ಲೋಕದರ್ಶನ ವರದಿ
ಕೊಪ್ಪಳ 22: ಶಿಕ್ಷಕರಿಗೆ ಇತರರಿಗಿಂತ ಮಹತ್ವದ ಸ್ಥಾನವಿದೆ ಮಕ್ಕಳಿಗೆ ಎಲ್ಲದಕ್ಕಿಂತ ಮುಖ್ಯವಾಗಿ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಿದ ಶಿಕ್ಷಕರನ್ನು ವಿದ್ಯಾರ್ಥಿಗಳು ಎಂದು ಮರೆಯಲ್ಲೂ ಸಾಧ್ಯವಿಲ್ಲವೇಂದು ಭಾಗ್ಯನಗರ ಪಟ್ಟಣ ಮಂಚಾಯತ್ ಮುಖ್ಯ ಅಧಿಕಾರಿ ಬಿ. ಬಾಬಣ್ಣ ಹೇಳಿದರು.
ಅವರು ತಾಲೂಕಿನ ಭಾಗ್ಯನಗರದ ಕಠಾರೆ ಕಲ್ಯಾಣ ಮಂಟಪದಲ್ಲಿ ಭಾಗ್ಯನಗರದ ಸರಕಾರಿ ಫೌಡ ಶಾಲೆಯ 1998-99 ನೇ ಸಾಲಿನ ಎಸ್ಎಸ್ಎಲ್ಸಿ. ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸಹಪಾಠಿಗಳ ಪುನರ್ಮಲಿನ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣಪಡೆದು ದೊಡ್ಡ ಹುದ್ದೇಯಲ್ಲಿ ಸೇವೆ ಸಲ್ಲಿತ್ತಿದಾರ ಅನುವುದಕ್ಕಿಂತ ಅವರಲ್ಲಿ ಎಂತಹ ಸಂಸ್ಕಾರ ವಿದೆ, ಅವರಿಂದ ದೇಶಕ್ಕೆ ಹಾಗೂ ಸಮಾಜಕ್ಕೆ ಕೊಡುಗೆ ಏನು ಎನ್ನುವುದು ಬಹಳ ಮುಖ್ಯ ಎಂದರು. ಉತ್ತಮ ಶಿಕ್ಷಣ ಹಣದಿಂದ ಸಿಗುವ ಮತ್ತು ಗಳಿಸುವ ವಸ್ತುವಲ್ಲ ಅದು ಕೇಲ ಉತ್ತಮ ಶಿಕ್ಷಕರಿಂದ ಪಡಿಯಬಹುದಾದ ದಾನ, ಗುರುವಿನ ಮಾತು ಅವರ ಅದರ್ಶಗಳನ್ನು ಯಾವತ್ತು ಮಕ್ಕಳು ಮರೆಯಬಾರದು ಅಂದಾಗ ನಾವು ಯಾವುದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಸಹ ನಮಗೆ ಆತ್ಮಗೌರವ ಕಡಿಮೆ ಯಾಗದಂತೆ ನಡೆದು ಕೊಳ್ಳಲು ಸಾದ್ಯವೇಂದು ಅವರು ಹೇಳಿದರು.
ಕಾರ್ಯಕ್ರಮ ಭಾಗ್ಯನಗರ ಶಂಕರ ಮಠದ ಶಿವ ಪ್ರಕಾಶನಂದ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.ಅಧ್ಯಕ್ಷತೆಯನ್ನು ಭಾಗ್ಯೆನಗರದ ಸರಕಾರಿ ಫೌಡ ಶಾಲೆ ಉಪ ಪ್ರಾಚಾರ್ಯ ಸುರೇಂದ್ರಗೌಡ ಪಾಟೀಲ್ ವಹಿಸಿದ್ದರು. ವೇದಿಕೆ ಮೇಲೆ ಶಿಕ್ಷರಾದ ನಿಂಗಪ್ಪ ಬ್ಯಾಳಿ ಶೆಟ್ಟರ್, ಲಿಂಗಣ್ಣ ಮೇಟಿ, ವೀರಪ್ಪ ಗುನ್ನಹಳ್ಳಿ ಎಎಂ ಎಂ ಬಡಿಗೇರ, ಜೆ. ಎಲ್, ಬಸವಾ, ಶರಣ ಬಸಪ್ಪ ಹಳಿಕೇರಿ, ಮಾಲಾ ಬಡಿಗೇರ, ಲತಾ ಕೆ ಲಿ. ಗೀತಾ ಕೆ,ಬಿ. ಎಸ್ ಬಿ. ಗಂಗೂರ. ಬಸಪ್ಪ ಮಡಿವಾಳರ. ಶೇಖರಪ್ಪ ದೊಡ್ಡ ಮನಿ. ಮಹಾದೇವಪ್ಪ ವಂದಾಲ ಇತರರು ಶಿಕ್ಷಕರಿಗೆ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು. ವಿದ್ಯಾರ್ಥಿ ಗಳಿಂದ ಪಂಚಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರಭಾಕರ ಪಟವಾರಿ ಸಂಡಿಗರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು.