ಕೊಚ್ಚಿ 16, ಸಾಮಾಜಿಕ ಹೋರಾಟಗಾತರ್ಿ ತೃಪ್ತಿ ದೇಸಾಯಿ ಶಬರಿಮಲೆ ದೇಗುಲಕ್ಕೆ ತೆರಳುವ ಸಲುವಾಗಿ ಇಂದು ಮುಂಜಾನೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದರಾದರೂ ಅವರು ತೀವ್ರ ಪ್ರತಿಭಟನೆ ಎದುರಿಸಬೇಕಾಯಿತು. ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಏರ್ಪೋಟರ್್ನಿಂದ ಹೊರಬರಲು ಸಾಧ್ಯವಾಗಿಲ್ಲ.
ಬೆಳಗ್ಗೆ 4.40ಕ್ಕೆ ಪುಣೆಯಿಂದ ಆಗಮಿಸಿರುವ ತೃಪ್ತಿ ಮತ್ತವರ ತಂಡ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿರುವುದರಿಂದ ಹಾಗೂ ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನ ಮಾಡದ ಹೊರತು ಇಲ್ಲಿಂದ ಕದಲುವುದಿಲ್ಲ ಎಂದು ತೃಪ್ತಿ ಪಟ್ಟು ಹಿಡಿದಿರುವುದರಿಂದ ವಿಮಾನ ನಿಲ್ದಾಣದಲ್ಲಿ ಬಿಗುವಿನ ವಾತಾವರಣ ನಿಮರ್ಾಣವಾಗಿದೆ. ಸೆ.28ರಂದು ಕೋಟರ್್ ಅಂತಿಮ ತೀಪರ್ು ನೀಡಿದ ನಂತರ ಮೂರನೆ ಬಾರಿಗೆ ಅಯ್ಯಪ್ಪ ದೇವಾಲಯದ ಬಾಗಿಲು ತೆರೆಯಲಾಗುತ್ತಿದೆ.
ಪ್ರತಿಭಟನಾಕರರು ಹಿಂಸಾಚಾರಕ್ಕಿಳಿಯಬಾರದು, ಒಮ್ಮೆ ನಾವು ಅಲ್ಲಿ ತಲುಪಿದರೆ ನಮಗೆ ಯಾವ ರೀತಿಯ ಭದ್ರತೆ ನೀಡಿದ್ದಾರೆ ಎಂಬುದು ತಿಳಿಯುತ್ತದೆ. ಒಂದು ವೇಳೆ ನಮಗೆ ಭದ್ರತೆ ನೀಡದಿದ್ದರೂ ನಾವು ಅಲ್ಲಿಗೆ ತೆರಳುತ್ತೇವೆ. ನನಗೆ ಈಗಾಗಲೇ ಹಲವು ಬೆದರಿಕೆ ಕರೆಗಳು ಬಂದಿವೆ. ಹೀಗಾಗಿ ನನ್ನ ಮೇಲೆ ದಾಳಿ ನಡೆಯಬಹುದು. ಆದರೆ, ಯಾವುದೇ ಕಾರಣಕ್ಕೂ ಅಯ್ಯಪ್ಪ ದರ್ಶನ ಪಡೆಯದೆ ವಾಪಸ್ ಮಹಾರಾಷ್ಟ್ರಕ್ಕೆ ತೆರಳುವುದಿಲ್ಲ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.