ಲೋಕದರ್ಶನ ವರದಿ
ತಾಳಿಕೋಟೆ 06: ಪೋಲಿಸ್ ಠಾಣೆಗೆ ವಿಜಯಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಭೇಟಿ ನೀಡಿ ಠಾಣಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಇಲಾಖೆಯ ಪೂರ್ವ ನಿರ್ಧರಿತ ಪ್ರವಾಸದಂತೆ ವರಿಷ್ಠಾಧಿಕಾರಿಗಳಾದ ಪ್ರಕಾಶ ನಿಕ್ಕಂ ಅವರು ತಾಳಿಕೋಟಿ ಪೋಲಿಸ್ ಠಾಣೆಗೆ ಭೇಟಿ ನೀಡಿ ಠಾಣೆಯ ವ್ಯವಸ್ಥೆಯನ್ನು ಪರಿಶೀಲಿಸಿದರು. ಸಮಗ್ರ ಪರಿಶೀಲನೆಯ ನಂತರ ಠಾಣೆಯಲ್ಲಿಯ ಶಿಸ್ತು, ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧಗಳನ್ನು ನಿಯಂತ್ರಿಸಲು ತಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ನಂತರ ಪೊಲಿಸ್ ವಸತಿ ಗೃಹಕ್ಕೆ ಭೇಟಿ ನೀಡಿದ ಅವರು ಬಹುದಿನಗಳಿಂದ ಶಿಥಿಲಗೊಂಡಿರುವ ಕಟ್ಟಡದ ಕುರಿತು ಮಾಹಿತಿ ಪಡೆದುಕೊಂಡರು ಇದನ್ನು ಆದಷ್ಟು ಬೇಗ ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹೇಶಗೌಡ, ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್ಐ ಗೋವಿಂದಗೌಡ ಪಾಟೀಲ, ಎಎಸ್ಐ ಆರ್.ಎಸ್.ಭಂಗಿ, ಎಸ್.ಪಿ. ಹಿಪ್ಪರಗಿ, ಕೆ.ಬಿ.ರೆಡ್ಡಿ, ಸಿಬ್ಬಂದಿಗಳಾದ ಆರ್.ಎಸ್.ಒಡೆಯರ, ಬಸವರಾಜ ಬಲಕಲ್, ಎಂ.ಎನ್.ದೊಡಮನಿ, ಸಂಜು ಜಾಧವ, ಎಂ.ಎಲ್.ಪಟ್ಟೇದ ಉಪಸ್ಥಿತರಿದ್ದರು.