ಬೈಲಹೊಂಗಲ 24: ಸತಿ ಪತಿಗಳಿಬ್ಬರು ಅರಿತು ಬಾಳುವುದೇ ಸುಖಿ ಜೀವನದ ಗುಟ್ಟು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ತಾಲೂಕಿನ ದೊಡವಾಡ ಗ್ರಾಮದಲ್ಲಿ ಬುಧವಾರ ವಿವಾಹ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗೃಹಸ್ಥ ಧರ್ಮಕ್ಕೆ ಬಹಳಷ್ಟು ಪಾವಿತ್ರ್ಯತೆ ನೀಡಲಾಗಿದೆ. ಎಲ್ಲ ಆಶ್ರಮಗಳಿಗೆ ಮೂಲ ನೆಲೆ ಗೃಹಸ್ಥಾಶ್ರಮವೇ ಆಗಿದೆ. ಶಾಂತಿ,ಸಹನೆ,ತಾಳ್ಮೆ, ಸೇವಾ ಮನೋಭಾವನೆಗಳನ್ನು ಗೃಹಸ್ಥಾಶ್ರಮಿಗಳಲ್ಲಿ ಕಾಣಬಹುದಾಗಿದೆ. ಒಂದು ಮನೆತನ ಉಜ್ವಲವಾಗಿ ಬೆಳೆಯಲು ಆ ಮನೆಗೆ ಬಂದ ಹೆಣ್ಣುಮಗಳ ಮನೋಧರ್ಮವೂ ಕೂಡ ಬಹಳ ಮುಖ್ಯ. ಗಂಡೊಂದು ಹೆಣ್ಣಾರು ಎಂದು ಕೇಳಿದ್ದೇವೆ. ಅಂದರೆ ಒಂದು ಗಂಡಿಗೆ ಆರು ಜನ ಹೆಂಡತಿಯರು ಎಂಬರ್ಥವಲ್ಲ ಕಾರ್ಯೇಷುದಾಸಿ, ಕರಣೇಷು ಮಂತ್ರಿ, ಭೂಜ್ಯೇಸು ಮಾತಾ, ರೂಪೇಷು ಲಕ್ಷ್ಮೀ, ಕ್ಷಮಯಾಧರಿತ್ರಿ, ಶಯನೇಷು ರಂಭಾ ಎಂಬ 6 ಸದ್ಗುಣಗಳಿಂದ ಸಂಪನ್ನೆಯಾಗಿ ಪತಿಯ ಬಾಳು ಬೆಳಗಬೇಕು ಎಂದರು.
ವೇದಿಕೆ ಮೇಲೆ ದೊಡವಾಡ ಹಿರೇಮಠದ ಜಡಿಸಿದ್ದೇಶ್ವರ ಸ್ವಾಮಿಜಿ,ಸಂಗೊಳ್ಳಿಯ ಹಿರೇಮಠದ ಗುರುಲಿಂಗ ಶಿವಾಚರ್ಾರು, ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಸ್ವಾಮಿಜಿ, ನವನಗರ ಹುಬ್ಬಳ್ಳಿಯ ಸಿದ್ಧರಾಮ ಶಿವಯೋಗಿಗಳು ಇದ್ದರು.
ಬಾಕ್ಸ್ ಐಟಂ : ದೇವಾನುದೇವತೆಗಳ ಅನುಗ್ರಹದ ನಂಬಿಕೆ ಹಾಗೂ ಶಾಸ್ತ್ರೋಕ್ತ ವಿಧಿ ವಿಧಾನಗಳಿಂದ ನೆರವೇರುವ ವಿವಾಹ ಮಹೋತ್ಸವಗಳಲ್ಲಿ ಮಂಗಲಾಕ್ಷತೆ ಬದಲಾಗಿ ಹೂಪತ್ರಿ ಮಾತ್ರ ಬಳಸಲು ಹಚ್ಚಿ ಸಂಸ್ಕೃತಿ, ಸಂಪ್ರದಾಯಗಳಿಗೆ ದ್ರೋಹ ಬಗೆಯುತ್ತಿರುವ ಕೆಲವರ ಬಗ್ಗೆ ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಜಾಗೃತರಾಗಿರಬೇಕು.
ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರು ಪೀಠ