ಕಾರವಾರ: ಸೋಮವಾರ ಛತ್ತೀಸಗಡ ರಾಜ್ಯದ ಬಸ್ತರ ವಿಭಾಗದ ಕಾಂಕೇರ ಬಳಿ ನೆಲಬಾಂಬ್ ಸ್ಫೋಟದಲ್ಲಿ ವೀರಮರಣ ಅಪ್ಪಿದ ಬಿಎಸ್ಎಫ್ ಯೋಧ ವಿಜಯಾನಂದ ನಾಯ್ಕ ಅವರ ಪಾಥರ್ಿವ ಶರೀರ ಬುಧುವಾರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಆಗಲೇ ಸಾವಿರಾರು ಜನರು ಜಿಲ್ಲಾಧಿಕಾರಿ ಕಚೇರಿ ಬಳಿ ಹೂಗುಚ್ಛ ಹಿಡಿದು ಅಗಲಿದ ಯೋಧನ ದರ್ಶನಕ್ಕೆ ಕಾದಿದ್ದರು. ಸೈನಿಕ ವಿಭಾಗದವರು ಜಿಲ್ಲಾಧಿಕಾರಿ ಕಚೇರಿ ತಲುಪುತ್ತಿದ್ದಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮತ್ತು ಎಸ್ಪಿ ವಿನಾಯಕ ಪಾಟೀಲ ಅವರು ಹೂಗುಚ್ಚ ಇಟ್ಟು ಗೌರವ ಅಪರ್ಿಸಿದರು. ಸಕರ್ಾರಿ ಗೌರವ ನೀಡಿದ ನಂತರ ಯೋಧ ಅಂತಿಮ ಯಾತ್ರೆ ಮೆರವಣಿಗೆ ಆರಂಭವಾಯಿತು. ವಿಜಯಾನಂದ ನಾಯ್ಕ ಅಮರ್ ರಹೇ ಎಂಬ ಘೋಷಣೆಗಳು ಮುಳಗಿದವು. ದೇಶಕ್ಕಾಗಿ , ದೇಶದೊಳಗಿನ ಐಕ್ಯತೆಗಾಗಿ ಹೋರಾಡಿದ ಯೋಧನ ಧೈರ್ಯವನ್ನು ಕೊಂಡಾಡಲಾಯಿತು.
ವೀರಯೋಧ ವಿಜಯಾನಂದ ನಾಯ್ಕ ಪಂಚಭೂತಗಳಲ್ಲಿ ಲೀನ:
ಯೋಧನ ಅಂತಿಮ ಮೆರವಣಿಗೆಯಲ್ಲಿ ಶಾಸಕಿ ರೂಪಾಲಿ ನಾಯ್ಕ, ವಿಧಾನಪರಿಷತ್ ಮಾಜಿ ಸದಸ್ಯೆ ಶುಭಲತಾ ಆಸ್ನೋಟಿಕರ್, ಮಾಜಿ ಶಾಸಕ ಸತೀಶ್ ಸೈಲ್,ನಗರಸಭೆಯ ಅಧ್ಯಕ್ಷ ಗಣಪತಿ ನಾಯ್ಕ ಸೇರಿದಂತೆ ಕಾರವಾರದ ಸಾರ್ವಜನಿಕರು, ಗಣ್ಯರು ಸಾಗಿದರು. ನಗರದ ಮುಖ್ಯ ರಸ್ತೆಗಳಲ್ಲಿ ಸಾರ್ವಜನಿಕರು ಮಡಿದ ಯೋಧನಿಗೆ ಕಂಬನಿ ಮಿಡಿದರು ಮತ್ತು ಅಂತಿಮ ಗೌರವ ಸಲ್ಲಿಸಿದರು. ಕಾಲೇಜು ವಿದ್ಯಾಥರ್ಿಗಳು ರಸ್ತೆಯ ಇಕ್ಕೆಲದಲ್ಲಿ ನಿಂತು ಯೋಧನ ವೀರ ಮರಣ ಸ್ಮರಿಸಿದರು ಮತ್ತು ಅಂತಿಮ ನಮನ ಸಲ್ಲಿಸಿದರು.
