ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್‌ಪಿಗೆ ಉಪನ್ಯಾಸಕನ ಮೊರೆ

ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್‌ಪಿಗೆ ಉಪನ್ಯಾಸಕನ ಮೊರೆ Lecturer appeals to DC and SP for justice after facing social boycott and death threats against his

ಬೆಳಗಾವಿ : ಕಳೆದ ಸುಮಾರು ಒಂಬತ್ತು ವರ್ಷಗಳಿಂದ ಮೇದಾರ ಸಮಾಜದಲ್ಲಿನ ಕೆಲವು ಕಾನೂನುಬಾಹಿರ ಚಟುವಟಿಕೆಗಳನ್ನು ವಿರೋಧಿಸಿ, ಸಂಬAಧಪಟ್ಟವರಿಗೆ ಬುದ್ಧಿವಾದ ಹೇಳುತ್ತಿದ್ದ ಕಾರಣ ತಮ್ಮ ಕುಟುಂಬವನ್ನು ಸಮಾಜದಿಂದ ಬಹಿಷ್ಕಾರ ಮಾಡಲಾಗಿದೆ. ಈ ಘಟನೆಯಿಂದ ಮನನೊಂದು ತಮ್ಮ ತಂದೆ ಗಂಗಾಧರ ಕುಬಣ್ಣಾ ಮೇದಾರ ಅವರು 2016ರಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ನಿವಾಸಿ ಹಾಗೂ ಉಪನ್ಯಾಸಕರಾದ ವಿಜಯಕುಮಾರ ಗಂಗಾಧರ ಮೇದಾರ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
        ಯಮಕನಮರಡಿ ಗ್ರಾಮದ ನಿವಾಸಿ ಹಾಗೂ ಉಪನ್ಯಾಸಕರಾದ ವಿಜಯಕುಮಾರ ಗಂಗಾಧರ ಮೇದಾರ ಅವರು ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರ, ವಾಟ್ಸಪ್ ಮೂಲಕ ಅಪಪ್ರಚಾರ ಮತ್ತು ಜೀವ ಬೆದರಿಕೆ ನೀಡಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠರಿಗೆ ಸಲಿಸಿದ ದೂರು ಸಲ್ಲಿಸಿದ್ದಾರೆ.
      ಇತ್ತೀಚೆಗೆ ಹುಣಸಿಕೊಳ್ಳ ಮಠದ ಸ್ವಾಮೀಜಿಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ತಾವು ವಾಟ್ಸಪ್ ಮೂಲಕ ಸ್ಪಷ್ಟೀಕರಣ ನೀಡಿದ್ದ ಬಳಿಕ, ಸಮಾಜಕ್ಕೆ ಸಂಬAಧಿಸಿದ ಹಲವು ವಾಟ್ಸಪ್ ಗುಂಪುಗಳಲ್ಲಿ ತಮ್ಮ ಹಾಗೂ ತಮ್ಮ ಕುಟುಂಬವನ್ನು ಹಿಂದೆ ಸಮಾಜದಿಂದ ಬಹಿಷ್ಕಾರ ಮಾಡಲಾಗಿದೆ ಎಂದು ಸಂದೇಶಗಳನ್ನು ಹರಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
      ಅಲ್ಲದೆ, ಯಮಕನಮರಡಿ ಮೇದಾರ ಸಮಾಜದವರು ಸ್ವಾಮೀಜಿಗಳ ಮೇಲಿನ ಹಲ್ಲೆ ಕುರಿತು ತಾವು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪವನ್ನೂ ವಾಟ್ಸಪ್ ಮೂಲಕ ವ್ಯಾಪಕವಾಗಿ ಪ್ರಸಾರ ಮಾಡಿ ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಗೌರವಕ್ಕೆ ಧಕ್ಕೆ ಉಂಟುಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದೇಶಗಳ ನಂತರ ರಾಜ್ಯದ ವಿವಿಧ ಭಾಗಗಳಿಂದ ನಿರಂತರ ದೂರವಾಣಿ ಕರೆಗಳು ಬರುತ್ತಿದ್ದು, ಮಾನಸಿಕ ಒತ್ತಡ, ನಿದ್ರಾಹೀನತೆ ಹಾಗೂ ಸಾಮಾಜಿಕವಾಗಿ ತೀವ್ರ ಅವಮಾನ ಅನುಭವಿಸುವಂತಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
      ಇದೇ ವೇಳೆ, ಜುಲೈ 5ರಂದು ರಾತ್ರಿ ತಮ್ಮ ಮನೆಯ ಸಮೀಪ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಹೇಳನ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಘಟನೆಗೆ ತಮ್ಮ ಸ್ನೇಹಿತ ಸಾಕ್ಷಿಯಾಗಿದ್ದಾನೆ ಎಂದೂ ಅವರು ತಿಳಿಸಿದ್ದಾರೆ. ಈ ಎಲ್ಲ ಘಟನೆಗಳಿಂದ ತಮ್ಮ ಹಾಗೂ ತಮ್ಮ ಕುಟುಂಬದ ಜೀವಕ್ಕೆ ಅಪಾಯವಿದ್ದು, ಸಂಬAಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ವಿಜಯಕುಮಾರ ಗಂಗಾಧರ ಮೇದಾರ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಮೇಲಿನ ಆರೋಪಗಳು ದೂರುದಾರರು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿರುವ ಮಾಹಿತಿಯನ್ನು ಆಧರಿಸಿವೆ. ಆರೋಪಗಳ ಕುರಿತು ಪೊಲೀಸ್ ತನಿಖೆ ನಡೆಯಬೇಕಿದ್ದು, ಸಂಬAಧಪಟ್ಟವರ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.