ನಕಲಿ ವೈದ್ಯರ ಕ್ಲಿನಿಕ್ಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಕಠಿಣ ಕ್ರಮಕೈಗೊಳ್ಳಲು ಡಿಸಿ ಸೂಚನೆ


ಹಾವೇರಿ12: ನಿಗಧಿತ ವಿದ್ಯಾರ್ಹತೆ, ಪ್ರಮಾಣಪತ್ರ, ನೋಂದಣಿ ಸೇರಿದಂತೆ ಯಾವುದೇ ಅರ್ಹತೆ ಇಲ್ಲದಿದ್ದರೂ ವೈದ್ಯರೆಂದು ಜನರನ್ನು ನಂಬಿಸಿ ಸಾರ್ವಜನಿಕರ ಜೀವನದೊಂದಿಗೆ ಚಲ್ಲಾಟವಾಡುತ್ತಿರುವ ನಕಲಿ ವೈದ್ಯರ ಪತ್ತೆ ಹಚ್ಚಿ ಕ್ಲಿನಿಕ್ಗಳನ್ನು ಬಂದಮಾಡಿ ಮೊಕದ್ದಮೆ ದಾಖಲಿಸುವಂತೆ ತಾಲೂಕಾ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಕಠಿಣ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಕುರಿತಂತೆ ದೂರುಗಳಿ ವರದಿಯಾಗುತ್ತಿವೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು.  ಅನಿರೀಕ್ಷಿತ ದಾಳಿಯ ಮೂಲಕ ನಕಲಿ ವೈದ್ಯರನ್ನು ಪತ್ತೆಮಾಡಿ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿ ಎಂದು ಸೂಚಿಸಿದರು. 

ಇಂತಹ ನಕಲಿ ವ್ಯಕ್ತಿಗಳಿಗೆ ಕ್ಲಿನಿಕ್ ನಡೆಸಲು ಬಾಡಿಗೆ ನೀಡಿರುವ  ಕಟ್ಟಡದ ಮಾಲಿಕರ ಮೇಲೂ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದರು.

