪ್ಪುವ, ಕೈಗೆಟುಕುವ,
ಸೊಗಸಾದ ಮತ್ತು ಮಾನ್ಯತೆ ಪಡೆದ ಆಧುನಿಕ, ಪಾರಂಪರಿಕ
ದೇವಾಲಯಗಳಲ್ಲಿನ ನುರಿತ ವಿನ್ಯಾಸದ ಚಿನ್ನ, ವಜ್ರದ ಆಭರಣಗಳನ್ನು ಆರಿಸಿಕೊಳ್ಳಲು ಸುವರ್ಣ
ಲಭ್ಯವಾಗಿದೆ. ಆಭರಣ ಮೇಳದಲ್ಲಿ ಪ್ರತಿಯೊಂದು
ಗಂಟೆಗೆ ಆಕರ್ಷಕ ಬಹುಮಾನ ಗೆಲ್ಲಲು ಸದಾವಕಾಶವಿದ್ದು, ಲಕ್ಕಿ ಡ್ರಾ ನಲ್ಲಿ ವಿಜೇತರಾದವರಿಗೆ ಬಹುಮಾನ
ದೊರೆಯಲಿದೆ.
ಜೆಬಿಜೆ ಎಂಟರ್ ಪ್ರೈಸಸ್,
ಸಂಗೀತಾ ವಲೆಚಾ ಮತ್ತು ಸನಮ್ ಡೆಂಬ್ಲಾ ಅವರ ಕೂಸಾಗಿದ್ದು, ತಾಯಿ ಮತ್ತು ಮಗಳು ಕಳೆದ 20 ವರ್ಷಗಳಿಂದ
ಚಿಲ್ಲರೆ ಆಭರಣ ವಲಯದಲ್ಲಿ ಗಮನ ಸೆಳೆದಿದ್ದು, ಆಭರಣ ಪ್ರದರ್ಶನಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.
ಈ ಅಮ್ಮ – ಮಗಳ ಜೋಡಿ ಹಾಂಕಾಂಗ್, ಲಾಸ್ ವೆಗಾಸ್, ಇಸ್ತಾಂಬುಲ್, ದುಬೈ ಸೇರಿದಂತೆ ಜಗತ್ತಿನ ಹಲವೆಡೆ
ಆಭರಣ ಪ್ರದರ್ಶನ ಏರ್ಪಡಿಸಿ ಸೈ ಎನಿಸಿಕೊಂಡಿದೆ.
ಬೆಂಗಳೂರು ಮೂಲದ ಜೆಬಿಜೆ ಎಂಟರ್ ಪ್ರೈಸೆಸ್ ತನ್ನ ಗ್ರಾಹಕರಿಗೆ ಉತ್ಸಾಹದಿಂದ ಅತ್ಯುತ್ತಮ ವಿನ್ಯಾಸದ ಆಭರಣಗಳನ್ನು ಒದಗಿಸುತ್ತಿದೆ. ಇದೀಗ ಬೆಂಗಳೂರಿನಾದ್ಯಂತ ಪ್ರಮುಖ ಆಭರಣ ಮಾರಾಟಗಾರರನ್ನು ಒಂದೆಡೆ ಸೇರಿಸಿ ಆಭರಣ ಮಾರಾಟ ವಲಯದಲ್ಲಿ ಬೆಂಗಳೂರು ನಗರವನ್ನು ಮಂಚೂಣಿಗೆ ತರುವ ಪ್ರಯತ್ನದಲ್ಲಿ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ.ಈ ಬಾರಿಯ ಪ್ಯಾಷನ್ ಮೇಳದಲ್ಲಿ 92.2 ಬಿಗ್ ಎಫ್.ಎಂನ ಆರ್.ಜೆ. ಪಾತ್ ಪಾತ್ ಪಾತಕಿ ಶ್ರುತಿ, ಮಿಸೆಸ್ ಇಂಡಿಯಾ ಡಾ. ಶ್ರುತಿ ಗೌಡ, ಸ್ಯಾಂಡಲ್ ವುಡ್ ನಟಿ ಮತ್ತು ಕಲಾವಿದೆ. ಕಾವ್ಯ ಗೌಡ, ಸ್ಯಾಂಡಲ್ ವುಡ್ ನಿರ್ಮಾಪಕರಾದ ರೇಖಾ ಜಗದೀಶ್,
ಮಿಸೆಸ್ ಇಂಡಿಯಾ ಕರ್ನಾಟಕ 2016ರ ಶುಬು ಶ್ರೀರಾಮ್ ಹಾಗೂ ಸ್ಯಾಂಡಲ್ ವುಡ್ ನಟಿ ಸೋನಿಕಾ ಗೌಡ ಆಭರಣ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.ಈ ಮೇಳದಲ್ಲಿ ಅಭುಷನ್, ಆಭರಣ್ ಟೈಂಲೆಸ್ ಜುವೆಲ್ಲರಿ, ಅನನ್ಯ ಜುವೆಲ್ಸ್, ಕ್ರಿಯೇಷನ್ಸ್ ಜುವೆಲ್ಲರಿ, ಕಳಸ ಫೈನ್ ಜುವೆಲ್ಸ್, ನವರತ್ನ, ನೀಲಕಂಠ ಜುವೆಲ್ಲರ್ಸ್, ನಿಖಾರ್ ಜುವೆಲ್ಸ್, ಪಂಚಕೇಸರಿ ಬಡೇರಾ ಜುವೆಲ್ಲರ್ಸ್, ಪೂಜಾ ಡೈಮಂಡ್ಸ್, ಗಣೇಶ್ ಡೈಮಂಡ್ಸ್ ಅಂಡ್ ಜುವೆಲ್ಲರಿ, ಶ್ರೀ ಕೃಷ್ಣಾ ಡೈಮಂಡ್ಸ್ ಅಂಡ್ ಜುವೆಲ್ಲರಿ, ವಿಟ್ರಾಗ್ ಜುವೆಲ್ಸ್ ಪಾಲ್ಗೊಳ್ಳಲಿವೆ.