‘ನಮ್ಮ ನಡುವಿನ ಅಪರೂಪದ ಸಂಶೋಧಕ ಜೆ.ಎಂ. ನಾಗಯ್ಯ
‘The rare researcher among us, J.M. Nagaiah
‘ನಮ್ಮ ನಡುವಿನ ಅಪರೂಪದ ಸಂಶೋಧಕ ಜೆ.ಎಂ. ನಾಗಯ್ಯ‘
ಧಾರವಾಡ, 16 : ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ಚರಿತ್ರೆಗಳನ್ನು ತಮ್ಮ ಸಂಶೋಧನಾ ಬರವಣಿಗೆ ಮೂಲಕ ಇಂದಿನ ಹೊಸ ತಲೆಮಾರಿಗೆ ಸಾಗಿಸುತ್ತಿರುವ ಡಾ. ಜೆ.ಎಂ. ನಾಗಯ್ಯ ಅವರು ನಮ್ಮ ನಡುವೆ ಇರುವ ಅಪರೂಪದ ಸಂಶೋಧಕ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಡಾ. ಜೆ.ಎಂ. ನಾಗಯ್ಯ ಟ್ರಸ್ಟ್, ಹುಬ್ಬಳ್ಳಿ ಹಾಗೂ ಡಾ. ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜು, ಹೂವಿನಹಡಗಲಿ ಸಂಯುಕ್ತ ಆಶ್ರಯದಲ್ಲಿ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜಿಸಿದ್ದ ಕನ್ನಡದ ಹಿರಿಯ ಸಂಶೋಧಕ ಡಾ. ಜೆ.ಎಂ. ನಾಗಯ್ಯ ಅವರ ನಾಲ್ಕು ಸಂಶೋಧನಾ ಗ್ರಂಥಗಳನ್ನು ಲೋಕಾರೆ್ಣಗೊಳಿಸಿ ಮಾತನಾಡುತ್ತಿದ್ದರು.
ಜೆ.ಎಂ. ನಾಗಯ್ಯ ಅವರು ಕಳೆದ ಮೂರು ದಶಕಗಳಿಂದ ಶಾಸನ ಅಧ್ಯಯನ, ಸಂಪಾದನೆ, ಪ್ರಾಚೀನ ಸಾಹಿತ್ಯ ಮತ್ತು ಶಾಸ್ತ್ರ ಸಾಹಿತ್ಯಗಳ ಅಧ್ಯಯನಕ್ಕೆ ತಮ್ಮನ್ನು ತೊಡಗಿಸಿಕೊಂಡು ಅಪರೂಪದ ಕೃತಿಗಳನ್ನು ರಚಿಸಿದ್ದಾರೆ. ಅವರ ಎಲ್ಲಾ ಕೃತಿಗಳನ್ನು ಬಿಡುಗಡೆ ಮಾಡುವ ಅವಕಾಶ ನನಗೆ ದೊರೆತಿದ್ದು ಅಭಿಮಾನ ಮತ್ತು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
ಅನೇಕರು ತಮ್ಮ ನಿವೃತ್ತಿ ಜೀವನದ ನಂತರ ನಿಷ್ಕ್ರೀಯರಾಗಿಬಿಡುತ್ತಾರೆ. ಆದರೆ ಡಾ. ಜೆ.ಎಂ. ನಾಗಯ್ಯ ಅವರು ತಮ್ಮ ನಿವೃತ್ತಿ ಜೀವನವನ್ನು ಸಂಶೋಧನೆ ಮತ್ತು ಪ್ರಕಟಣೆಗಳಿಗೆ ಮೀಸಲಿರಿಸಿದ್ದು, ಒಟ್ಟು ಸಮಾಜದ ಒಳಿತು ಮತ್ತು ಸ್ವಾಸ್ಥ್ಯಕ್ಕಾಗಿ ದುಡಿಯುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಂಶೋಧಕ ಡಾ. ಜೆ.ಎಂ. ನಾಗಯ್ಯ ಅವರು ನನ್ನ ಸಂಶೋಧನೆಯ ಗುಣದೋಷಗಳ ಮೌಲ್ಯಮಾಪನವಾಗಬೇಕು. ನಾಡಿನ ವಿದ್ವಾಂಸ ವಲಯ ಈ ಕುರಿತು ನಡೆಸುತ್ತಿರುವ ಸಂವಾದಗಳನ್ನು ನಾನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿದ್ದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಲೋಕಾರೆ್ಣಗೊಂಡ ಡಾ. ಜೆ.ಎಂ. ನಾಗಯ್ಯ ಅವರ ಕಲ್ಯಾಣ ಚಾಲುಕ್ಯರ ಶಾಸನ ಸಂಪುಟ-2, ಕನ್ನಡ ಶಾಸನಗಳಲ್ಲಿ ಶ್ರೀಶೈಲ ಈ ಕೃತಿಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಮೈಸೂರಿನ ರಾಜ್ ಪ್ರಕಾಶನವು ಸಾಂಪಥ ಸಂಪುಟ-3, ಸಾಂಪಥ ಸಂಪುಟ-4, ಕೃತಿಗಳನ್ನು ಪ್ರಕಟಿಸಿದೆ.
ಗಿರಿಜಾ ಕಲ್ಯಾಣ ದೊಡ್ಡಾಟ ಬಸವರಾಜ ಮಲಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರದರ್ಶನ ನಡೆಯಿತು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ. ಎಂ. ಭಾಸ್ಕರ್, ಡಾ. ಬಸವರಾಜ ಮಲಶೆಟ್ಟಿ, ಬಯಲಾಟ ಕಾಲೇಜಿನ ಸಂಶೋಧನಾ ನಿರ್ದೇಶಕ ಡಾ. ಕರಿಶೆಟ್ಟಿ ರುದ್ರ್ಪ, ಡಾ.ಜೆ.ಎಂ. ನಾಗಯ್ಯ ಟ್ರಸ್ಟ್ ನ ಅಧ್ಯಕ್ಷ ಡಾ. ಕಲ್ಲಯ್ಯ ಎಸ್. ಹಿರೇಮಠ, ಕಾರ್ಯದರ್ಶಿ ಡಾ. ಎಸ್. ಎಸ್. ದೊಡ್ಡಮನಿ, ಗುಡ್‌ನ್ಯೂಸ್ ಕಾಲೇಜ ಪ್ರಾಚಾರ್ಯ ಡಾ. ಮಹೇಶ ಧ. ಹೊರಕೇರಿ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಧನವಂತ ಹಾಜವಗೋಳ, ಪ್ರೊ. ಶಾಂತಿನಾಥ ದಿಬ್ಬದ ಮೊದಲಾದ ಗಣ್ಯರು, ಆಸಕ್ತ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 