ಕಾಯಕಲ್ಪ: ಉತ್ತಮ ಆರೋಗ್ಯ ಸೇವೆ, ವೈದ್ಯಕೀಯ ನಿರುಪಯುಕ್ತ ವಸ್ತುಗಳ ನಿರ್ವಹಣೆ, ಆಸ್ಪತ್ರೆಗಳ ಒಳ ಹಾಗೂ ಹೊರ ಆವರಣಗಳ ಸ್ವಚ್ಛತೆ ನಿರ್ವಹಣೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಯಕಲ್ಪ ಯೋಜನೆಯಡಿ ಆಯ್ಕೆಮಾಡಿ ಪ್ರಶಸ್ತಿಯ ಜೊತೆಗೆ ಅನುದಾನ ನೀಡುವ ವ್ಯವಸ್ಥೆಯನ್ನು ಕೇಂದ್ರ ಸಕರ್ಾರ ಜಾರಿಗೊಳಿಸಿದೆ.  ಕಾಯಕಲ್ಪ ಯೋಜನೆಗೆ ಅರ್ಹತೆ ಪಡೆಯಲು ಸದರಿ ಮಾನದಂಡಗಳಿಗೆ ಅನುಸಾರವಾಗಿ ಆಸ್ಪತ್ರೆಗಳ ನೈರ್ಮಲ್ಯ ಹಾಗೂ ಆರೋಗ್ಯ ಸೇವೆಗಳ ಸುಧಾರಣೆಗೆ ಸಜ್ಜುಗೊಳ್ಳುವಂತೆ ಎಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ಲಿನಿಕ್ ಕ್ಯಾಂಪಸ್ ಧ್ಯೇಯದೊಂದಿಗೆ ಕಟ್ಟಡದ ಸೌಂದಯರ್ಿಕರಣ , ಆಸ್ಪತ್ರೆಯ ವೈದ್ಯಕೀಯ ಉಪಕರಣಗಳ  ಉತ್ತಮ ನಿರ್ವಹಣೆ, ಪ್ರತಿದಿನ ಕನಿಷ್ಠ ಮೂರು ಸಲ ಆಸ್ಪತ್ರೆಯ ಶುಚಿಕರಣ ಕಾರ್ಯ, ಹೆರಿಗೆ ವಾಡರ್್ ಸೇರಿಂದತೆ ವಿವಿಧ ವಾಡರ್್ಗಳ ಸ್ವಚ್ಛ ನಿರ್ವಹಣೆಗೆ ಆದ್ಯತೆ, ವೈದ್ಯಕೀಯ ಸಿಬ್ಬಂದಿಗಳ ಸೌಜನ್ಯಯುತ ನಡವಳಿಕೆಗೆ ಪುನಶ್ಚೇತನ ಕಾರ್ಯಕ್ರಮದ ಜೊತೆಗೆ  ಆಸ್ಪತ್ರೆಯ ಕಟ್ಟಡದ ನಿರ್ವಹಣೆ, ಹೊರ ಆವರಣವನ್ನು ಹಸರೀಕರಣಗೋಳಿಸುವ ನಿಟ್ಟಿನಲ್ಲಿ  ಕಾರ್ಯಕ್ರಮಗಳನ್ನು ಹಾಕಿಕೊಂಡು ಕಾಲಮಿತಿಯೊಳಗೆ ಸ್ವಚ್ಛ, ಸ್ವಸ್ಥ, ಸರ್ವತ್ರ ದ್ಯೇಯದೊಂದಿಗೆ ಜಿಲ್ಲೆಯ ಎಲ್ಲ ಸಕರ್ಾರಿ ಆಸ್ಪತ್ರೆಗಳ ವೈದ್ಯರು ಆದ್ಯತೆಯ ಮೇಲೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಈ ಕಾರ್ಯಕ್ಕಾಗಿ ಆಸ್ಪತ್ರೆಯ ಅನುದಾನದ ಜೊತೆಗೆ ಸಾರ್ವಜನಿಕ ಸಂಘ-ಸಂಸ್ಥೆಗಳ ನೆರವು, ಸಂಸದರ ಹಾಗೂ ಶಾಸಕರ ಅನುದಾನ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿಗಳ ನೆರವಿನ ಜೊತೆಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಪಡೆಯಬಹುದಾಗಿದೆ. ಸ್ವಚ್ಛತೆ ಸಂಕಲ್ಪದೊಂದಿಗೆ ಕಾಯಕಲ್ಪ ಪ್ರಶಸ್ತಿ ಪಡೆಯುವ ಗುರಿಹಾಕಿಕೊಂಡು ಕಾರ್ಯನಿರ್ವಹಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಯಕಲ್ಪ ತಂಡದ ಸಮೀಕ್ಷೆಯಂತೆ ಜಿಲ್ಲಾ ಆಸ್ಪತ್ರೆ ಈ ವರ್ಷದ ಕಾಯಕಲ್ಪ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಗುರಿ ಹೊಂದಲಾಗಿದೆ. ಬ್ಯಾಡಗಿ ಹಾಗೂ ಹಾವೇರಿ ಕ್ರಮವಾಗಿ ಕಾಯಕಲ್ಪದಡಿ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿವೆ.  ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆಯಲು ಶೇ.70ರಷ್ಟು ಅಂಕಗಳನ್ನು ಪಡೆಯಬೇಕು. ಈ ಕಾರ್ಯಕ್ಕಾಗಿ ಕಾಯಕಲ್ಪದ ಮಾನದಂಡಂತೆ ವಿವಿಧ ವಿಭಾಗಗಳ ಪುನಶ್ಚೇತನಕ್ಕೆ ಕಾರ್ಯಕ್ರಮಗಳನ್ನು ಹಾಕಿಕೊಂಡು ಉತ್ತಮ ವಾತಾವರಣವನ್ನು ನಿಮರ್ಾಣಮಾಡಿ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಕಾಯರ್ೋನ್ಮುಖರಾಗಿ ಎಂದು ಸಲಹೆ ನೀಡಿದರು.

ತ್ವರಿತ ಸ್ಪಂದನೆ-ಸ್ಥಳ ಭೇಟಿ: ಮಳೆಗಾಲ ಆರಂಭಗೊಂಡಿರುವುದರಿಂದ ಸ್ವಚ್ಛತೆ ಇತರ ಕಾರಣಗಳಿಗಾಗಿ ಚಿಕನ್ಗುನ್ಯಾ, ಡೆಂಗ್ಯು, ಮಲೇರಿಯಾ ಇತರ ಸಾಂಕ್ರಾಮಿಕ ಪ್ರಕರಣಗಳು  ಅಲ್ಲಲ್ಲಿ ಕಂಡುಬರುತ್ತವೆ. ಸೊಳ್ಳೆಗಳ ನಿಯಂತ್ರಣ, ಸ್ವಚ್ಛತೆ ಹಾಗೂ ಶುದ್ಧ ನೀರು ಸೇವನೆ ಕುರಿತಂತೆ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ನಿರಂತರ ಫಾಗಿಂಗ್ ನಡೆಸುವ ನಿಟ್ಟಿನಲ್ಲಿ ಕ್ರಮವಹಿಸಿ ಆಶಾ ಆರೋಗ್ಯ ಕಾರ್ಯಕರ್ತರಿಂದ ಸವರ್ೇ ಕಾರ್ಯದ ಜೊತೆಗೆ ಸಾಂಕ್ರಾಮಿಕ ರೋಗಗಳ ಕುರಿತಂತೆ ಜನರಿಗೆ ಮುನ್ನೆಚ್ಚರಿಕೆ ನೀಡಿ ಡೆಂಗ್ಯು, ಚಿಕನ್ಗುನ್ಯಾ ಒಳಗೊಂಡಂತೆ ಯಾವುದೇ ಪ್ರಕರಣಗಳು ವರದಿಯಾದಲ್ಲಿ ಅಥವಾ ದೂರುಗಳು ಬಂದಲ್ಲಿ ತಕ್ಷಣವೇ ಜನರಿಗೆ ಸ್ಪಂದಿಸಿ ಯಾವುದೇ ಘಳಿಗೆಯಲ್ಲಾದರೂ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ನೈರ್ಮಲ್ಯ ಮತ್ತು ಸ್ವಚ್ಛತೆ ಕುರಿತಂತೆ ಜಾಗೃತಿ ಮೂಡಿಸಬೇಕು. ಪ್ರತಿ ವಾರಕ್ಕೊಮ್ಮೆ ಸಭೆ ನಡೆಸಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸುವಂತೆ ಸೂಚನೆ ನೀಡಿದರು.

