ಮಾಜಿ ಶಾಸಕ ಸುರೇಶ ಮಾರಿಹಾಳ ಬಿಜೆಪಿಗೆ ಬೆಂಬಲ: ಶೀಘ್ರದಲ್ಲಿ ಬಿಜೆಪಿ ಸೇರ್ಪಡೆ

ಚನ್ನಮ್ಮನ ಕಿತ್ತೂರ 21; ದೇಶದ ಅಳಿವು ಉಳಿವಿಗಾಗಿ ಹಾಗೂ ಅಭಿವೃದ್ಧಿ ಪಥದತ್ತ ಸಾಗಲು ದೇಶಕ್ಕೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಮಾಜಿ ಶಾಸಕ ಸುರೇಶ ಮಾರಿಹಾಳ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ   ಜೆಡಿಎಸ್ ಪಕ್ಷದಿಂದ ಕಿತ್ತೂರ ವಿಧಾನಸಭಾ  ಕ್ಷೇತ್ರದ ಅಭ್ಯಥರ್ಿಯಾಗಿ ಸ್ಪಧರ್ಿಸಿದ ಮಾಜಿ ಶಾಸಕ ಸುರೇಶ ಮಾರಿಹಾಳ ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಮೋದಿಯವರು ಕಳೆದ ಐದು ವರ್ಷಗಳಿಂದ ಹಲವಾರು ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ದೇಶದ ಜನತೆ ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಿದ್ದಾರೆ. ದೇಶದ ಭದ್ರತೆ ದೃಷ್ಟಿಯಿಂದ ಇಡೀ ವಿಶ್ವವವೇ ಕಣ್ಣತೆರೆದು ನೊಡುವಂತೆ ಮಾಡಿದ್ದಾರೆ. ಆದ್ದರಿಂದ ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಅನಂತಕುಮಾರ ಹೆಗಡೆಯವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಬೇಕೆಂದರು.

ಮುಂದಿನ ದಿನಗಳಲ್ಲಿ ಬಿಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯ ಮಂತ್ರಿಯಾಗುವದು ನಿಶ್ಚಿತ. ರಾಜ್ಯದಲ್ಲಿ ಯಾವದೇ ಅಭಿವೃದ್ದಿ ಕಾರ್ಯ ಅಗಬೇಕಾದರೆ ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯವೆಂದರು. ನಾನು ಹಿಂದೆ ಬಿಜೆಪಿಯಿಂದ ಎರಡು ಬಾರಿ ಶಾಸಕನಾಗಿದ್ದಾಗ ಕಿತ್ತೂರು ತಾಲೂಕ ಮಾಡಲು, ಎಂ ಕೆ ಹುಬ್ಬಳ್ಳಿಯ ಮಲಪ್ರಭಾ ನದಿಯಲ್ಲಿರುವ ಗಂಗಾಭಿಕಾ ಐಕ್ಯ ಸ್ಥಳ, ಕುಡಿಯುವ ನೀರಿನ ಯೋಜನೆ, ದೇವಸ್ಥಾನಗಳ ಅಭಿವೃದ್ದಿ, ಕಿತ್ತೂರ ಅಭಿವೃದ್ದಿ ಪ್ರಾಧಿಕಾರ, ಹಾಗೂ ಐತಿಹಾಸಿಕ ಕಿತ್ತೂರ ಉತ್ಸವ  ಸೇರಿದಂತೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಪರ ಕೆಲಸವನ್ನು ಮಾಡಲಾಗಿದೆ.  

ಕಾಂಗ್ರೆಸ್ ಸರಕಾರವಿದ್ದಾಗ ರಾಜ್ಯದಲ್ಲಿ ಯಾವದೇ ರೀತಿಯ ಅಭಿವೃದ್ಧಿಯ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ದೇಶ ಹಾಗೂ ರಾಜ್ಯ ಅಭಿವೃದ್ಧಿಯಾಗಬೇಕಾದರೆ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದರು. 

ಮಾರಿಹಾಳ ಅವರು ಬಿಜೆಪಿ ಪಕ್ಷವನ್ನು ಬೆಂಬಲಿಸುವದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಮಾರಿಹಾಳ ಬೆಂಬಲಿಗರು ಸಂತಸ ವ್ಯಕ್ತಪಡಿಸಿದರು. 

(ಬಾಕ್ಸ )

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜಿಪಿ ಪಕ್ಷದಿಂದ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದಿಂದ ಕಿತ್ತೂರ ವಿಧಾನಸಭಾ  ಕ್ಷೇತ್ರದ ಅಭ್ಯಥರ್ಿಯಾಗಿ ಮಾಜಿ ಶಾಸಕ ಸುರೇಶ ಮಾರಿಹಾಳ ಸ್ಪದರ್ಿಸಿದ್ದರು. ಈಗ ಬಿಜಿಪಿ ಬೆಂಬಲಿಸಿ ಪಕ್ಷವನ್ನು ಸೇರಲು ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಸಂಪಕರ್ಿಸಲಾಗಿದ್ದು, ಅತಿ ಶೀಘ್ರದಲ್ಲಿ ಬಿಜೆಪಿ ಸೇರುವುದಾಗಿ ತಿಳಿಸಿದರು.

ಕಿನಾವಿವ ಸಂಘದ ಅಧ್ಯಕ್ಷ ಐ ಜಿ ಮಾರಿಹಾಳ, ಜಿ ಪಂ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ವಕ್ಕುಂದ, ಉಮೇಶ ಹಿರೇಮಠ, ಈಶಣ್ಣ ಶೆಟ್ಟರ, ಡಿ ಎಲ್ ಪಾಟೀಲ, ಶಿವಾನಂದ ತಳವಾರ, ಶಿವಾನಂದ ಜಕಾತಿ, ಉಮಾಕಾಂತ ಭಾರತಿ, ಅಪ್ಪಣ್ಣ ಮುಷ್ಠಗಿ, ಬುಡ್ಡೆಸಾಬ ಹವಾಲ್ದಾರ, ಈರಪ್ಪ ಬಬ್ಲಿ, ಗುರವಯ್ಯ ಹಿರೇಮಠ, ಮಹಾಂತೇಶ ಮಾರಿಹಾಳ, ಯಲ್ಲಪ್ಪ ಬಿದರಿ, ಸುರೇಶ ದೇವರಮನಿ, ಮಹೇಶ ಪತ್ತಾರ, ಇನ್ನೂ ಹಲವಾರು ಬೆಂಬಲಿಗರು ಉಪಸ್ಥಿತರಿದ್ದರು.