ಪೊಲೀಸ್ ಪರೇಡ್ ಮೈದಾನದಲ್ಲಿ ಗುಂಡು ಹಾರಿಸಿ ಗೌರವ:
ಯೋಧ ವಿಜಯಾನಂದ ಸುರೇಶ್ ನಾಯ್ಕ ಪಾಥರ್ಿವ ಶರೀರದ ಅಂತಿಮ ದರ್ಶನಕ್ಕಾಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಅವಕಾಶ ಕಲ್ಪಿಸಲಾಯಿತು. ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ತೋಪು ಹಾರಿಸಿ ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಶಾಸಕಿ ರೂಪಾಲಿ ನಾಯ್ಕ,ಮಾಜಿ ಶಾಸಕ ಸೈಲ್, ಮಾಜಿ ಶಾಸಕಿ ಶುಭಲತಾ ಅಸ್ನೋಟಿಕರ್ ಯೋಧನ ಪಾಥರ್ಿವ ಶರೀರಕ್ಕೆ ಹೂಗುಚ್ಚವಿರಿಸಿ ಅಂತಿಮ ನಮನ ಸಲ್ಲಿಸಿದರು. ನಗರದ ಹಲವು ಗಣ್ಯರು ಗೌರವ ಅಪರ್ಿಸಿದ ನಂತರ ಸಾರ್ವಜನಿಕರು ಯೋಧನ ಅಂತಿಮ ದರ್ಶನ ಪಡೆದರು. ಯೋಧ ವಿಜಯಾನಂದ ನಾಯ್ಕನ ಸ್ನೇಹಿತರು, ಆತನ ಜೊತೆ ಶಾಲೆ, ಕಾಲೇಜು ಕಲಿತವರು, ಆತನಿಕೆ ಕಲಿಸಿದ ಶಿಕ್ಷಕರು ಸಾವಿರಾರು ಜನರು ಯೋಧನ ಅಂತಿಮ ದರ್ಶನ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಕುಟುಂಬದರಿಗೆ ಹಸ್ತಾಂತರ:
ಯೋಧನ ಪಾಥರ್ಿವ ಶರೀರವನ್ನು ಮಧ್ಯಾಹ್ನ 12ಕ್ಕೆ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಕೋಮರಾಪಂಥವಾಡದಲ್ಲಿ ಯೋಧನ ಮನೆಯಿದ್ದು, ವಿಜಯಾನಂದ ನಾಯ್ಕ ಪಾಥರ್ಿವ ಶರೀರ ಮನೆ ತಲುಪುತ್ತಿದ್ದಂತೆ ಕುಟುಂಬದವರ, ತಂದೆ ತಾಯಿ ಸಹೋದರ ಸಹೋದರಿಯರ ಆಕ್ರಂದನ ಮುಗಿಲು ಮುಟ್ಟಿತು. ಪಾಥರ್ಿವ ಶರೀರಕ್ಕೆ ಕುಟುಂಬದ ಸಂಪ್ರದಾಯದಂತೆ ಎಲ್ಲಾ ಅಂತಿಮ ಗೌರವ ಸಲ್ಲಿಸಿದ ನಂತರ ದಿವೇಕರ ಕಾಲೇಜಿನ ಸಮೀಪದ ಸ್ಮಶಾನಕ್ಕೆ ಪಾಥರ್ಿವ ಶರೀರವನ್ನು ಅಪರಾಹ್ನ 3-30ಕ್ಕೆ ತಂದು ಅಂತಿಮ ಸಂಸ್ಕಾರ ಮಾಡಲಾಯಿತು. ವೀರಯೋಧನ ದೇಹ ಪಂಚಭೂತಗಳಲ್ಲಿ ಲೀನ ವಾಗುತ್ತಿದ್ದಂತೆ ವಿಜಯಾನಂದ ನಾಯ್ಕ ಅಮರ್ ರಹೇ ಎಂಬ ಘೋಷಣೆಗಳು ಮುಳಗಿದವು.
ಸಕರ್ಾರದಿಂದ ಭರವಸೆ:
ಜಿಲ್ಲಾಡಳಿತದಿಂದ ಮತ್ತು ಸಕರ್ಾರದಿಂದ ಯೋಧನ ಕುಟುಂಬಕ್ಕೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಕುಲ್ ಅವರು ಕುಟುಂಬದವರಿಗೆ ಭರವಸೆ ತುಂಬಿದರು. ಕಂದಾಯ ಸಚಿವ ದೇಶಪಾಂಡೆ ಅವರು ಸಹ ಈ ಸಂಬಂಧ ಜಿಲ್ಲಾಡಳಿತಕ್ಕೆ ಕೆಲವು ಸೂಚನೆಗಳನ್ನು ನೀಡಿದ್ದು, ಅದನ್ನು ಕುಟುಂಬ ವರ್ಗದವರಿಗೆ ತಿಳಿಸಲಾಯಿತು.