ವಾಸೆಟ್ಮಿ ಆದ್ಯತೆ ನೀಡಿ: ತಾಯಿ ಹಾಗೂ ಮಗುವಿನ ಮರಣ ತಡೆಗೆ ಗರಿಷ್ಠ ಪ್ರಮಾಣದ ಮುನ್ನೆಚ್ಚರಿಕೆ ವಹಿಸಬೇಕು. ಸಾಂಸ್ಥಿಕ ಹೆರಿಗೆಗೆ ನಿರಂತರವಾದ ಜಾಗೃತಿ ಮೂಡಿಸಬೇಕು. ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯನ್ನು ಪುರುಷರಿಗೆ ವ್ಯಾಸಕ್ಟಮಿ ಕೈಗೊಳ್ಳಬೇಕು. ಪುರುಷರಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಮನವೊಲಿಸುವ ಆರೋಗ್ಯ ಕಾರ್ಯಕರ್ತರಿಗೆ ಪ್ರೋತ್ಸಾಹವಾಗಿ ಪ್ರಶಸ್ತಿ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

ಕಾಂಡೋಮ್ ವಿತರಣೆ ಹೆಚ್ಚಿಸಿ: ಏಡ್ಸ್ ಪ್ರಕರಣಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವ್ಯಾಪಕವಾಗಿ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಸುಲಭವಾಗಿ ಕಾಂಡೋಮ್ಗಳು ದೊರಕುವಂತೆ ವ್ಯವಸ್ಥೆಮಾಡಿ ಲಿಕ್ಕರ್ಶಾಪ್, ಬಸ್ ನಿಲ್ದಾಣ, ಚಲನಚಿತ್ರಮಂದಿರಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆಮಾಡಿ ಎಂದು ತಿಳಿಸಿದರು. ಈ ಕುರಿತಂತೆ ಏಡ್ಸ್ ಜಾಗೃತಿ ನೋಡಲ್ ಅಧಿಕಾರಿ ಸಭೆಗೆ ಮಾಹಿತಿ ನೀಡಿ ಕಳೆದ ಮೂರು ತಿಂಗಳ 2,36,349 ಕಾಂಡೋಮ್ಸ್ಗಳನ್ನು ವಿತರಿಸಲಾಗಿದೆ. ಈ ಅವಧಿಯಲ್ಲಿ 16 ಎಚ್.ಐ.ವಿ. ಪ್ರಕರಣಗಳು  ವರದಿಯಾಗಿರುವುದಾಗಿ ತಿಳಿಸಿದರು.

ಕ್ಷಯರೋಗ ಪತ್ತೆಗಾಗಿ ಕೈಗೊಂಡಿರುವ ಅಭಿಯಾನದಲ್ಲಿ ಪತ್ತೆಯಾದ ರೋಗಿಗಳಿಗೆ  ಸಕಾಲದಲ್ಲಿ ಚಿಕಿತ್ಸೆ ನೀಡಿ ಕ್ಷಯಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಎಲ್ಲ ವೈದ್ಯರು ಕಾಯರ್ೋನ್ಮುಖರಾಗುವಂತೆ ಸೂಚಿಸಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಾನಂದ, ಜಿಲ್ಲಾ ಶಸ್ತ್ರ ಚಿಕಿತ್ಸಕ  ಡಾ.ನಾಗರಾಜ ನಾಯಕ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಹಾಗೂ ವಿವಿಧ ತಾಲೂಕಾ ಆರೋಗ್ಯಾಧಿಕಾರಿಗಳು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.