ಲೋಕದರ್ಶನ ವರದಿ
ವಿಜಯಪುರ 04: ಆಧುನಿಕ ಜಗತ್ತಿನಲ್ಲಿ ಇಂಗ್ಲೀಷ ಭಾಷೆಗೆ ಹೆಚ್ಚಿನ ಮಹತ್ವ ಬಂದಿದ್ದು, ಪ್ರತಿಯೊಬ್ಬರು ಇಂಗ್ಲೀಷ ಕಲಿಕೆಗೆ ಹಾತೊರಯುತ್ತಿದ್ದಾರೆ ಎಂದು ಯುಆರ್ಸಿ ಪದವಿ ವಿಭಾಗದ ಸಂಯೋಜಕ ಡಾ. ಫಯಾಜ ಇಲಕಲ್ ಹೇಳಿದರು.
ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಬಿಬಿಎ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಭಾಷಾ ಜ್ಞಾನ ಅತ್ಯಂತ ಅವಶ್ಯಕವಾಗಿದೆ. ಪ್ರತಿಯೊಬ್ಬರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೀಷ ಕಲಿಕೆಗೆ ಮಹತ್ವ ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಂಸ್ಥೆಯ ನಿರ್ದೇಶಕ ಎ.ಎಂ.ಬಗಲಿ ಹಾಗೂ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಎ ಆರ್ ಎಸ್ ಇನಾಮದಾರ ಕಾಲೇಜಿನ ಪ್ರಾಚಾರ್ಯ ಡಾ. ಅಫ್ಜಲ್ ಮಾತನಾಡಿ ಮಕ್ಕಳಲ್ಲಿ ಗುರಿ ಸಾಧಿಸುವ ಛಲ ಹೊಂದಿರಬೇಕು ಜೀವನದ ಗುರಿ ತಲುಪಲು ವಿದ್ಯೆಯನ್ನು ಸಾಧನವನ್ನಾಗಿ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಿಗಳಿಗೆ ಮಾತ್ರ ಮೌಲ್ಯವಿದ್ದು ಸದಾ ಓದಿನ ಕಡೆಗೆ ಗಮನ ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಬಿಎ ಕಾಲೇಜಿನ ಪ್ರಾಚಾರ್ಯ ಮನ್ಸೂರ ಕೋಲಾರ ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ಸಾಧನೆಗಳ ಕುರಿತು ವಿವರಿಸಿದರು. ಸಮಾರಂಭದಲ್ಲಿ ಎಸ್ ಎಸ್ ರೂಡಗಿ, ರೂಪಾ ಕಾಪ್ಸೆ, ಇಮ್ರಾನ ಖಾನ ಮಿರಗಿ, ಇರ್ಫಾನ ಖಾನ ಉಸ್ತಾದ, ರಿಜ್ವಾನ ನಾಯ್ಕೋಡಿ, ಸಮದ್ ಬೀಳಗಿ, ಶಹಜಾದಿ, ಶೇಖ, ಗುಲ್ರಜ ಬೇಪಾರಿ, ಡಾ. ರೇಶ್ಮಾ ಬಾನು, ಫರೀದಾ ನಾಗಠಾಣ, ನಸ್ರೀನ ಮೊಮೀನ, ನಿಂಗು ಗುಜಗೊಂಡ, ಪ್ರಶಾಂತ ನಿಂಬರಗಿ, ಕಾಲಲೇಜಿನ ಸಿಬ್ಬಂಧಿ, ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.