‘ಸಾವಯವ ಕೃಷಿಯಿಂದ ಪರಿಸರ ಮತ್ತು ಸಮಾಜಕ್ಕೆ ಉತ್ತಮ’
‘Organic farming is better for the environment and society’
‘ಸಾವಯವ ಕೃಷಿಯಿಂದ ಪರಿಸರ ಮತ್ತು ಸಮಾಜಕ್ಕೆ ಉತ್ತಮ’
ಮೂಡಲಗಿ, 27 : ‘ರೈತರು ಸಾವಯವ ಪದ್ದತಿಯಲ್ಲಿ ಕಬ್ಬು ಬೆಳೆಯುವುದರಿಂದ ಪರಿಸರ ಮತ್ತು ಸಮಾಜಕ್ಕೆ ಬಹು ದೊಡ್ಡ ಕೊಡುಗೆಯಾಗುತ್ತದೆ’ ಎಂದು ಸಮೀರವಾಡಿ ಸಕ್ಕರೆ ಕಾರ್ಖಾನೆಯ ಮಾಲೀಕರಾದ (ಸಿಎಂಡಿ)ಸಮೀರ ಸೋಮೈಯಾ ಹೇಳಿದರು.
ಶುಕ್ರವಾರ ತಾಲ್ಲೂಕಿನ ಮೂಡಲಗಿಯ ಪ್ರಗತಿ ಪರ ರೈತರಾದ ಬಾಳಪ್ಪ ಬಿ.ಬೆಳಕೂಡ ಅವರ ತೋಟಕ್ಕೆ ಭೇಟ್ಟಿ ನೀಡಿಕಬ್ಬಿನ ಬೆಳೆಯಲ್ಲಿ ಮಾಡಿರುವ ಸಾಧನೆಯನ್ನು ನೋಡಿ ಮಾತನಾಡಿದ ಅವರು ಕೃಷಿಯು ಪರಿಸರಕ್ಕೆ ಹಾನಿಯಾಗದಂತೆ ರೈತರು ಕಾಳಜಿವಹಿಸುವುದು ಇಂದಿನ ಅವಶ್ಯಕತೆ ಇದೆ ಎಂದರು.
ಕಲ್ಲೋಳಿಯ ರೈತ ಬಾಳಪ್ಪ ಬಿ.ಬೆಳಕೂಡ ಅವರು ಕಬ್ಬು ಬೆಳೆಯಲ್ಲಿ ಅತ್ಯುತ್ತಮ ಇಳುವರಿ ಮಾಡತ್ತಿರುವುದು ಶ್ಲಾಘನೀಯವಾಗಿದೆ.ಈ ಹಿಂದೆ ಎಕರೆಗೆ 125 ಟನ್ ಇಳುವರಿ ಪಡೆದು ದಾಖಲೆ ಮಾಡಿದ್ದರು.ಈ ಬಾರಿ ಎಕರೆಗೆ 140 ಟನ್ ಇಳುವರಿ ತೆಗೆಯುವ ಅವರ ಗುರಿ ಮತ್ತು ಅವರ ಶ್ರಮವು ನಿಜವಗಿಯೂ ಮೆಚ್ಚುವಂತದ್ದು ಎಂದರು.
ರೈತ ಬಾಳಪ್ಪ ಬೆಳಕೂಡ ಅವರ ತೋಟದಲ್ಲಿ ಎರೆಹುಳ ಗೊಬ್ಬರ ತೊಟ್ಟಿಗಳು, ಬಯೋಡೈಜಿಸ್ಟ್ ಘಟಕ, ದೇಸಿ ಆಕಳು, ಎಮ್ಮೆಗಳ ಕೊಟ್ಟಿಗೆ, ಜೀವಾಮೃತ ತಯಾರಿಕೆ ಘಟಕ ಇವುಗಳನ್ನು ಸಮೀರ ಸೋಮೈಯಾ ಅವರು ವೀಕ್ಷಿಸಿದರು.
ಬೆಳಕೂಡ ಅವರು ನೈಸರ್ಗಿಕ ಸಂಗತಿಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುತ್ತಿರುವ ಕೃಷಿ ಪದ್ದತಿಯು ಮಾದರಿಯಾಗಿದೆ. ರೈತರು ಇಂಥ ಪದ್ದತಿಯನ್ನು ಅನುಸರಿಸಿ ಕೃಷಿಯಲ್ಲಿ ಮುಂದೆ ಬರಬೇಕು ಎಂದರು.
ಮಾಧವ ಸಮೀರ ಸೋಮೈಯಾ, ಡಾ. ಲ್ಯಾರಿ ವಾಕರ್, ಡಾ. ಲೀಸಾ, ಸಮೀರವಾಡಿ ಗೋದಾವರಿ ಬೈಯೋ ರಿಫೈನರಿ ಸಕ್ಕರೆ ಕಾರ್ಯನಿರ್ವಾಹಕ ನಿರ್ದೇಶಕಿ ಸಂಗೀತಾ ಶ್ರೀವಾತ್ಸವ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಭಕ್ಷಿ, ಕೆಐಎಎಆರ್ ವಿಭಾಗದ ನಿರ್ದೇಶಕ ಡಾ. ನಂದಕುಮಾರ, ಕಬ್ಬು ವಿಭಾಗದ ಮಹಾಪ್ರಬಂಧಕ ವಿ.ಎಸ್. ಕಣಬೂರ, ವಿಶ್ವನಾಥ ಭುಜನ್ನವರ, ಸಂದೀಪನ, ಅಶೋಕ ಕುಡಚಿ, ರವಿ ಖಾನಗೌಡ್ರ, ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಅಶೋಕ ಗದಾಡಿ, ಶಂಕರ ಬೆಳಕೂಡ, ಬಸವರಾಜ ಬೆಳಕೂಡ, ಪ್ರಭುಕಡಾಡಿ, ಚಿದಾನಂದ ಕುಂದನವರ, ರಾಜು ಕಡಾಲಗಿ, ಭೀಮಶಿ ಹೆಬ್ಬಾಳ, ಮಲ್ಲಪ್ಪ ಕುರಬೇಟ, ಉಮೇಶ ಪಾಟೀಲ, ಈರಣ್ಣ ಬೆಳಕೂಡ ಮತ್ತು ರೈತರು ಇದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 