ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ


ಲೋಕದರ್ಶನ ವರದಿ

ಬೆಳಗಾವಿ : ಮಹಾನಗರ ಪಾಲಿಕೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಗುರುವಾರ ಜರುಗಿದ್ದು, ತೆರಿಗೆ ನಿಧರ್ಾರಣಾ, ಹಣಕಾಸು ಹಾಗೂ ಅಪೀಲು ಸ್ಥಾಯಿ ಸಮಿತಿಗೆ ಪುಂಡಲೀಕ ರಾಮಾ ಪರೀಟ ಆಯ್ಕೆಯಾಗಿದ್ದಾರೆ ಎಂದು ಪಾಲಿಕೆ ಮೇಯರ ಬಸಪ್ಪಾ ಚಿಕ್ಕಲದಿನ್ನಿ ಅಧಿಕೃತ ಘೋಷಣೆ ಮಾಡಿದರು.

ಗುರುವಾರ ಪಾಲಿಕೆ ಸಭಾಂಗಣದಲ್ಲಿ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಬೆಳಿಗ್ಗೆಯಿಂದಲೇ ನಾಮಪತ್ರ ಸಲ್ಲಿಕೆಯಾಗಿದ್ದವು. ಮಧ್ಯಾಹ್ನ 11.30 ಚುನಾವಣೆ ನಡೆದು ಪಾಲಿಕೆ ಮೇಯರ ನಾಮಪತ್ರಗಳನ್ನು ಪರಿಶೀಲಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲಿ ಮತ್ತೊಮ್ಮೆ ಮರಾಠಿ ಸದಸ್ಯರ ಕೈ ಮೇಲಾಗಿದೆ. ಸಾರ್ವಜನಿಕ ಆರೋಗ್ಯ ಶಿಕ್ಷಣ ಸಾಮಾಜಿಕ ನ್ಯಾಯ ಸಮಿತಿಗೆ ಸುಧಾ ಮನೋಹರ ಭಾತಕಾಂಡೆ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಬಾಂದುಗರ್ೆ ಮನೋಹರ ಮಷ್ಣು, ಹಾಗೂ ಲೆಕ್ಕಗಳ ಸ್ಥಾಯಿ ಸಮಿತಿಗೆ ವೈಶಾಲಿ ರವೀಂದ್ರ ಹುಲಜಿ ಆಯ್ಕೆಯಾಗಿದ್ದಾರೆ ಎಂದು ಪಾಲಿಕೆಯ ಮೇಯರ್ ಘೋಷಣೆ ಮಾಡಿದರು.

ಸಭೆಯಲ್ಲಿ ಕನ್ನಡಿಗರ ನಗರ ಸೇವಕರ ಗೈರು ಸಂಖ್ಯೆ ಹೆಚ್ಚಾಗಿ ಕಂಡಿತ್ತು ಅಲ್ಲದೆ ಸ್ಥಾಯಿ ಸಮಿತಿಯ ಅಧ್ಯಕ್ಷರ ಸ್ಥಾನಗಳು ಮರಾಠಿಗರ ಪಾಲಾಯಿತು. ಉಪಮೇಯರ ಮದುಶ್ರೀ ಪೂಜಾರಿ, ಕೆಲವು ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.