ಬೈಲಹೊಂಗಲ ಬಿಜೆಪಿಯಿಂದ ವಿಜೆಯೋತ್ಸವ

ಬೈಲಹೊಂಗಲ 10: ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿದ್ದ ರಾಜ್ಯದ 15 ವಿಧಾನಸಭಾ ಮತಕ್ಷೇತ್ರಗಳಿಗೆ  ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ 12 ಸ್ಥಾನಗಳಲ್ಲಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ  ತಾಲೂಕಿನ ದೊಡವಾಡ ಗ್ರಾಮದ ಬಿಜೆಪಿ ಕಾರ್ಯಕರ್ತರು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

          ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿ ಕಾಣಲಿದೆ ಎಂಬ ಭರವಸೆಯೊಂದಿಗೆ ಮತದಾರರು 12 ಕ್ಷೇತ್ರಗಳಲ್ಲಿ  ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಇದೊಂದು ಅಭೂತಪೂರ್ವ ಗೆಲುವು. ಈ ವಿಜಯದಿಂದ ಮುಂದೆ ರಾಜ್ಯದ ಜನರ ಮನಸ್ಸಿನಲ್ಲಿದ್ದ ಅಸ್ಥಿರ ಸರಕಾರದ ಮನೋಭಾವ ದೂರಾಗಿದೆ. ಇನ್ನು ಮುಂದೆ ಕರ್ನಾಟಕದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಲಿದೆೆ ಎಂದರು. 

ಶ್ರೀಶೈಲ ಎಡಳ್ಳಿ, ನಿಂಗಪ್ಪ ಚೌಡಣ್ಣವರ,ಉದಯ ಕೊಟಬಾಗಿ, ಬಸವರಾಜ ನೇರಗಿ, ಮಡಿವಾಳಪ್ಪ ಚಳಕೊಪ್ಪ, ಗದಿಗೆಪ್ಪ ಶಿವಧೂತನವರ, ಈರಪ್ಪ ಗಂಟಿ, ಬಸವಂತ ಜಮನೂರ,ರಾಮಣ್ಣ ಇಂಗಳೆ, ಬಸವರಾಜ ಧಾರವಾಡ, ಶಂಕ್ರಪ್ಪ ಅಂದಾನಶೆಟ್ಟಿ, ಚನ್ನಯ್ಯ ದಾಭಿಮಠ, ಆನಂದ ಅಸುಂಡಿ,ಗೋವಿಂದ ಸಂಗೊಳ್ಳಿ, ಅಪ್ಪು ಅಸುಂಡಿ,ಮುದಕಪ್ಪ ಗಾಯಕವಾಡ, ಮಹಾಂತೇಶ ಅಸುಂಡಿ ಸೇರಿದಂತೆ ನೂರಾರು ಕಾರ್ಯಕರ್ತರು ಸೇರಿದ್ದರು.