ಮೂಲೆಗುಂಪಾಗುತ್ತಿದೆ ವೃತ್ತಿರಂಗಭೂಮಿ: ಡಾ. ಸಿದ್ಧರಾಮ ಶ್ರೀಗಳು

ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವ ನಾಗನೂರ ರುದ್ರಾಕ್ಷಿಮಠದ ಡಾ. ಸಿದ್ಧರಾಮ ಮಹಾಸ್ವಾಮಿಗಳು

ಬೆಳಗಾವಿ 02: ಆಧುನಿಕ ತಂತ್ರಜ್ಞಾನದ ಭರಾಟೆಯ ಇಂದಿನ ದಿನಗಳಲ್ಲಿ ವೃತ್ತಿರಂಗಭೂಮಿ ಮೂಲಿಗುಂಪಾಗುತ್ತಲಿವೆ.  ಎಲ್ಲರೂ ಟಿ.ವಿ. ಮೊಬೈಲ್, ವಾಟ್ಸಾಪ್ ಗಳಲಲ್ಲಿ ಮುಳಿಗಿರುವುದಿಂದ ರಂಗಭೂಮಿ ಆಸಕ್ತಿ ಜನರಲ್ಲಿ  ಕಡಿಮೆಯಾಗುತ್ತಲಿದೆ.  ಸಂಕಷ್ಟ ಸ್ಥಿತಿಯಲ್ಲಿರುವ ಈ  ಕಲೆಯನ್ನು  ಉಳಿಸಿ ಬೆಳೆಸಿಕೊಂಡು ಹೋಗಬೆಕಾದುದು ನಮ್ಮ ನಿಮ್ಮೆಲ್ಲ ಕರ್ತವ್ಯವಾಗಿದೆ ಎಂದು ನಾಗನೂರ ರುದ್ರಾಕ್ಷಿಮಠದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಸದಾಶಿವನಗರದ ಚಿಂದೋಡಿಲೀಲಾ ರಂಗಮಂದಿರದಲ್ಲಿ ಭಾನುವಾರ ದಿ. 1 ರಂದು ನಗರದ  ವೀರೇಶ್ವರ ನಾಟ್ಯಸಂಘ ಬಾಗಲಕೋಟ ಇವರು ಕಲಾವಿದರ ಮಕ್ಕಳ ಶಿಕ್ಷಣ ಸಹಾಯಾರ್ಥವಾಗಿ ಹಮ್ಮಿಕೊಂಡಿದ್ದ ಕಿವುಡ ಮಾಡಿದ ಕಿತಾಪತಿ ನಾಟಕವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನವರಸಗಳಿಂದ ಕೂಡಿದ ವೃತ್ತಿ ರಂಗಭೂಮಿ ನಾಟಕಗಳು ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗುತ್ತವೆ.  ಗ್ರಾಮೀಣ ಭಾಗದ ಜನರಿಗೆ ಮೊದಲು ಮನರಂಜನೆಯೆಂದರೆ ನಾಟಕವೊಂದೇ ಆಗಿತ್ತು. ಸಮಾಜದಲ್ಲಿ  ನಡೆಯುವ ಲೋಪದೋಷಗಳನ್ನು ಎತ್ತಿ ಹಿಡಿದು. ಸನ್ಮಾರ್ಗದಲಿ ಜನರನ್ನು ಕರೆದೊಯ್ಯುವದೇ ನಾಟಕದ ಮುಖ್ಯ ಉದ್ದೇಶವೆಂದು ಅವರು ಹೇಳಿದರು.

ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು  ವೃತ್ತಿರಂಗ ಭೂಮಿಯಿಂದ ಜೀವನ ನಡೆಸುವುದು ತುಂಬ ಕಷ್ಟದ ಕೆಲಸವಾಗಿದೆ.  ಈ ಕಲಾವಿದರ ಮಕ್ಕಳ ಶಿಕ್ಷಣ ಸಹಾಯಾರ್ಥವಾಗಿ ಈ ನಾಟಕವನ್ನು ಹಮ್ಮಿಕೊಂಡಿರುವ ವೀರೇಶ್ವರ  ನಾಟ್ಯ ಸಂಘದ ಕಾರ್ಯ ಶ್ಲಾಘನೀಯವಾದುದು. ಕಲಾವಿದರನ್ನು ಕಷ್ಟ ಕಾಲದಲ್ಲಿ ಸಹಾಯ ಮಾಡಿ ಕಲಾವಿದರನ್ನು ಎತ್ತಿ ಹಿಡಿಯುವುದು ಸಮಾಜದ ಕರ್ತವ್ಯವಾಗಿದೆ ಎಂದು ಹೇಳಿದರು.

ಕಲಾವಿದರ ಮಕ್ಕಳ ಶಿಕ್ಷಣ ಸಹಾಯ ಮಾಡಿದ  ಡಿ. ಎಸ್. ಕಲ್ಲತ್ರಿ, ಎಸ್. ಎಂ. ಕೋಲಕಾರ  ಬಸವರಾಜ ಸಸಾಲಟ್ಟಿ, ಸರಳಾ ಹೇರೆಕರ, ಡಾ. ಎಚ್. ಆಯ್ ತಿಮ್ಮಾಪೂರ, ಗುರುನಗೌಡ ಪಾಟೀಲ, ರಾವ್ಸಾಹೇಬ ಪಾಟೀಲ, ಎಸ್. ಮುತಾಲಿಕದೇಸಾಯಿ, ಶಂಕರ ಅರಕೇರಿ,ಚಂದ್ರಶೇಖರ ಕೋತಿನ, ಹನಮಂತ ಸಂಶಿ, ಪ್ರಕಾಶ ಚೆನ್ನಾಳ,  ದಾದು ಶೇಠ, ರವೀಂದ್ರ ತೋಟಿಗೇರ, ಅಪ್ಪಣ್ಣಗೌಡ ಪಾಟೀಲ, ಈರಣ್ಣ ಮದವಾಲ, ಬಿ. ಎ. ಪಾಟೀಲ ಡಿ.ಎನ್. ಕಾಂಬಳೆ, ಡಾ. ಮನೋಹರ, ಎಚ್. ಬಿ. ವಿರಕ್ತಮಠ ಮುಂತಾದ ಮಹನೀಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಶ್ರೀಮಂತ ಹಾಗೂ ಬಡವರ್ಗದವರ ನಡುವಿನ ಸಂಘರ್ಷವನ್ನೇ ಹಾಸ್ಯರೂಪವಾಗಿ  ಬಿಚ್ಚಿಡುವ ಕಿವುಡ ಮಾಡಿದ ಕಿತಾಪತಿ ನಾಟಕ ಎಲ್ಲರನ್ನು ಸುಮಾರು ಎರಡು ಗಂಟೆಗಳಲ್ಲಿ ನಗೆಗಡಲಲ್ಲಿ ತೇಲಿಸುವಲ್ಲಿ  ಯಶಸ್ವಿಯಾಯಿತು. ಅಭಿನಯ  ನೆಳಲು ಬೆಳಕಿನ ವ್ಯವಸ್ಥೆ  ಚೆನ್ನಾಗಿತ್ತು.  ಮುಜುಗುರವನ್ನುಂಟು ಮಾಡುವಂತಹ ಸಂಭಾಷಣೆ ಕಡಿತಗೊಳಿಸಿದಲ್ಲಿ ಇದೊಂದು ಒಳ್ಳೆಯ ನಾಟಕವೆನ್ನುವುದರಲ್ಲಿ ಸಂಶಯವಿಲ್ಲ. 

ಮುಖ್ಯ ಅತಿಥಿಗಳಾಗಿ ಜಿಲ್ಲಾ ನಗರಾಭಿವೃದ್ಧಿ ಕಾರ್ಯನಿವರ್ಾಹಕ ಅಭಿಯಂತರ  ಮಹಾವೀರ ಗಣಿ ಆಗಮಿಸಿದ್ದರು. ಮುರುಗೇಶ ಶಿವಪೂಜಿ ಸ್ವಾಗತಿಸಿದರು.