ಬೆಳಗಾವಿ 18, ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 4 ವರ್ಷದಿಂದ ನೀನು ಎಲ್ಲಿ ಮಲಗಿದ್ದೆ? ಎಂದು ಪ್ರಶ್ನಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ರೈತ ಮಹಿಳೆ ಜಯಶ್ರೀ ಗುರುನ್ನವರ್ ಅವರು ಬೆಳಗಾವಿ ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ವಿವಿಧ ಬೇಡಿಕೆ ಹಾಗೂ ದರ ನಿಗದಿ ಮಾಡುವಂತೆ ಸಕರ್ಾರದ ವಿರುದ್ಧ ಕಟುವಾಗಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಲ್ಕು ವರ್ಷಗಳಿಂದ ಎಲ್ಲಿ ಮಲಗಿದ್ದೆ? ಈಗ ಮಾತನಾಡೋಕೆ ಬಂದಿದ್ದೀರಾ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕುವಾಗ ನನ್ನ ನೆನಪಾಗಲಿಲ್ಲವೆ ಎಂದು ಪ್ರಶ್ನಿಸಿದ್ದರು.
ಇದೀಗ ಮುಖ್ಯಮಂತ್ರಿಗಳ ಹೇಳಿಕೆಯಿಂದ ಮನನೊಂದ ಜಯಶ್ರೀ ಅವರು ಸನ್ಮಾನ್ಯ ಮುಖ್ಯಮಂತ್ರಿಗಳು ಈ ರೀತಿ ಮಾತನಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಒಬ್ಬ ಹೆಣ್ಣು ಮಗಳನ್ನು ಕುಮಾರಸ್ವಾಮಿಗಳು ಈ ರೀತಿ ಪ್ರಶ್ನಿಸುವ ಮೂಲಕ ಅವರು ಹೆಣ್ಣು ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಜಯಶ್ರೀ ಕಣ್ಣೀರು ಹಾಕಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಬೆಳಗಾವಿಯಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ನವೆಂಬರ್ 19ಕ್ಕೆ ಬಂದು ಸಭೆ ನಡೆಸುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು ಇದೀಗ ರೈತರನ್ನು ನವೆಂಬರ್ 20ಕ್ಕೆ ಬೆಂಗಳೂರಿಗೆ ಬರುವಂತೆ ಸೂಚಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸ್ತುತ ಹೋರಾಟ ನಿರತ ರೈತರ ಮೇಲೆ ಪೊಲೀಸರು ಕೇಸ್ ದಾಖಲಿಸಿ ಹಿಂಡಗಾಲ ಜೈಲಿಗೆ ಕರೆದೊಯ್ಯುವ ಮೂಲಕ ರಾಜ್ಯ ಸಕರ್ಾರ ರೈತರ ಧ್ವನಿಯನ್ನು ನಿಲ್ಲಿಸುವ ಕೆಲಸ ಮಾಡಿಸುತ್ತಿದೆ.
ವೈದ್ಯಾಧಿಕಾರಿಗಳೊಂದಿಗೆ ಸಕರ್ಾರದ ಮುಖ್ಯಕಾರ್ಯದಶರ್ಿ ಸಂವಾದ
ಬೆಂಗಳೂರು, ನ.18-ರಾಜ್ಯದಲ್ಲಿ ಎಚ್1ಎನ್1 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕರ್ಾರದ ಮುಖ್ಯಕಾರ್ಯದಶರ್ಿ ಟಿ.ಎಂ.ವಿಜಯಭಾಸ್ಕರ್ ಅವರು ರಾಜ್ಯದ ಎಲ್ಲಾ ಜಿಲ್ಲಾ ವೈದ್ಯಾಧಿಕಾರಿಗಳು ಹಾಗೂ ವಿಶೇಷ ವೈದ್ಯಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು.
ರಾಜ್ಯದಲ್ಲಿ ಇದುವರೆಗೆ ಎಚ್1ಎನ್1 ಸೋಂಕಿಗೆ ತುತ್ತಾದ 31 ಮಂದಿ ಸಾವನ್ನಪ್ಪಿದ್ದಾರೆ ಅಕ್ಟೋಬರ್ 12ರಂದು ಒಂದೇ ದಿನ ಐದು ಮಂದಿ ಬಲಿಯಾಗಿದ್ದಾರೆ. ನವೆಂಬರ್ 16ರ ವೇಳೆಗೆ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿತ್ತು. ಆದರೆ ಇದುವರೆಗೆ ಒಟ್ಟು 31 ಮಂದಿ ಬಲಿಯಾಗಿರುವುದು ತಿಳಿದುಬಂದಿದೆ.
ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ತೆಗೆದುಕೊಂಡ ವಿವಿಧ ಆರೋಗ್ಯ ಶಿಕ್ಷಣ ಚಟುವಟಿಕೆಗಳಾದ ಜಾಥಾ, ಶಾಲೆಗಳಲ್ಲಿ ಜಾಗೃತಿ ಮೂಡಿಸುವುದು, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಸಭೆಗಳಲ್ಲಿ ಆಶಾಗಳ ಮುಖಾಂತರ ಜಾಗೃತಿ ಮೂಡಿಸುತ್ತಿರುವುದು ಮತ್ತು ಈ ಕುರಿತು ರೇಡಿಯೋ, ಟಿವಿ, ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ವಿವಿಧ ಚಟುವಟಿಕೆಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ರೋಗ ಹರಡದಂತೆ ತಡೆಗಟ್ಟಲು ಎಚ್1ಎನ್1 ರೋಗ ಲಕ್ಷಣಗಳಾದ ಜ್ವರ, ಗಂಟು ನೋವು, ಉಸಿರಾಟದ ತೊಂದರೆ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾರ್ವಜನಿಕರಲ್ಲಿ ಈ ಕುರಿತು ಇನ್ನು ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಆರೋಗ್ಯ ಶಿಕ್ಷಣ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಅವರು ಸೂಚಿಸಿದರು.
ಎಚ್1ಎನ್1 ನಿಂದ ಉಂಟಾಗಬಹುದಾದ ಸಾವುಗಳನ್ನು ತಪ್ಪಿಸಲು ಜಿಲ್ಲೆಗಳಲ್ಲಿರುವ ಎಲ್ಲಾ ಖಾಸಗಿ ವೈದ್ಯರಿಗೂ ಶಂಕಿತ ರೋಗಲಕ್ಷಣಗಳುಳ್ಳ ರೋಗಿಗಳು ಬಂದಾಗ ತಕ್ಷಣ ಅಗತ್ಯವಿರುವ ಔಷಧೋಪಚಾರ ಮಾಡಲು ಮಾಹಿತಿ ಕಾಯರ್ಾಗಾರಗಳನ್ನು ಹಮ್ಮಿಕೊಳ್ಳಲು ಹಾಗೂ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಗಳನ್ನು ನಡೆಸಲು ಮುಖ್ಯ ಕಾರ್ಯದಶರ್ಿ ವಿಜಯಭಾಸ್ಕರ್ ಸೂಚಿಸಿದ್ದಾರೆ.