ಅಶ್ವತ್ಥಾಮ ಪಾತ್ರದಲ್ಲಿ ವಿಕ್ಕಿ!


  ಮುಂಬಯಿ, ಏ 16 ಬೆಳ್ಳಿತೆರೆಯ ಮೇಲೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಅಶ್ವತ್ಥಾಮ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ .   ಇತ್ತೀಚಿಗಷ್ಟೆ ವಿಕ್ಕಿ ಕೌಶಲ್ ಅಭಿನಯದ ಉರಿ:ದಿ ಸರ್ಜಿಕಲ್  ಸ್ಟ್ರೈಕ್ ಚಿತ್ರ  ಬಿಡುಗಡೆಗೊಂಡು ಗಲ್ಲಾಪೆಟ್ಟಿಗೆ ಕಬಳಿಸುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರವನ್ನು ಆದಿತ್ಯ ಧರ್ ನಿರ್ದೇಶಿಸಿದ್ದು  , ರೋನಿ ಸ್ಕ್ರೂವಾಲಾ ಕೈ ನಿಮರ್ಾಣಕ್ಕೆ ಜೋಡಿಸಿದ್ದರು. ಈಗ ಇವರಿಬ್ಬರು ಸೇರಿ ಮತ್ತೊಂದು ಚಿತ್ರ ಕಥೆ ಹೆಣೆಯಲು ಸಜ್ಜಾಗಿದ್ದು, ವಿಕ್ಕಿ ಕೌಶಲ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.   ಇದು ಒಂದು ಹಂತದ ಪೌರಾಣಿಕ ಕಥೆಯಾಗಿದ್ದು, ಅಶ್ವತ್ಥಾಮ ಆಧಾರಿತವಾದ ಚಿತ್ರವಾಗಿದೆಯಂತೆ. ದೊಡ್ಡ ಮಟ್ಟದ ಬಜೆಟ್ ನಲ್ಲಿ ಚಿತ್ರ ಹೊರತರುವ ಯೋಜನೆ ಇದ್ದು, ಇದೇ ವರ್ಷ ಚಿತ್ರೀಕರಣ ಆರಂಭವಾಗಲಿದೆ.    ಮಹಾಭಾರತದಲ್ಲಿ ಅಶ್ವತ್ಥಾಮ ರನ್ನು ಒಬ್ಬ ಮಹಾನ್ ಯೋಧನೆಂದೆ ಪರಿಗಣಿಸಲಾಗಿದೆ. ಅವರು ದ್ರೋಣಾಚಾರ್ಯ ಹಾಗೂ ಕೃಪಿಯ ಸುಪುತ್ರನಾಗಿದ್ದರು. ಮಹಾಭಾರತದ ಅನುಸಾರ ಅಶ್ವತ್ಥಾಮ ಅಮರರಾಗಿದ್ದು, ಕಲಿಯುಗ ಮುಗಿಯುವವರೆಗೂ ಅವರಿಗೆ ಸಾವಿಲ್ಲ ಎಂಬ ಬಲವಾದ ನಂಬಿಕೆ ಇತ್ತು.