ಲೋಕದರ್ಶನ ವರದಿ
ತಾಳಿಕೋಟಿ 18: ಮಹಾನ್ಶರಣ ಅಂಬಿಗೇರ ಚೌಡಯ್ಯನವರ ಜಯಂತಿ ಜ.21ಕ್ಕೆ ವಿಜೃಂಬಣೆಯಿಂದ ಆಚರಿಸಲು ನಿರ್ಧರಿಸಿ ಸಮಾಜ ಬಾಂಧವರು ಜಯಂತಿ ಕಾರ್ಯಕ್ರಮದ ಸ್ಥಳವನ್ನು ಸ್ವಚ್ಛಗೊಳಿಸಿ ಸಿದ್ಧಪಡಿಸಿದರು.
ಶನಿವಾರ ತಾಳಿಕೋಟಿ ತಾಲೂಕಿನ ನಿಜಶರಣ ಅಂಬಿಗೇರ ಚೌಡಯ್ಯ ಸಮಾಜ ಭಾಂಧವರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಈ ಬಾರಿ ಜಯಂತಿಯನ್ನು ಬಹಳ ವಿಜೃಂಬಣೆಯಿಂದ ಆಚರಿಸಲು ನಿರ್ಧರಿಸಿ ವಿವಿಧ ಸಮೀತಿಗಳನ್ನು ರಚಿಸಿ ಜವಾಬ್ದಾರಿಯನ್ನು ಪದಾಧಿಕಾರಿಗಳಿಗೆ ವಹಿಸಿಕೊಡಲಾಯಿತು. ಇದೇ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ರಮೇಶ ಮೂಕಿಹಾಳ ಇವರ ನೇತೃತ್ವರಲ್ಲಿ ಕಾರ್ಯಕ್ರಮ ಜರಗುವ ಸ್ಥಳವನ್ನು ಪರಿಶೀಲಿಸಿ ಅದನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಪುರಸಭೆ ಸದಸ್ಯ ಪರಶುರಾಮ ತಂಗಡಗಿ, ಮಲ್ಲು ನಾಯ್ಕೋಡಿ, ಶಶಿಕಾಂತ ಮೂಕಿಹಾಳ, ಪತ್ರಕರ್ತ ಸುನೀಲ ಅಂಬಿಗೇರ, ರವಿ ಗುಡ್ನಾಳ, ಸಚೀನ ಗುಡ್ನಾಳ, ಪುರಸಭೆ ಆರೋಗ್ಯ ಕಿರಿಯ ಅಭಿಯಂತರ ಬಸವರಾಜ ಬೀಳಗಿ, ಭೀಮಣ್ಣ ಚಳ್ಳಗಿ, ಮೋಹನ ಅಂಬಿಗೇರ, ಬಸವರಾಜ ತಳವಾರ, ಶಿವು ಅಂಬಿಗೇರ ಮತ್ತಿತರರು ಉಪಸ್ಥಿತರಿದ್ದರು.