ಚನ್ನಬಸವ ಸ್ವಾಮೀಜಿ ಮಹಾವಿದ್ಯಾಲಯದ ಉತ್ತಮ ಫಲಿತಾಂಶ

30 ಎಂ.ಎನ್.ಎಲ್. 2 (ಕಲಾ ವಿಭಾಗ)


ಮುನವಳ್ಳಿ 03: ಪಟ್ಟಣದ ಚನ್ನಬಸವ ಸ್ವಾಮೀಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬಿ.ಎ.ಬಿಕಾಂ.ಅಂತಿಮ ವರ್ಷದ ಫಲಿತಾಂಶ ಪ್ರಕಟವಾಗಿದ್ದು ಉತ್ತಮವಾಗಿದೆ.

ಕಲಾ ವಿಭಾಗದಲ್ಲಿ ಪ್ರೇಮಾ ಪಾಟೀಲ ಶೇ. 87.04 ಅಂಕ ಪಡೆದು ಪ್ರಥಮ, ಪ್ರೀತಿ ಸಿದ್ದನ್ನವರ ಶೇ. 86.42 ದ್ವಿತೀಯ, ಲಕ್ಷ್ಮಣ ಸುಣಧೋಳಿ ಶೇ. 82.21 ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪ್ರಕಾಶ ಅವಟೆ ಶೇ. 83.51 ಅಂಕ ಪಡೆದು ಪ್ರಥಮ, ಪ್ರಶಾಂತ ಕಡಿ ಶೇ. 77 ದ್ವಿತೀಯ, ವಿಜಯಲಕ್ಷ್ಮೀ ಮಠಪತಿ ಶೇ. 76.05 ತೃತೀಯ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಪ್ರೀತಿ ಸಿದ್ದನ್ನವರ ಶಿಕ್ಷಣ ಶಾಸ್ತ್ರದಲ್ಲಿ 6 ಸೆಮಿಸ್ಟರನಲ್ಲಿ 100 ಕ್ಕೆ 100 ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ.

 ಇವರ ಸಾಧನೆಗೆ ಸಂಸ್ಥೆಯ ಅಡಳಿತ ಮಂಡಳಿ ಹಾಗೂ ಪ್ರಾಚಾರ್ಯ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.