ವಿಜಯನಗರ ಜಿಲ್ಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ “ಕನ್ನಡ ರತ್ನ”
“Kannada Ratna” for SSLC students of Vijayanagar district
ಹರಪನಹಳ್ಳಿ 01: ಕನ್ನಡ ನಾಡು-ನುಡಿ ಬೆಳವಣಿಗೆ ಮತ್ತು ವಿದ್ಯಾರ್ಥಿಗಳಲ್ಲಿ ಕನ್ನಡದ ಅಭಿಮಾನ ಅರಿವು ಮೂಡಿಸಿ ಪ್ರೇರೇಪಿಸುವ ಉದ್ದೇಶದಿಂದ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ-1ರಲ್ಲಿ ಉತ್ತೀರ್ಣರಾಗಿ ಕನ್ನಡ ಭಾಷಾ ವಿಷಯದಲ್ಲಿ 125 ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹರಪನಹಳ್ಳಿ ಪಟ್ಟಣದ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಪ್ರತಿ ವರ್ಷದಂತೆ ರಾಜ್ಯಮಟ್ಟದ “ಕನ್ನಡ ರತ್ನ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದೆ.
ಪ್ರಶಸ್ತಿಯಲ್ಲಿ ಕೀರೀಟ ಧಾರಣೆ ಮಾಡಿ, ಕನ್ನಡ ಶಾಲು, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ, ಕನ್ನಡ ಪುಸ್ತಕ ನೀಡಿ ಗೌರವಿಸಲಾಗುವುದು. ಇದು ವಿಜಯನಗರ ಜಿಲ್ಲೆಯವರಿಗೆ ಮಾತ್ರ ಅವಕಾಶವಿದ್ದು, ಆಸಕ್ತ ವಿದ್ಯಾರ್ಥಿಗಳು ದಿನಾಂಕ 5-5-2025 ಸೋಮವಾರದಿಂದ 10-5-2025 ಶನಿವಾರದೊಳಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅಂಕಪಟ್ಟಿ, ಆಧಾರ್ ಕಾರ್ಡ್, 2ಪೋಟೋಗಳೊಂದಿಗೆ ಹರಪನಹಳ್ಳಿ ಪಟ್ಟಣದ ಗ್ಯಾಸ್ ಏಜೆನ್ಸಿ, ಅಧಿಕಾರ್ ಆಸ್ಪತ್ರೆ ಹತ್ತಿರ ಇರುವ ನವಜ್ಯೋತಿ ಸೌಹಾರ್ದ ವಿವಿದೋದ್ದೇಶ ಸಹಕಾರಿಗೆ ಬಂದು ಅರ್ಜಿಪಡೆದು ಸಲ್ಲಿಸಲು ತಿಳಿಸಲಾಗಿದೆ. ಕಾರ್ಯಕ್ರಮ “ಬಸಮ್ಮ ಕಲಾಮಂದಿರ” ಗ್ಯಾಸ್ ಏಜೆನ್ಸಿ ಹತ್ತಿರ, ಹೊಸ ಬಸ್ಟ್ಯಾಂಡ್ ಸಮೀಪ, ಹರಪನಹಳ್ಳಿಯಲ್ಲಿ ನಡೆಯಲಿದ್ದು, ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ತಿಳಿಸಲಾಗುವುದು.
ಅರ್ಜಿಯನ್ನು ಕನ್ನಡದಲ್ಲಿಯೇ ತುಂಬತಕ್ಕದ್ದು, ಕನ್ನಡ ಅಂಕಿ-ಸಂಖ್ಯೆಗಳನ್ನೇ ಬಳಸತಕ್ಕದ್ದು. ರವಿವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಕಚೇರಿ ರಜೆ ಇರುತ್ತದೆ. ಮೇಲೆ ತಿಳಿಸಿದ ವಿಳಾಸದಲ್ಲಿ ನೇರವಾಗಿ ಬಂದು ಅರ್ಜಿ ಸಲ್ಲಿಸಬೇಕು. ಕೋರಿಯರ್, ಮೇಲ್, ಪೋಸ್ಟ್, ವಾಟ್ಸ್ ಆಪ್‌ನಲ್ಲಿ ಬಂದ ಅರ್ಜಿ ಸ್ವೀಕರಿಸುವುದಿಲ್ಲ ಎಂದು ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯ ಅಧ್ಯಕ್ಷರಾದ ಸಪ್ನ ಮಲ್ಲಿಕಾರ್ಜುನ ಮತ್ತು ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 