ಲೋಕದರ್ಶನ ವರದಿ
ಬಳ್ಳಾರಿ03: ಬಳ್ಳಾರಿ ವಲಯದ ಅರಣ್ಯಧಿಕಾರಿಗಳು ಖಚಿತ ಮಾಹಿತಿಮೆರೆಗೆ ಗುಳ್ಳೆ ನರಿಗಳನ್ನು ಹಿಡಿದು ಅದನ್ನು ಹತ್ಯೆಮಾಡಿ ಮಾಂಸವನ್ನು ಮಾರುವ ಸುದ್ದಿ ಖಚಿತ ಪಡಿಸಿಕೊಂಡು ಸಿರುಗುಪ್ಪ ತಾಲೂಕಿನ ಕುರುವಳ್ಳಿಯಿಂದ ಮಿಟ್ಟೆಸೂಗೂರಿಗೆ ಹಾದು ಹೋಗುವ ಬಂಡೆಜಾಡು ಮಾರ್ಗದ ಸಮೀಪ ಇಬ್ಬರು ಆರೋಪಿಗಳನ್ನು ಸೆರೆ ಹಿಡಿದು ದಸ್ತಗಿರಿ ಮಾಡಿ ಬಂಧಿಸಿದ್ದಾರೆ.
ನಂತರ ಬಂಧಿನ ಆರೋಪಿಗಳಿಂದ ಈಟಿ ಹಾಗೂ ಇತರ ಸಲಕರಣೆಗಳು 2 ಗುಳ್ಳೆನರಿಗಳನ್ನು ಅರಣ್ಯಧಿಕಾರಿಗಳ ಮಾಹಿತಿ ಪ್ರಕಾರ ಆರೋಪಿಗಳಾದ ಜೆ.ಪೆದ್ದ ಜಂಬಣ್ಣ ತಂದೆ ಮಿಡ್ಡಿ ಮಾರೆಪ್ಪ 43 ಮತ್ತು ಬುಡಗ ಜಂಗಾಲ ಟಿ.ಪೊಟ್ಟಣ್ಣ ತಂದೆ ಮಿಡ್ಡಿ ಮಾರೆಪ್ಪ 47, ಎಂದು ತಿಳಿದು ಬಂದಿದೆ.
ಈ ಇಬ್ಬರು ಆರೋಪಿಗಳು ಬಂಡಿ ಜಾಡು ಪ್ರದೇಶದಲ್ಲಿ ಗುಳ್ಳೆ ನರಿಗಳನ್ನು ಬ್ಭೆಟಿಯಾಡಿ ಅದರ ಮಾಂಸ ಮತ್ತು ಚರ್ಮವನ್ನು ಮಾರಾಟ ಮಾಡಲು ಎರಡು ಮೊಟಾರ್ ಬೈಕ್ ಗಳನ್ನು ಬಳಸುತ್ತಿದ್ದರು. ಇವುಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ಈ ಇಬ್ಬರು ಆರೋಪಿಗಳು ಆಂದ್ರ ಮುಲದ ಕೌತಾಳಂ ತಾಲೂಕಿನವರಾಗಿದ್ದು ಇದು ಕನರ್ೂಲು ಜಿಲ್ಲೆಯಲ್ಲಿ ಬರುತ್ತದೆ. ಈ ವ್ಯೆಕ್ತಿಗಳನ್ನು ವನ್ಯಜೀವಿ ಸಂರಕ್ಷಣಾ ಖಾಯ್ದೆ ಅಡಿ ಬಂದಿಸಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.