ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹ: ಅಧಿಕಾರಿಗಳ ದಾಳಿ

ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹ: ಅಧಿಕಾರಿಗಳ ದಾಳಿ Illegal hoarding of ration rice: Officials raid

ಲೋಕದರ್ಶನ ವರದಿ

ಜಮಖಂಡಿ ೨೭: ನಗರದ ಅಂಬೇಡ್ಕರ್ ಸರ್ಕಲ್ ಬಳಿ ಸರಕಾರದಿಂದ ಹಂಚಿಕೆಯಾದ ಪಡಿತರ ಅಕ್ಕಿಕಾಳು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಪತ್ರಾಸ ಅಂಗಡಿ ಮೇಲೆ ಕಂದಾಯ ಅಧಿಕಾರಿಗಳು ಮತ್ತು ಪೋಲಿಸರು ಜಂಟಿಯಾಗಿ ದಾಳಿ ನಡೆಸಿ. ಅಕ್ರಮದ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

ನಗರದ ಇಸ್ತಾಕ್ ಅಹ್ಮದ ಹಾರೂನರಶೀದ್ ಹವಾಲ್ದಾರ ಇವರಿಗೆ ಸೇರಿದ ಮನೆ ಬಾಡಿಗೆಗೆ ಪಡೆದುಕೊಂಡ ಪತ್ರಾಸ್‌ದಿಂದ ನಿರ್ಮಿಸಿದ ಸಣ್ಣ ಅಂಗಡಿಯಲ್ಲಿ ಗೂಪ್ರಾನ್ ನೂರಅಹ್ಮದ ಕಡದೇಕರ (೩೫) ವರ್ಷ ಅಂಬೇಡ್ಕರ ಸರ್ಕಲ್ ಹತ್ತಿರ ಕಡ್ಲೆ ಗಲ್ಲಿ ಇತನು ಸರ್ಕಾರದಿಂದ ಹಂಚಿಕೆಯಾದ ಅಕ್ಕಿಯನ್ನು ಕಡಿಮೆ ಬೆಲೆಗೆ ಪಡೆದುಕೊಂಡು ಬೇರೆ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದು. ಅಕ್ರಮವಾಗಿ ಸಂಗ್ರಹಿಸಿಟ್ಟ ಅಕ್ಕಿಯನ್ನು ತುಂಬಿದ ೬ ಬಿಳಿ ಪ್ಲಾಸ್ಟಿಕ್ ಚೀಲಗಳು ಇದ್ದು, ಅಂದಾಜು ೫೫ ರಿಂದಾ ೬೦ ಕೆಜಿ ತೂಕ ಇರುತ್ತದೆ. ಒಟ್ಟು ಅಕ್ಕಿಯು ೩೬೦ ಕೆಜಿ ತೂಕ ಇದ್ದು. ಸರ್ಕಾರದಿಂದ ನಿಗದಿಪಡಿಸಿದ ಬೆಲೆಯು ಪ್ರತಿ ಕೆಜಿಗೆ ೩೪.೬೦ ರೂ ಇದ್ದು, ಒಟ್ಟು ಬೆಲೆ ೧೨೪೫೬ ರೂ,ಗಳ ಮಾಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿಯಲ್ಲಿ ಆಹಾರ ನಿರೀಕ್ಷಕ ಸುರೇಶ ಪರಪ್ಪ ಕುರಿ, ಹೆಚ್ಚುವರಿ ಗ್ರಾಮ ಆಡಳಿತಾಧಿಕಾರಿ ಸಾಜೀದ ಜಲಾಲುದ್ದೀನ ಹುದಲಿ, ಗ್ರಾಮ ಸಹಾಯಕ ಶಣ್ಣೀರ ಹಾಜೀಸಾಬ ಅವಟಿ, ಪೋಲಿಸ್ ಪೇದೆ ಎಲ್,ಎಮ್, ಯಲಿಶೆಟ್ಟಿ ಇದ್ದು. ಈ ಕುರಿತು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.