ಮಹಿಳೆ ಕಾಣೆ


ಹಾವೇರಿ.05: ಶಿಗ್ಗಾಂವ ತಾಲೂಕು ಬಂಕಾಪೂರ ಪಟ್ಟಣದ ವಾಸಿ ಶ್ರೀಮತಿ ರೂಪಾ ಕೋಂ.ವಿರೇಶ ಇಚ್ಚಂಗಿ ಎಂಬ 28 ವರ್ಷದ ಮಹಿಳೆ ಕಳೆದ ಜೂನ್ ತಿಂಗಳ 10ನೇ ತಾರೀಖಿನಿಂದ ಕಾಣೆಯಾಗಿದ್ದು ಪತ್ತೆಗಾಗಿ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತಂತೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಬಂಕಾಪುರ ವಾಸಿಯಾದ ಶ್ರೀಮತಿ ರೂಪಾ ಇವರನ್ನು ಧಾರವಾಡ ಜಿಲ್ಲೆಯ ಕಲಘಟಿ ತಾಲೂಕಿನ ದಾಸಿಕೊಪ್ಪಕ್ಕೆ ವಿವಾಹಕ್ಕೆ ಮಾಡಿಕೊಡಲಾಗಿತ್ತು. ಇತ್ತೀಚೆಗೆ ತಾಯಿ ಮನೆ ಬಂಕಾಪುರಕ್ಕೆ ಆಗಮಿಸಿದ್ದ ರೂಪಾ ಅವರು ಕಾಣೆಯಾಗಿರುವುದಾಗಿ ತಾಯಿ ಇಂದ್ರವ್ವ ಭಂಗಿ ಎಂಬುವವರು ದೂರು ದಾಖಲಿಸಿದ್ದಾರೆ. 

ಕಾಣೆಯಾದ ಮಹಿಳೆ 28 ವರ್ಷ ವಯೋಮಾನದಳಾಗಿದ್ದು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋದಿಗೆಂಪು ಬಣ್ಣ ಹೊಂದಿದ್ದು ಕನ್ನಡ ಭಾಷೆ ಓದಲು ಹಾಗೂ ಬರೆಯಲು ಬರುತ್ತದೆ. ಕೊರಳಲ್ಲಿ ಬಂಗಾರದ ತಾಳಿ ಮತ್ತು ಚೈನ ಸರ ಧರಿಸಿದ್ದಾರೆ. ಸದರಿ ಮಹಿಳೆ ಪತ್ತೆಯಾದಲ್ಲಿ ಸಾರ್ವಜನಿಕರು ಆರಕ್ಷಕ ಉಪನಿರೀಕ್ಷಕರು, ಬಂಕಾಪುರ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.