ಜನನೀಜನ್ಮಭೂಮಿಶ್ಚ ಸ್ವಗರ್ಾದಪಿ ಗರೀಯಸೀ : ಡಾ. ನಿರ್ಮಲಾ


ಲೋಕದರ್ಶನ ವರದಿ

ಬೆಳಗಾವಿ : ನಾವು ಪ್ರಕೃತಿ ಬಿಟ್ಟಿಲ್ಲ, ಪ್ರಕೃತಿ ಬಿಟ್ಟರೆ ನಮ್ಮ ಬದುಕುಇಲ್ಲ್ಲ, ಭೂತಾಯಿ ಮಕ್ಕಳಆದ ನಾವು ಅದರರಕ್ಷಣೆ ನಮ್ಮಎಲ್ಲರ ಹೊಣೆ, ರೈತ ಬೀಜ ಹಾಕುವಾಗ ಪವಿತ್ರವಾದ ಭೂತಾಯಿಗೆ ಪೂಜೆ ಸಲ್ಲಿಸಿ ತನ್ನ ಕೃಷಿ ಚಟುವಟಿಕೆಆರಂಭಿಸುತ್ತಾನೆ. ನಮ್ಮ ಹಬ್ಬಗಳು ಒಂದೊಂದು ವಿಶೇಷ ಮಹತ್ವ ಹಾಗೂ ಅದರದೆಆದಮಹತ್ವ, ಹಿನ್ನಲೆ ಹೊಂದಿವೆ. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆಜನನೀಜನ್ಮಭೂಮಿಶ್ಚ ಸ್ವಗರ್ಾದಪಿ ಗರೀಯಸೀ ಎಂದುಡಾ. ನಿರ್ಮಲಾ ಬಟ್ಟಲ್ ಹೇಳಿದರು.

ನಗರದ ಲಿಂಗಾಯತ ಸಭಾಭವನದಲ್ಲಿಶನಿವಾರ'ಲಿಂಗಾಯತ ಮಹಿಳಾ ಸಮಾಜದ 2018-19ನೇ ಸಾಲಿನ ಪ್ರಥಮ ಸಭೆಯನ್ನು ಉದ್ಧೇಶಿಸಿ ಮಾತನಾಡಿದಅವರು ನಮ್ಮ ಸಂಸ್ಕೃತಿಯೆ ನಮಗೆ ಮಿಗಿಲು, ಆ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆಕೊಂಡೊಯ್ಯುವ ಹೊಣೆ ಮಹಿಳೆಯರ ಮೇಲಿದೆ, ಪ್ರಕೃತಿಯನ್ನುಅರ್ಥ ಮಾಡಿಕೊಳ್ಳುವುದೇ ಹಬ್ಬಗಳ ಒಳರ್ಥ. (ಉದಾ:ಗೆಮಣೆತ್ತಿನ ಅಮವಾಸ್ಯೆ,) ಎಲ್ಲ ಹಬ್ಬಗಳು ಮಹತ್ವ ಹಾಗೂ ಯಾಕೆ ಆಚರಿಸುತ್ತೇವೆ ಎಂಬುದನ್ನು ಸವಿಸ್ತಾರವಾಗಿ ಹೇಳಿದ ಅವರು ನಂತರ ಲಿಂಗಾಯತ ಮಹಿಳಾ ಸಮಾಜದಿಂದ ಸನ್ಮಾನ ಸ್ವೀಕರಿಸಿದರು.

ನೂತನವಾಗಿಸದಸ್ಯರಾದವರಿಗೆ ಗುಲಾಬಿ ಹೂ ಕೊಡುವುವದರ ಮೂಲಕ ತಮ್ಮ ಸಂಘಕ್ಕೆ ಬರಮಾಡಿಕೊಳ್ಳಲಾಯಿತು. ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಅನಿತಾ ದೇಸಾಯಿ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ, ಕಮಲಾಕ್ಷೀ, ಲಿಂಗಾಯತ ಮಹಿಳಾ ಸಮಾಜದ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 

ಕಾರ್ಯದಶರ್ಿ ಪ್ರತಿಭಾ ನಿರೂಪಿಸಿದರು.ರಾಜೇಶ್ವರಿ ಹಿರೇಮಠ ಪರಿಚಯಿಸಿದರು.