‘ಸಂಘದ ತರಬೇತಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ’

‘ಸಂಘದ ತರಬೇತಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ’ ‘Make good use of the association’s training scheme’

ಬೈಲಹೊಂಗಲ ೨೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಅಮಟೂರು ಗ್ರಾಮದಲ್ಲಿ  ಶ್ರೀಭಾರತಾಂಬೆ  ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮ ಅಡಿಯಲ್ಲಿ ಆರ್ಯ ವರ್ಕ್ ತರಬೇತಿ ಉದ್ಘಾಟನೆ ಆಯೋಜಿಸಲಾಯಿತು.      

ಕಾರ್ಯಕ್ರಮದ ಉದ್ಘಾಟನೆಯನು ತಾಲೂಕಿನ  ಯೋಜನಾಧಿಕಾರಿಗಳಾದ ವಿಜಯಕುಮಾರ, ಗ್ರಾಮ ಪಂಚಾಯತಿ ಸಿಬ್ಬಂದಿಯಾದ ಮಲ್ಲಪ್ಪ ಹಿತ್ತಲಮನಿ,   ತಾಲೂಕಿನ ಜ್ಞಾನವಿಕಾಸ  ಸಮನ್ವೇಧಿಕಾರಿ ಶೈಲಾ ಜೆ. ಮೇಲ್ವಿಚಾರಕರಾದ ಮಹಾಂತೇಶ, ಕೇಂದ್ರ ಅಧ್ಯಕ್ಷರಾದ  ಶ್ರೀಮತಿ ಜಯಶ್ರೀ ಹಿತ್ತಲಮನಿ,     ತರಬೇತಿ ಶಿಕ್ಷಕರಾದ ಶ್ರೀಮತಿ ಆಶಾ ಇವರ ಸಮ್ಮುಖದಲ್ಲಿ ತರಬೇತಿಗೆ ಗಿಡಕ್ಕೆ ನೀರಿರುವ ಮೂಲಕ   ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.     

ಕಾರ್ಯಕ್ರಮದ ಉದ್ಘಾಟನೆ ಮಾಡಿ ತಾಲೂಕಿನ ಯೋಜನಾಧಿಕಾರಿಗಳಾದ  ವಿಜಯಕುಮಾರ ಮಾತನಾಡಿ  ಸೃಜನಶೀಲ ಕಾರ್ಯಕ್ರಮದಲ್ಲಿ ಆರ್ಯ ವರ್ಕ್ ತರಬೇತಿ  ಕುರಿತು ಮತ್ತು ಜ್ಞಾನ ವಿಕಾಸದ ಕಾರ್ಯಕ್ರಮದ ಅಡಿಯಲ್ಲಿ  ಸ್ವ ಉದ್ಯೋಗ ಮಾಡುವಲ್ಲಿ ಸದಸ್ಯರಿಗೆ   ಕ್ಷೇತ್ರದಿಂದ ಸಿಗುವ ಸೌಲಭ್ಯಗಳು ಮತ್ತು ಮಾಹಿತಿ ಕಾರ್ಯಕ್ರಮಗಳು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಗ್ರಾಮೀಣ ಪ್ರದೇಶದ  ಸದಸ್ಯರಿಗೆ ಉಚಿತವಾಗಿ ನೀಡುವ ಒಂದು ತಿಂಗಳ ತರಬೇತಿ ಅನುಷ್ಠಾನ ಮತ್ತು ಅದರ ಸದುಪಯೋಗ ಪಡೆದುಕೊಳ್ಳುವ ಕುರಿತು    ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಅಳವಡಿಸಿಕೊಂಡು ಕುಟುಂಬ ನಿರ್ವಹಣೆಯಲ್ಲಿ ಹೆಚ್ಚು ಹೆಣ್ಣು ಮಕ್ಕಳ ಜವಾಬ್ದಾರಿ ಹೊಂದಿರುತ್ತಾರೆ ಮತ್ತು ಗ್ರಾಮ ಮಟ್ಟದಲ್ಲಿ ಸ್ವ ಉದ್ಯೋಗದ ಮೂಲಕ ಹೆಣ್ಣು ಮಕ್ಕಳು  ಸಾವಲಂಬನೆ ಬದುಕು ಕಟ್ಟಿಕೊಳ್ಳಲು  ಒಳ್ಳೆಯ ಅವಕಾಶವನ್ನು ಪಡೆದುಕೊಳ್ಳಿ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಕೆ ಮಾಡಿದರು. 

ನಿರೂಪಣೆಯನ್ನು    ಸೇವಾ ಪ್ರತಿನಿಧಿ ಐಶ್ವರ್ಯ  ಸ್ವಾಗತ   ಶೈಲಾ, ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.